NEET (UG)-2021 ರ ಪ್ರವೇಶಾತಿಗಾಗಿ ಆನ್ಲೈನ್ ಅರ್ಜಿ ಆಹ್ವಾನ : ಹೆಚ್ಚಿನ ವಿವರ ಇಲ್ಲಿದೆ

By | 15/07/2021

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಅಂಡರ್ ಗ್ರಾಜ್ಯುಯೇಟ್ ವೈದ್ಯಕೀಯ ಶಿಕ್ಷಣದ ಎಲ್ಲಾ ಸೀಟುಗಳಿಗೆ ನೀಟ್ (ಯುಜಿ)- 2021 ರ ಪ್ರವೇಶಾತಿಗಾಗಿ ಆನ್ಲೈನ್ ಅರ್ಜಿಗಳನ್ನು ಕರೆಯಲಾಗಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ , 2019 ರ ಸೆಕ್ಷನ್ 14 ರ ಅನ್ವಯ ಜಾರಿಯಲ್ಲಿರುವ ಯಾವುದೇ ಕಾನೂನಡಿಯಲ್ಲಿ ಆಡಳಿತ ನಡೆಸುವವರು ಸೇರಿದಂತೆ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಅಂಡರ್ ಗ್ರಾಜ್ಯುಯೇಟ್ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು, ನೀಟ್ (ಯುಜಿ) ಅನ್ನು ಸಾಮಾನ್ಯ ಮತ್ತು ಏಕರೂಪದ ರಾಷ್ಟ್ರೀಯ ಅರ್ಹತೆ – ಕಮ್ – ಪ್ರವೇಶ ಪರೀಕ್ಷೆ ( ನೀಟ್) ಆಗಿ ನಡೆಸಬೇಕು.

ನೀಟ್ (ಯುಜಿ) – 2021 ನ್ನು 13 ಭಾಷೆಗಳಲ್ಲಿ ಅಂದರೆ ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ವಿನಲ್ಲಿ ನಡೆಸಲಾಗುವುದು.

ಅಭ್ಯರ್ಥಿಯ ಡೇಟಾವನ್ನು ಕ್ಷಿಪ್ರವಾಗಿ ಕಳುಹಿಸುವ ಖಾತ್ರಿಗಾಗಿ, ನೀಟ್ ( ಯುಜಿ) – 2021 ಕ್ಕಾಗಿ ಅರ್ಜಿ ನಮೂನೆಯನ್ನು ಎರಡು ಸೆಟ್/ಭಾಗಗಳಲ್ಲಿ ವಿಂಗಡಿಸಲಾಗಿದೆ. ಆನ್ಲೈನ್ ನಲ್ಲಿ ಅರ್ಜಿ ನಮೂನೆ ಸಲ್ಲಿಸುವ ಕಡೇ ದಿನಾಂಕದ ಮುನ್ನ ಮಾಹಿತಿಯ ಮೊದಲ ಸೆಟ್ ನ್ನು ಭರ್ತಿ ಮಾಡಬೇಕು. ಸರಿಯಾದ ಸಮಯದಲ್ಲಿ ನೀಟ್ ( ಯುಜಿ) ಪೋರ್ಟಲ್ ಮೂಲಕ ಪ್ರತ್ಯೇಕವಾಗಿ ಸೂಚಿಸಲಾಗುವ ಅವಧಿಯಲ್ಲಿ ಸ್ಕೋರ್ ಕಾರ್ಡ್ ಫಲಿತಾಂಶ/ಡೌನ್‌ಲೋಡ್ ಘೋಷಣೆಯ ಮೊದಲ ಅಭ್ಯರ್ಥಿಗಳು ಎರಡನೇ ಸೆಟ್ ನ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಎಲ್ಲಾ ಅಭ್ಯರ್ಥಿಗಳು ಲಭ್ಯತೆಯ ಸಮಯದಲ್ಲಿ ಅರ್ಜಿ ನಮೂನೆಯ ಪ್ರತಿ ಸೆಟ್ ನ ಮಾಹಿತಿಯನ್ನು ಭರ್ತಿ ಮಾಡಬೇಕು. ಯಾವುದೇ ‌ಮಾಹಿತಿಯ ಸೆಟ್ ನ್ನು ಭರ್ತಿ ಮಾಡದಿದ್ದಲ್ಲಿ, ಅವನ/ ಅವಳ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗುವುದು.

ನೀಟ್ (ಯುಜಿ) – 2021 ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ( ಸಸ್ಯಶಾಸ್ತ್ರ ಮತ್ತು ಪ್ರಾಣಿ ಶಾಸ್ತ್ರ ) ಗಳಿಂದ 180 ಬಹು ಸಂಖ್ಯೆಯ ಪ್ರಶ್ನೆಗಳುಳ್ಳ (ಎಂಸಿಕ್ಯೂಗಳು ) ಒಂದು ಪ್ರಶ್ನೆ ಪತ್ರಿಕೆಯನ್ನು ಹೊಂದಿರುತ್ತದೆ. ಪರೀಕ್ಷಾ ಚಟುವಟಿಕೆಗಳ ವೇಳಾಪಟ್ಟಿ ಕೆಳಕಂಡಂತಿವೆ :

ಆನ್ಲೈನ್ ನಲ್ಲಿ ಅರ್ಜಿ ನಮೂನೆ ಸಲ್ಲಿಕೆ : 13 ನೇ ಜುಲೈ 2021 ರಿಂದ 06 ನೇ ಆಗಸ್ಟ್ 2021( 11:50 ರವರೆಗೆ)
ಅರ್ಜಿ ಶುಲ್ಕದ ಯಶಸ್ವಿ ವಹಿವಾಟಿಗೆ ಕಡೇ ದಿನಾಂಕ : 07 ನೇ ಆಗಸ್ಟ್ 2021 (11:50 ರವರೆಗೆ)
ಅರ್ಜಿ ನಮೂನೆಯ ನಿಗದಿತ ಪರಿಷ್ಕರಣೆ : 08 ನೇ ಆಗಸ್ಟ್ 2021 ರಿಂದ 12 ನೇ ಆಗಸ್ಟ್ 2021 ರವರೆಗೆ
ಪರೀಕ್ಷಾ ನಗರದ ಘೋಷಣೆ : 20 ನೇ ಆಗಸ್ಟ್ 2021
ಎನ್ ಟಿಎ ವೆಬ್‌ಸೈಟ್‌ ನಿಂದ ಪ್ರವೇಶಾತಿ ಕಾರ್ಡ್ ಗಳ ಡೌನ್‌ಲೋಡಿಂಗ್ : ಪರೀಕ್ಷೆಗೆ 3 ದಿನಗಳ ಮುಂಚೆ ಬಿಡುಗಡೆಗೊಳಿಸಲಾಗುವುದು.
ಪರೀಕ್ಷಾ ದಿನಾಂಕ : 12 ನೇ ಸೆಪ್ಟೆಂಬರ್ 2021 ( ಭಾನುವಾರ)
ಪರೀಕ್ಷಾ ಅವಧಿ :180 ನಿಮಿಷಗಳು (03 ಗಂಟೆಗಳು)
ಪರೀಕ್ಷಾ ವೇಳೆ : ಮಧ್ಯಾಹ್ನ 2.00 ಗಂಟೆಯಿಂದ 5.00 ಗಂಟೆಯವರೆಗೆ

ಪರೀಕ್ಷೆಯ ವಿವರವಾದ‌ ಮಾಹಿತಿ, ಪಠ್ಯ ಕ್ರಮ, ಭಾಗವಹಿಸುವಿಕೆ/ ಪ್ರವೇಶಾತಿಗೆ ಅರ್ಹತಾ ಮಾನದಂಡ, ವಯಸ್ಸು, ಮೀಸಲಾತಿ, ಸೀಟುಗಳ ವರ್ಗೀಕರಣ, ಪರೀಕ್ಷಾ ಶುಲ್ಕ, ಪರೀಕ್ಷಾ ನಗರಗಳು, ಅರ್ಹತೆಯ ರಾಜ್ಯ ಕೋಡ್ ಇತ್ಯಾದಿಯು ಮಾಹಿತಿ ಬುಲೆಟಿನ್ ವೆಬ್‌ಸೈಟ್‌ https://neet.nta.nic.in/ ರಲ್ಲಿ ಲಭ್ಯ.

ಆಸಕ್ತ ಅಭ್ಯರ್ಥಿಗಳು ಅಪ್ ಡೇಟ್ ಗಳಿಗಾಗಿ ಎನ್ ಟಿಎ ಅಧಿಕೃತ ವೆಬ್‌ಸೈಟ್‌ ( www.nta.ac.in) ಮತ್ತು ( https://neet.nta.nic.in/) ನ್ನು ಆಗಿಂದಾಗ್ಗೆ ನೋಡುವುದು.

ನೀಟ್ ( ಯುಜಿ) -2021 ಕುರಿತ ಇತರೆ ಸ್ಪಷ್ಟೀಕರಣಕ್ಕೆ ಅಭ್ಯರ್ಥಿಗಳು ದೂ.011-40759000 ಗೆ ಕರೆಮಾಡಬಹುದು. ಅಥವಾ [email protected] ಗೆ ಇಮೇಲ್ ಮಾಡಿ

Leave a Reply

Your email address will not be published. Required fields are marked *