Disclaimer ಹಕ್ಕು ನಿರಾಕರಣೆ

ಕನ್ನಡಿಗರಿಗೆ ಬೆಸ್ಟ್ ಶಿಕ್ಷಣ, ಉದ್ಯೋಗ, ಪ್ರವಾಸ, ಅಡುಗೆ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸರ್ಟಿಫಿಕೇಷನ್ ಕೋರ್ಸ್ ಗಳು ಸೇರಿದಂತೆ ವಿವಿಧ ಬಗೆಯ ಲೇಖನಗಳ ಮೂಲಕ ಮಾಹಿತಿ ಒದಗಿಸುವ ಉದ್ದೇಶದಿಂದ ಕರ್ನಾಟಕಬೆಸ್ಟ್.ಕಾಂ ರೂಪಿಸಲಾಗಿದೆ.

ನಮ್ಮ ಡಿಸ್ಕ್ಲೈಮರ್ ಅಥವಾ ಹಕ್ಕು ನಿರಾಕರಣೆ ಈ ಮುಂದಿನಂತೆ ಇದೆ.

ಇಲ್ಲಿರುವ ಲೇಖನಗಳು ಡಿಜಿಟಲ್ ಕಾಪಿರೈಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇಲ್ಲಿರುವ ಲೇಖನಗಳನ್ನು ನಕಲು ಮಾಡುವುದು, ಕದಿಯುವುದು ಅಥವಾ ಇದೇ ಮಾಹಿತಿಯನ್ನು ಮರುರೂಪಿಸುವುದು ಅಥವಾ ಇಲ್ಲಿರುವ ಮಾಹಿತಿಯನ್ನು ವಾಣಿಜ್ಯ ಅಥವಾ ಇತರೆ ಉದ್ದೇಶಗಳಿಗೆ ಬಳಸುವುದು ಅಪರಾಧವಾಗಿದೆ. ಇಲ್ಲಿರುವ ಮಾಹಿತಿಗಳು ಕರ್ನಾಟಕಬೆಸ್ಟ್.ಕಾಂ ಮೂಲಕ ಕನ್ನಡಿಗರ ಜ್ಞಾನರ್ಜನೆಗೆ ಮಾತ್ರ ಸೀಮಿತ. ಇಲ್ಲಿರುವ ಲೇಖನಗಳನ್ನು ಇತರೆ ಬ್ಲಾಗ್ ಗಳಿಗೆ, ವೆಬ್ ಸೈಟ್ ಗಳಲ್ಲಿ ಮರುಪ್ರಕಟಿಸಲು ಅವಕಾಶ ನೀಡಲಾಗುವುದಿಲ್ಲ.

ಪ್ರತಿಯೊಂದು ಲೇಖನಗಳ ಸತ್ಯಾಸತ್ಯತೆಗಳನ್ನು ಸಾಕಷ್ಟು ಪರಿಶೀಲಿಸಿ ಪ್ರಕಟಿಸಲಾಗುತ್ತದೆ. ಆದರೂ, ಯಾವುದಾದರೂ ತಪ್ಪುಗಳು, ಅಂಕಿಅಂಶಗಳಲ್ಲಿ ದೋಷಗಳು ಕಂಡುಬರಬಹುದು. ಇವುಗಳನ್ನು ಕಮೆಂಟ್ ಮೂಲಕ ತಿಳಿಸಿದರೆ ತಿದ್ದಿಕೊಳ್ಳಲಾಗುವುದು. ಇಲ್ಲಿ ಪ್ರಕಟವಾದ ಲೇಖನಗಳು ಆಯಾ ಲೇಖಕರ ಅಭಿಪ್ರಾಯಗಳಾಗಿರುತ್ತವೆ. ಲೇಖನಕ್ಕೆ ಸಂಬಂಧಪಟ್ಟಂತೆ ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ಸಂಶೋಧನೆ ಕೈಗೊಂಡು ರಚಿಸಲಾಗಿರುತ್ತದೆ. ಇಲ್ಲಿ ಪ್ರಕಟವಾದ ಲೇಖನಗಳು ಆಯಾ ಲೇಖಕರ ಅಭಿಪ್ರಾಯವೇ ಹೊರತು ಈ ವೆಬ್ಸೈಟ್ ನ ಅಭಿಪ್ರಾಯವಾಗಿರುವುದಿಲ್ಲ.

ಇಲ್ಲಿ ನೀಡಲಾಗುವ ಕೋರ್ಸ್ ಗಳ ವಿವರಗಳು, ವಿವಿಗಳು, ಶಿಕ್ಷಣ ಸಂಸ್ಥೆಗಳು, ಪ್ರವಾಸಿ ತಾಣಗಳು ಮತ್ತು ಇಂತಹ ವಸ್ತು ವಿಷಯದ ಕುರಿತಾದ ಅಭಿಪ್ರಾಯಗಳು ಸಹ ಲೇಖಕರದ್ದೇ ಆಗಿರುತ್ತವೆ. ಇಲ್ಲಿ ನೀಡಲಾಗುವ ಮಾಹಿತಿಗಳು ಸಲಹೆ ನೀಡುವ ಸಲುವಾಗಿರುತ್ತವೆ. ಇಲ್ಲಿರುವ ಮಾಹಿತಿಗಳನ್ನು ಅನುಸರಿಸುವವರು ಅದಕ್ಕೂ ಮೊದಲು ಮರುಪರಿಶೀಲನೆ ಅಥವಾ ಮೂರನೇ ಪಾರ್ಟಿಯಿಂದ ಅಭಿಪ್ರಾಯ ಸಂಗ್ರಹಿಸಬೇಕು. ಇಲ್ಲಿ ನೀಡಲಾದ ಮಾಹಿತಿಗಳು ಸಲಹೆಗಳು ಮಾತ್ರ ಆಗಿರುತ್ತವೆ. ಇದನ್ನು ಅನುಸರಿಸುವುದು ಆಯಾ ವ್ಯಕ್ತಿಯ ಸ್ವಂತ ರಿಸ್ಕ್ ಗೆ ಸಂಬಂಧಪಟ್ಟದ್ದಾಗಿರುತ್ತದೆ.

ಇಲ್ಲಿ ಧರ್ಮ, ರಾಜಕೀಯ, ಜಾತಿ ಇತ್ಯಾದಿ ಯಾವುದೇ ಮಾಹಿತಿಗಳನ್ನು ಪ್ರಕಟಿಸಲಾಗುವುದಿಲ್ಲ. ಇಂತಹ ಮಾಹಿತಿಗಳನ್ನು ಪ್ರಕಟಿಸಲು ಸಾಕಷ್ಟು ಇತರೆ ವೆಬ್ ಪುಟಗಳು ಇವೆ. ಇಲ್ಲಿ ಜ್ಞಾನಾರ್ಜನೆಯೇ ಪ್ರಮುಖವಾಗಿದೆ. ಇಲ್ಲಿರುವ ಮಾಹಿತಿಗಳ ಕುರಿತು ಯಾವುದೇ ತಕರಾರು ಇದ್ದರೆ ಇಲ್ಲಿರುವ ಸಂಪರ್ಕಿಸಿ ವಿಭಾಗದಲ್ಲಿ ತಿಳಿಸಬಹುದು.

ಇಲ್ಲಿ ನೀಡಲಾಗುವ ಮಾಹಿತಿಗಳು ಅಧ್ಯಯನದ ಫಲವೇ ಹೊರತು ಈ ಕ್ಷೇತ್ರದಲ್ಲಿ ವಿಶೇಷ ತಜ್ಞತೆ ಪಡೆದಿರುವುದಲ್ಲ. ಮಾಹಿತಿ ಹಂಚಿಕೊಳ್ಳುವ ಉದ್ದೇಶದಿಂದ ಪ್ರಕಟಿಸಲಾಗಿರುತ್ತದೆ.

ಕರ್ನಾಟಕಬೆಸ್ಟ್.ಕಾಂ ವೆಬ್ ತಾಣವನ್ನು ಮರುರೂಪಿಸುವುದು, ಹೊಸ ವಿಷಯಗಳನ್ನು ಸೇರಿಸುವುದು, ಬದಲಾವಣೆ ಮಾಡುವ ಹಕ್ಕು ಕರ್ನಾಟಕ ಬೆಸ್ಟ್.ಕಾಂ ಮಾಲೀಕರದ್ದಾಗಿರುತ್ತದೆ.

ಈ ಟೆಕ್ ಜಗತ್ತಿನಲ್ಲಿ ವೆಬ್ ತಾಣ ರೂಪಿಸುವುದು ಸರಳವೂ ಹೌದು. ಸವಾಲಿನ ಕೆಲಸವೂ ಹೌದು. ಇದಕ್ಕೆ ಸಂಬಂಧಪಟ್ಟಂತೆ ಡೊಮೈನ್, ಹೋಸ್ಟಿಂಗ್, ತಂತ್ರಜ್ಞಾನಗಳಿಗೆ ಸಾಕಷ್ಟು ಹಣ ವಿನಿಯೋಗಿಸಬೇಕಾಗುತ್ತದೆ. ಈ ತಾಣಕ್ಕೆ ಪ್ರಾಯೋಜಕರನ್ನು ಆಯ್ಕೆ ಮಾಡುವುದು, ಜಾಹೀರಾತು ಪ್ರಕಟಿಸುವುದು ಇತ್ಯಾದಿ ಮಾನಿಟೈಜೇಷನ್ ಅವಕಾಶಗಳನ್ನೂ ಬಳಸಿಕೊಳ್ಳಲಾಗುತ್ತದೆ. ಈ ಕುರಿತು ಪ್ರಶ್ನೆಗಳಿದ್ದರೆ ಸಂಪರ್ಕಿಸಿ ವಿಭಾಗದ ಮೂಲಕ ಸಂಪರ್ಕಿಸಬಹುದು.

ಕೊನೆಯದಾಗಿ, ಕನ್ನಡಿಗರಿಗೆ ಮುಖ್ಯವಾಗಿ ಗ್ರಾಮೀಣ ಭಾಗದ ಯುವಜನತೆಗೆ ಇತ್ತೀಚಿನ ಶಿಕ್ಷಣ, ಉದ್ಯೋಗ ಟ್ರೆಂಡ್ ನ ಮಾಹಿತಿ ನೀಡಿ ಅವರ ಬದುಕಿನಲ್ಲಿ ಹೊಸ ಬದಲಾವಣೆಗೆ ಸಾಥ್ ನೀಡಲು  ಕರ್ನಾಟಕ ಬೆಸ್ಟ್.ಕಾಂ ಬದ್ಧವಾಗಿರುತ್ತದೆ. ಇಲ್ಲಿ ಬಳಸಿರುವ ಮಾಹಿತಿ, ಚಿತ್ರಗಳ ಕುರಿತು ತಕರಾರು ಇದ್ದರೂ ಸಂಪರ್ಕಿಸಿ ವಿಭಾಗದ ಮೂಲಕ ಮಾಹಿತಿ ನೀಡಬಹುದು.

ಇಲ್ಲಿ ಪ್ರಕಟಿಸಿರುವ ಲೇಖನಗಳನ್ನು ಸಾಕಷ್ಟು ಜನರೊಂದಿಗೆ ಹಂಚಿಕೊಂಡರೆ ನಮಗೆ ಇನ್ನಷ್ಟು ಬರೆಯಲು ಪ್ರೋತ್ಸಾಹಿಸಿದಂತಾಗುತ್ತದೆ.

ಇಮೇಲ್ ಮೂಲಕ ಸಂಪರ್ಕ: karnatakabest1@gmail.com