Category Archives: Real Estate

ಇ-ಆಸ್ತಿ ಪರಿಚಯಿಸುತ್ತಿದೆ BBMP- ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವವರು ತಪ್ಪದೇ ಓದಿ

By | 18/09/2021

ಬೆಂಗಳೂರು: ಬೆಂಗಳೂರಿನಲ್ಲಿ ಇ-ಖಾತೆ ಹೊಂದುವುದು ಸದ್ಯದಲ್ಲೇ ಸಾಧ್ಯವಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜ್ಯ ಇ-ಆಡಳಿತ ವಿಭಾಗ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಬಿಬಿಎಂಪಿಗೆಂದೇ ರೂಪಿಸಿದ ಇ-ಆಸ್ತಿ ಎಂಬ ಹೊಸ ಸಾಫ್ಟ್‌ವೇರ್ ಅನ್ನು ಪರಿಚಯಿಸಲು ಮುಂದಾಗಿದೆ. ಇದನ್ನು ಕಾವೇರಿ ಎಂಬ ಇನ್ನೊಂದು ಅಪ್ಲಿಕೇಶನ್‌ನೊಂದಿಗೆ ಸಂಯೋಜಿಸಲಾಗಿದೆ. ಬಿಬಿಎಂಪಿಯು ಇದನ್ನು ಬೆಂಗಳೂರಿನ ಪೂರ್ವ ವಲಯದಲ್ಲಿ ಪಶ್ಚಿಮದಿಂದ ಪರಿಚಯಿಸಲು ಮುಂದಾಗಿದೆ ಮತ್ತು ಅಂತಿಮವಾಗಿ ನಗರದ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಸುಮಾರು 100 ವಾರ್ಡ್‌ಗಳನ್ನು ಒಳಗೊಳ್ಳಲಿದೆ. ಬಿಬಿಎಂಪಿಯ ಈ ಮಹತ್ವದ ಕ್ರಮವು ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಪಾರದರ್ಶಕತೆಯನ್ನು… Read More »

ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ಖರೀದಿಸಲು ಯಾರಿಗೆ ಎಷ್ಟು ಸಬ್ಸಿಡಿ ; ಸಂಪೂರ್ಣ ಸುದ್ದಿ ಇಲ್ಲಿದೆ

By | 18/09/2021

ಇತ್ತೀಚಿನ ಕಾಲದಲ್ಲಿ ಬಾಡಿಗೆ ಮನೆಗಿಂತ ಸ್ವಂತ ಮನೆ ಲಾಭದಾಯಕ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದು ಹೇಗೆ ಎಂಬುದಾಗಿ ನೀವು ಕೇಳಬಹುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕ್ರೆಡಿಟ್ ಲಿಂಕ್ ಸಬ್ಸಿಡಿಯಡಿ ವ್ಯಕ್ತಿ ಸ್ವಂತ ಮನೆಗಾಗಿ ಆಕರ್ಷಕ ಬಡ್ಡಿಯ ಸಬ್ಸಿಡಿ ಪಡೆಯಬಹುದು. ಈ ಯೋಜನೆ ಕುಟುಂಬದ ವಾರ್ಷಿಕ ಆದಾಯದ ಆಧಾರದಲ್ಲಿ ಅರ್ಜಿದಾರರನ್ನು ಈ ಕೆಳಗಿನಂತೆ ವಿಭಾಗಿಸುತ್ತದೆ. ‌ನಿಮ್ಮ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ. ತನಕ ಇದ್ದರೆ ಆಗ ನೀವು ಆರ್ಥಿಕವಾಗಿ ಹಿಂದುಳಿದ ವರ್ಗ ( EWS) ವಿಭಾಗದಡಿ ಬರುತ್ತೀರಿ.… Read More »

ನಿಮ್ಮ ಜೊತೆ ನಿಮ್ಮ ಮನೆಗೂ ಮಾಡಿ ಗೃಹ ವಿಮೆ

By | 01/08/2021

ಸುದ್ದಿಜಾಲ ಹಿಂದಿನ ಲೇಖನದಲ್ಲಿ ಗೃಹಸಾಲದ ಮೇಲೆ ವಿಮೆ ಯಾಕೆ ಅಗತ್ಯವೆಂದು ತಿಳಿದುಕೊಂಡೆವು. ಈ ಲೇಖನದಲ್ಲಿ ಮನೆಗೆ ಯಾಕೆ ವಿಮೆ ಅಗತ್ಯ ಎಂಬ ಮಾಹಿತಿ ತಿಳಿದುಕೊಳ್ಳೋಣ.

ಹೋಮ್‌ ಲೋನ್‌ ಮೇಲೆ ವಿಮೆ ಯಾಕೆ ಅಗತ್ಯ?

By | 01/08/2021

ಕೋವಿಡ್-19 ಸಮಯದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಸವಾಲು, ಸಂಕಷ್ಟ. ಉದ್ಯೋಗವಿಲ್ಲದೆ, ವ್ಯವಹಾರವಿಲ್ಲದೆ ಇಎಂಐ ಕಟ್ಟಲಾಗದ ಪರಿಸ್ಥಿತಿ ಒಂದೆಡೆಯಾದರೆ, ಸಾಲ ಮಾಡಿದ ವ್ಯಕ್ತಿ ಗತಿಸಿಹೋದರೆ ಆಗುವ ಪರಿಣಾಮ ಇನ್ನೊಂದು ರೀತಿಯದು. ಗೃಹಸಾಲ ಪಡೆದವರು ಗತಿಸಿದರೆ ಸಂಗಾತಿಗೆ ಪ್ರೀತಿಪಾತ್ರರ ಅಗಲಿಕೆಯ ನೋವಿನ ಜೊತೆಗೆ ಅಗಲಿದವರ ಋಣಭಾರಕ್ಕೂ ಹೆಗಲು ನೀಡಬೇಕಾಗುತ್ತದೆ. ಗ ಬೆಂಗಳೂರಿನ ಎಕ್ಸ್ (ಉದ್ದೇಶಪೂರ್ವಕವಾಗಿ ಹೆಸರು ಉಲ್ಲೇಖಿಸಿಲ್ಲ) ಎಂಬ ವ್ಯಕ್ತಿಯು ಗೃಹಸಾಲ ತೆಗೆದುಕೊಂಡಿದ್ದರು. ಗೃಹಸಾಲ ಮಾಡಿ ಸುಮಾರು ಆರು ವರ್ಷಗಳಾಗಿದ್ದವು. ದೊಡ್ಡ ಮೊತ್ತದ ಡೌನ್‍ಪೇಮೆಂಟ್ ಮಾಡಿದ್ದರು. ಸಾಲ ಬೇಗ ಮುಗಿಸುವ ಉದ್ದೇಶದಿಂದ ದೊಡ್ಡ ಮೊತ್ತದ… Read More »

Apartment Buying tips: ಅಪಾರ್ಟ್‌ಮೆಂಟ್‌ ಖರೀದಿಸುವಾಗ ಮೇಲಿನ ಮತ್ತು ಕೆಳಗಿನ ಮಹಡಿಗಳಲ್ಲಿ ಖರೀದಿಗೆ ಯಾವುದು ಸೂಕ್ತ?

By | 08/03/2021

ಅಪಾರ್ಟ್‌ಮೆಂಟ್‌ ಖರೀದಿಸುವಾಗ ನೀವು ಮೇಲಿನ ಮಹಡಿ ಅಥವಾ ಕೆಳಗಿನ ಮಹಡಿಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಇವೆರಡರಲ್ಲಿಯೂ ತನ್ನದೇ ಆದ ಗುಣ ಮತ್ತು ಅವಗುಣಗಳಿವೆ. ಮುಂಬಯಿ ನಿವಾಸಿ ನೇಹಾ ವಾಸನಿಯು ಅಪಾರ್ಟ್‌ಮೆಂಟ್‌ನಲ್ಲಿ 26ನೇ ಮಹಡಿಯಲ್ಲಿ ಮನೆ ಖರೀದಿಸಿದ್ದರು. ಲಾಕ್‌ಡೌನ್‌ ಸಮಯದಲ್ಲಿ ವರ್ಕ್‌ ಫ್ರಮ್‌ ಹೋಮ್‌ನಿಂದಾಗಿ ಮನೆಯಲ್ಲಿಯೇ ಬಾಲ್ಕನಿಯಲ್ಲಿ ಕುಳಿತು ಹಾಯಾಗಿ ಹೊರಗಡೆ ನೋಡುತ್ತ ಕೆಲಸ ಮಾಡುತ್ತಿದ್ದರು. ‘ಮೇಲ್ಮಡಿಯ ವಾಸಿಯಾಗಿ ನನಗೆ ನಗರದ ಅದ್ಭುತ ನೋಟ ದೊರಕಿದೆ. ಮಾಲಿನ್ಯದ ತೊಂದರೆಯೂ ಇಲ್ಲ. ನೈಸರ್ಗಿಕ ಬೆಳಕು ಮತ್ತು ಗಾಳಿ ಯಥೇಚ್ಛವಾಗಿರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.… Read More »

wooden flooring: ಮನೆಗೆ ವುಡನ್‌ ಫ್ಲೋರಿಂಗ್‌ ಮಾಡಿಸುವಿರಾ? ಹಾಗಾದರೆ ಇದನ್ನು ತಪ್ಪದೇ ಓದಿ

By | 08/03/2021

ಮನೆಯ ವಿವಿಧ ಕೊಠಡಿಗಳ ನೆಲದ ಆಕರ್ಷಣೆ ಹೆಚ್ಚಿಸುವಲ್ಲಿ ಬಳಸುವ ಫ್ಲೋರಿಂಗ್‌ ಮೆಟಿರಿಯಲ್‌ಗಳ ಪಾತ್ರ ಹಿರಿದಾದದ್ದು. ಇಟಲಿಯನ್‌ ಮಾರ್ಬಲ್‌, ಗ್ರಾನೈಟ್‌ ಮತ್ತು ಇತರೆ ಕಲ್ಲುಗಳು ನೆಲಕ್ಕೆ ಆಕರ್ಷಣೀಯ ಲುಕ್‌ ನೀಡುತ್ತವೆ. ವಿವಿಧ ಬಗೆಯ ಟೈಲ್ಸ್‌ಗಳಿಂದಲೂ ಮನೆಯ ನೆಲದ ಅಂದ ಹೆಚ್ಚಿಸಬಹುದು. ಕಲ್ಲುಗಳು ಮಾತ್ರವಲ್ಲದೆ ಮರದ ಫ್ಲೋರಿಂಗ್‌ ಕೂಡ ಈಗಿನ ಟ್ರೆಂಡಾಗಿದ್ದು, ಇಂತಹ ಮರದ ನೆಲವು ಮನೆಗೆ ಕ್ಲಾಸಿಕ್‌ ಲುಕ್‌ ನೀಡುವುದರ ಜೊತೆಗೆ ಹಿತವಾದ ಫೀಲ್‌ ಕೂಡ ನೀಡುತ್ತದೆ.ವುಡನ್‌ ಫ್ಲೋರಿಂಗ್‌ನಲ್ಲೂ ವೈವಿಧ್ಯಮಯ ಬಗೆಗಳಿವೆ. ಹಾರ್ಡ್‌ವುಡ್‌ ಫ್ಲೋರಿಂಗ್‌, ಲ್ಯಾಮಿನೇಟೆಡ್‌ ಫ್ಲೋರಿಂಗ್‌, ಮರದಂತೆ ಕಾಣಿಸುವ ವಿನೈಲ್‌ ಫ್ಲೋರಿಂಗ್‌… Read More »