ಗ್ರಾಮ ಲೆಕ್ಕಿಗ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟ

ಉಡುಪಿ ಜಿಲ್ಲೆ ಸೇರಿದಂತೆ 10 ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗ ಹುದ್ದೆ ಭರ್ತಿಗೆ ಸರಕಾರ ಅಧಿಸೂಚನೆ ಹೊರಡಿಸಿದೆ.

ರಾಜ್ಯದ ಉಡುಪಿ, ಹಾಸನ ಸೇರಿದಂತೆ ಇತರ 10 ಜಿಲ್ಲೆಗಳಲ್ಲಿ ಒಟ್ಟು 355 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇವೆ‌

ರಾಜ್ಯ ಸರಕಾರ ಅಕ್ಟೋಬರ್ 25, 2021 ರಂದು ಅಧಿಸೂಚನೆ ಹೊರಡಿಸಿದ್ದು 10 ಜಿಲ್ಲೆಗಳ ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ನೇರ ನೇಮಕಾತಿಯ ಆದೇಶವನ್ನು ನೀಡಿದೆ.

ಹುದ್ದೆ : ಚಿಕ್ಕಬಳ್ಳಾಪುರ : 40
ಬೆಂಗಳೂರು ಗ್ರಾಮಾಂತರ : 11
ಉಡುಪಿ : 18
ರಾಮನಗರ : 01
ಚಿತ್ರದುರ್ಗ : 59
ಶಿವಮೊಗ್ಗ : 69
ಹಾಸನ : 34
ಮಂಡ್ಯ : 54
ರಾಯಚೂರು : 51
ದಾವಣಗೆರೆ : 18

ಆಸಕ್ತ ಅಭ್ಯರ್ಥಿಗಳು ಪಿಯುಸಿ ಅಥವಾ ಪದವಿ ಶಿಕ್ಷಣ ಹೊಂದಿರಬೇಕು. ವಯೋಮಿತಿ ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ. ಮೀಸಲಾತಿಯಂತೆ ನಿಯಮಾನುಸಾರ ವಯೋಮಿತಿ ಯಲ್ಲಿ ಸೂಕ್ತ ರಿಯಾಯಿತಿ ಇರುತ್ತದೆ. ಈ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡಲು ನೇರ ಸಂದರ್ಶನದ ಮೂಲಕ ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯದುಕುಮಾರ್ ಅವರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Leave a Comment

error: Content is protected !!