ಉಚಿತವಾಗಿ ಹೊಲಿಗೆಯಂತ್ರ ಪಡೆಯಲು ಈ ನಂಬರ್ ಗೆ ಕರೆ ಮಾಡಿ

By | 27/10/2021

ಬೆಂಗಳೂರು ಗ್ರಾಮಾಂತರ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಖಾದಿ ಗ್ರಾಮೋದ್ಯೋಗ ವಿಭಾಗದ ವತಿಯಿಂದ 2021-22 ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಭಾಗದ ಅರ್ಹ 309 ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ವಿವಿಧ ವೃತ್ತಿಪರ 84 ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆಗಳನ್ನು ವಿತರಿಸಲು ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಹಾಗೂ ಗ್ರಾಮ ಪಂಚಾಯತಿ ದೃಡೀಕರಣದೊಂದಿಗೆ 2021 ರ ನವೆಂಬರ್ 20 ರೊಳಗೆ ಸಂಬಂಧಿಸಿದ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಚೇರಿಗೆ ಸಲ್ಲಿಸುವುದು.

ಅರ್ಹತೆಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ( ಖಾಗ್ರಾ) ರವರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊದಲನೇ ಮಹಡಿ, ಕೆಎಸ್ ಟಿಐಡಿಸಿ ಗಾರ್ಮೆಂಟ್ಸ್ ತರಬೇತಿ ಕಟ್ಟಡ, ಬಾಂಬೆ ರೇಯನ್ ಫ್ಯಾಕ್ಟರಿ ಬಳಿ, ಕೆಐಎಡಿಬಿ ಅಪೆರಲ್ ಪಾರ್ಕ್, ದೊಡ್ಡಬಳ್ಳಾಪುರ – 561203 , ಕೈಗಾರಿಕಾ ವಿಸ್ತರಣಾಧಿಕಾರಿ, ದೊಡ್ಡಬಳ್ಳಾಪುರ/ ದೇವನಹಳ್ಳಿ, ಮೊ.ಸಂ: 9448844948 ಹಾಗೂ ಹೊಸಕೋಟೆ/ ನೆಲಮಂಗಲ ಮೊ.ಸಂ.9902740998 ನ್ನು ಸಂಪರ್ಕಿಸಬಹುದಾಗಿದೆ ಎಂದು ಖಾದಿ ಗ್ರಾಮೋದ್ಯೋಗ ವಿಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *