ಮೂಳೆ ದುರ್ಬಲಗೊಳ್ಳುವುದನ್ನು ತಪ್ಪಿಸಲು ಈ ಅಭ್ಯಾಸ ಬಿಡಿ

By | 28/10/2021

ವಯಸ್ಸಾದಂತೆ ಮೂಳೆಯ ದೌರ್ಬಲ್ಯದ ಸಮಸ್ಯೆ ಇರುತ್ತದೆ. ಆದರ ಇತ್ತೀಚಿನ ದಿನಗಳಲ್ಲಿ ಕಿರಿಯರು ಕೂಡಾ ಮೂಳೆ ದೌರ್ಬಲ್ಯದ ಬಗ್ಗೆ ದೂರುತ್ತಿದ್ದಾರೆ. ಮೂಳೆ ದುರ್ಬಲವಾದಾಗ ದೇಹವು ನೋವು ಮತ್ತು ಬಿಗಿತದಂತೆ ಆಗುತ್ತದೆ. ಇವುಗಳಿಗೆಲ್ಲ ಅದರದ್ದೇ ಆದ ಕಾರಣಗಳಿರಬಹುದು. ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯೂ ಸೇರಿರುತ್ತದೆ.

ಆಹಾರ ಸೇವನೆ, ಜೀವನಶೈಲಿ ಹಾಗೂ ಕೆಟ್ಟ ಅಭ್ಯಾಸಗಳು ಮೂಳೆಗಳ ದೌರ್ಬಲ್ಯಕ್ಕೆ ಪ್ರಬಲ ಕಾರಣವಾಗಿದೆ. ಮೂಳೆಗಳನ್ನು ಹಾನಿಗೊಳಿಸುವ ನಾವು ಮಾಡುವ ತಪ್ಪುಗಳು ಯಾವುದು ? ಬನ್ನಿ ತಿಳಿಯೋಣ

ಅತಿಯಾದ ಮದ್ಯ ಸೇವನೆ : ಅತಿಯಾದ ಮದ್ಯ ಸೇವನೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಏಕೆಂದರೆ ಹೆಚ್ಚು ಆಲ್ಕೋಹಾಲ್ ಕುಡಿಯುವುದರಿಂದ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದಾಗಿ ಮೂಳೆಗಳು ದುರ್ಬಲವಾಗುತ್ತದೆ.

ಅತಿಯಾದ ಕಾಫಿ ಸೇವನೆ : ಇದು ನಮ್ಮ ಮೂಳೆಗಳನ್ನು ದುರ್ಬಲಗೊಳಿಸಬಹುದು. ಕೆಫೀನ್ ಎಂಬ ಅಂಶ ಕಾಫಿಯಲ್ಲಿ ಅಧಿಕವಾಗಿದ್ದು, ಇದು ಮೂಳೆಗಳಲ್ಲಿ ಇರುವ ಕ್ಯಾಲ್ಸಿಯಂ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಮತೋಲಿತ ಪ್ರಮಾಣದಲ್ಲಿ ಕಾಫಿಯನ್ನು ಸೇವಿಸುವುದು ಉತ್ತಮ.

ಲಾಂಗ್ ಬೈಕ್ ರೈಡ್ : ವಾರಾಂತ್ಯದಲ್ಲಿ ಸಾಧಾರಣವಾಗಿ ಲಾಂಗ್ ರೈಡ್ ಗೆ ಹೋಗಲು ಬಯಸುತ್ತಾರೆ. ಇದು ನಿಮ್ಮ ನಿಮ್ಮ ಹೃದಯ ಹಾಗೂ ಶ್ವಾಸಕೋಶಗಳು ಬಲಗೊಳ್ಳಲು ಸಹಾಯ ಮಾಡುತ್ತದೆ. ಆದರೆ ಮೂಳೆಗಳಿಗೆ ಇದು ಅಷ್ಟು ಒಳ್ಳೆಯದಲ್ಲ. ತೂಕವನ್ನು ಹೊರುವ ಚಟುವಟಿಕೆಯಲ್ಲದ ಕಾರಣ ಬೈಕ್ ಸವಾರಿಯು ನಡಿಗೆಗಳು, ಓಟಗಳು ಮತ್ತು ಏರಿಕೆಗಳಂತೆ ನಿಮ್ಮ ಮೂಳೆ ಸಾಂದ್ರತೆಯನ್ನು ಹೆಚ್ಚಿಸುವುದಿಲ್ಲ. ಲಾಂಗ್ ಡ್ರೈವ್ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

ಅತಿಯಾಗಿ ಉಪ್ಪು ಸೇವಿಸುವುದು : ಇದೂ ಕೂಡಾ ಮೂಳೆಗಳನ್ನು ಹೆಚ್ಚು ದುರ್ಬಲಗೊಳಿಸುತ್ತದೆ. ಏಕೆಂದರೆ ಹೆಚ್ಚು ಉಪ್ಪು ತಿನ್ನುವುದರಿಂದ ಮೂತ್ರದ ಮೂಲಕ ಕ್ಯಾಲ್ಸಿಯಂ ದೇಹದಿಂದ ಹೊರ ಹೋಗುತ್ತದೆ. ಇದರಿಂದಾಗಿ ಕ್ರಮೇಣ ಮೂಳೆಗಳು ದುರ್ಬಲಗೊಳ್ಳುತ್ತದೆ. ನಾವು ಉಪ್ಪಿನ ಅತಿಯಾದ ಸೇವನೆಯನ್ನು ತಪ್ಪಿಸಬೇಕು.

ತಂಪುಪಾನೀಯದ ಅತಿಯಾದ ಸೇವನೆ : ತಂಪುಪಾನೀಯಗಳಲ್ಲಿ ಸೋಡಾ ಸಮೃದ್ಧವಾಗಿದೆ. ಹೆಚ್ಚು ತಂಪು ಪಾನೀಯ ಕುಡಿಯುವುದರಿಂದ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಫಾಸ್ಫೇಟ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮೂಳೆಗಳಿಗೆ ಸಾಕಷ್ಟು ಕ್ಯಾಲ್ಸಿಯಂ ಪಡೆಯುವುದನ್ನು ತಡೆಯುತ್ತದೆ. ಮೂಳೆಗಳು ಇದರಿಂದಾಗಿ ದುರ್ಬಲಗೊಳ್ಳುತ್ತದೆ.

ಧೂಮಪಾನ : ಇಂದಿನ ಜೀವನಶೈಲಿಯಲ್ಲಿ ಧೂಮಪಾನವು ಒಂದು ಫ್ಯಾಷನ್ ಆಗಿದೆ. ಧೂಮಪಾನವು ಮೂಳೆಕೋಶಗಳನ್ನು ಹಾನಿಗೊಳಿಸುತ್ತದೆ. ತಂಬಾಕು ನಮ್ಮ ದೇಹದ ಅಂಗಾಂಶಗಳಲ್ಲಿ ಒಂದು ರೀತಿಯ ನ್ಯೂಕ್ಲಿಯಸ್ ಅನ್ನು ಉತ್ಪಾದನೆ ಮಾಡುವುದರಿಂದ ಶ್ವಾಸಕೋಶ ಸೇರಿದಂತೆ ನಮ್ಮ ಮೂಳೆಗಳನ್ನು ಹಾನಿಗೊಳಿಸುತ್ತದೆ.

ಮೂಳೆಗಳು ದೇಹದ ರಚನೆ ಮತ್ತು ಸ್ನಾಯುಗಳನ್ನು ಕಂಟ್ರೋಲ್ ಮಾಡುತ್ತದೆ. ಅನೇಕ ಅಂಗಗಳನ್ನು ರಕ್ಷಿಸುತ್ತದೆ. ಇದರಿಂದಾಗಿ ನಾವು ಮೂಳೆಗಳ ಆರೈಕೆ ಮಾಡುವುದು ಬಹಳ ಮುಖ್ಯ. 30 ವರ್ಷದ ನಂತರ ಹೆಚ್ಚಿನ ಜನರು ಕಡಿಮೆ ಮೂಳೆ ಸಾಂದ್ರತೆಯನ್ನು ಹೊಂದಿರುತ್ತಾರೆ.

ಆಸ್ಟಿಯೊಪೊರೋಸಿಸ್‌ ಎಂಬ ಕಾಯಿಲೆಯು ಮೂಳೆಗಳ ದುರ್ಬಲಗೊಳ್ಳುವಿಕೆಯಿಂದ ಆಗುತ್ತದೆ. ಮತ್ತು ಮುರಿತಗಳ ಅಪಾಯವನ್ನು ಹೆಚ್ಚಿಸುತ್ತದೆ. ಮೂಳೆಗಳ ಬಲ ನಮ್ಮ ಜೀವನಶೈಲಿಯ ಮೇಲೆ ಇರುತ್ತದೆ. ನಾವು ನಮ್ಮ ಅಭ್ಯಾಸವನ್ನು ಬದಲಾಯಿಸುವ ಮೂಲಕ ಮೂಳೆಗಳ ಶಕ್ತಿ ಹೆಚ್ಚಿಸಬಹುದು.

Leave a Reply

Your email address will not be published. Required fields are marked *