CBSE ಗೆ ಪರೀಕ್ಷಾ ಶುಲ್ಕ ವಾಪಸಾತಿ ನಿರ್ಧರಿಸಲು ಕೋರ್ಟ್ ಸೂಚನೆ

ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಳಿಸಿದ ಕಾರಣ 10 ನೇ ತರಗತಿ ಹಾಗೂ 12 ನೇ ತರಗತಿ ಪರೀಕ್ಷಾ ಶುಲ್ಕವನ್ನು ವಾಪಸಾತಿ ಕುರಿತು ಎಂಟು ವಾರಗಳಲ್ಲಿ ನಿರ್ಧರಿಸಿ ಎಂದು ಸಿಬಿಎಸ್ ಇ ( ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ)ಗೆ ದಿಲ್ಲಿ ಹೈಕೋರ್ಟ್ ಸೂಚನೆ ನೀಡಿದೆ.

ಸಿಬಿಎಸ್ ಇ ಮಾನ್ಯತೆ ಪಡೆದ ಶಾಲೆಯೊಂದರಲ್ಲಿ ಓದುತ್ತಿರುವ 10 ನೇ ತರಗತಿ ವಿದ್ಯಾರ್ಥಿಯ ತಾಯಿಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಪ್ರತೀಕ್ ಜಲನ್ ” ಪರೀಕ್ಷಾ ಶುಲ್ಕ ವಾಪಸ್ ನೀಡುವ ಕುರಿತು ನಿರ್ಧರಿಸಿ” ಎಂದು ಸೂಚಿಸಿದರು‌.

ಶುಲ್ಕ ವಾಪಸಾತಿ ನಿರ್ಧಾರವು ಸಿಬಿಎಸ್ ಇ ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಸಮಾಧಾನ ಆಗುವಂತಿರಬೇಕು ಎಂದು ನ್ಯಾಯಮೂರ್ತಿ ಸಲಹೆ ನೀಡಿದ್ದಾರೆ.

Leave a Comment

error: Content is protected !!