ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 11 ಹೊಸ ಕೋರ್ಸ್

By | 14/07/2021

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೊಸ 11 ಕೋರ್ಸ್ ಗಳನ್ನು ಪ್ರಾರಂಭಿಸಲು ಯುಜಿಸಿ ಅನುಮೋದನೆಯನ್ನು ನೀಡಿದೆ.

ವಿವರಗಳು ಈ ಕೆಳಗೆ ನೀಡಲಾಗಿದೆ : ಎಂ.ಎಸ್ಸಿ( ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಫುಡ್ ಆ್ಯಂಡ್ ನ್ಯೂಟ್ರಿಷಿಯನ್, ಇನ್ಫಾರ್ಮೇಶನ್ ಟೆಕ್ನಾಲಜಿ )
ಬಿಎಸ್ಸಿ ( ಜನರಲ್, ಇನ್ಫಾರ್ಮೇಶನ್ ಟೆಕ್ನಾಲಜಿ, ಹೋಂ ಸೈನ್ಸ್)
ಬಿಬಿಎ,ಬಿಸಿಎ,ಎಂಎ ( ಶಿಕ್ಷಣ)
ಎಂಎ ( ತೆಲುಗು) ದೂರಶಿಕ್ಷಣ ಕೋರ್ಸ್ ಗಳ ಆರಂಭಕ್ಕೆ ಯುಜಿಸಿ ತಜ್ಞರ ಸಮಿತಿ ಅನುಮೋದನೆ ನೀಡಿದೆ. ಈ ಸಂಬಂಧ ಯುಜಿಸಿಯಿಂದ ಅಧಿಕೃತ ಪತ್ರವೊಂದು ಬರುವುದು ಬಾಕಿ ಇದೆ.

ಜುಲೈನಲ್ಲಿ ಕೋರ್ಸ್ ಗಳ ಪ್ರವೇಶಾತಿ ಪ್ರಾರಂಭಿಸಲಾಗುವುದು. ವಿವಿ ಕಾರ್ಯನಿರ್ವಹಣೆಯನ್ನು ಗಮನಿಸಿ ಯುಜಿಸಿ 12 (ಬಿ) ಮಾನ್ಯತೆ ನೀಡಿದೆ.

ಕಳೆದ ಬಾರಿ ತೆರೆದ ಪುಸ್ತಕ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ಬಾರಿ ತೆರೆದ ಪುಸ್ತಕ ಪರೀಕ್ಷೆ ನಡೆಸುವುದಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *