ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗ, ಫೆಬ್ರವರಿ 10ರೊಳಗೆ ಅರ್ಜಿ ಸಲ್ಲಿಸಿ

By | 28/01/2022

ಕೊಡಗು ಕಿಮ್ಸ್‌ ಅಥವಾ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ರಾಜ್ಯದ ಪ್ರಮುಖ ವೈದ್ಯಕೀಯ ಸಂಸ್ಥೆಯಾಗಿದ್ದು, ಇಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ವಿಶೇಷ ಮಾಹಿತಿಯಿದು. (kims kodagu recruitment 2022) ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (ಕಿಮ್ಸ್‌ ಕೊಡಗು) ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

KODAGU INSTITUTE OF MEDICAL SCIENCES MADIKERI RECRUITMENTS

kims kodagu recruitment 2022 ಕೊಡಗು ಕಿಮ್ಸ್‌ನಲ್ಲಿ ಯಾವೆಲ್ಲ ಹುದ್ದೆಗಳಿವೆ?

ಪ್ರೊಫೆಸರ್‌-2, ಅಸೋಸಿಯೇಟ್‌ ಪ್ರೊಫೆಸರ್‌-6, ಅಸಿಸ್ಟೆಂಟ್‌ ಪ್ರೊಫೆಸರ್‌-14 ಮತ್ತು ಲೇಡಿ ಮೆಡಿಕಲ್‌ ಆಫೀಸರ್‌-2 ಸೇರಿದಂತೆ ಒಟ್ಟು 24 ಹುದ್ದೆಗಳಿವೆ. ಜನರಲ್‌ ಮೆಡಿಸಿನ್‌ನಲ್ಲಿಅಸೋಸಿಯೇಟ್‌ ಪ್ರೊಫೆಸರ್‌-4, ಅಸಿಸ್ಟೆಂಟ್‌ ಪ್ರೊಫೆಸರ್‌ 5,, ಕಮ್ಯುನಿಟಿ ಮೆಡಿಸಿನ್‌ನಲ್ಲಿಅಸಿಸ್ಟೆಂಟ್‌ ಪ್ರೊಫೆಸರ್‌-3, ಪಿಡಿಯಾಟ್ರಿಕ್ಸ್‌ ವಿಭಾಗದಲ್ಲಿಅಸೋಸಿಯೇಟ್‌ ಪ್ರೊಫೆಸರ್‌-1, ಅಸಿಸ್ಟೆಂಟ್‌ ಪ್ರೊಫೆಸರ್‌-1, ಟಿಬಿ ಮತ್ತು ಚೆಸ್ಟ್‌ ವಿಭಾಗದಲ್ಲಿ1 ಪ್ರೊಫೆಸರ್‌ ಹುದ್ದೆಯಿದೆ. ಡೆರ್ಮಟೊಲಜಿ, ಆರ್ಥೊಪೆಡಿಕ್ಸ್‌, ಜನರಲ್‌ ಸರ್ಜರಿ, ಒಬಿಜಿ ಮತ್ತು ಅನೇಸ್ತಿಯಾಲಜಿ ವಿಭಾಗಗಳಲ್ಲಿತಲಾ 1ರಂತೆ 5 ಹುದ್ದೆಗಳಿವೆ. ಕಮ್ಯುನಿಟಿ ಮೆಡಿಸಿನ್‌ ವಿಭಾಗದಲ್ಲಿ2 ಲೇಡಿ ಆಫೀಸರ್‌ ಹುದ್ದೆಗಳಿವೆ.

ಹುದ್ದೆಗಳ ಮೀಸಲಾತಿ ಹೇಗೆ? ಯಾರು ಅರ್ಜಿ ಸಲ್ಲಿಸಬಹುದು?

ಪ್ರವರ್ಗ1ರಲ್ಲಿ ಮಹಿಳಾ ಅಭ್ಯರ್ಥಿಗೆ 1, ಗ್ರಾಮೀಣ ಅಭ್ಯರ್ಥಿಗೆ 1, ಪ್ರವರ್ಗ-2ಎನಲ್ಲಿಗ್ರಾಮೀಣ ಅಭ್ಯರ್ಥಿಗಳಿಗೆ 2, ವಿಶೇಷ ಚೇತನರಿಗೆ 1, ಪ್ರವರ್ಗ 3ಎನಲ್ಲಿಮಹಿಳಾ ಅಭ್ಯರ್ಥಿಗಳಿಗೆ 1 ಮತ್ತು ಎಸ್‌ಸಿ ಅಭ್ಯರ್ಥಿಗಳಲ್ಲಿಮಹಿಳಾ ಅಭ್ಯರ್ಥಿಗಳಿಗೆ 1, ಮಾಜಿ ಸೈನಿಕರಿಗೆ 1, ವಿಶೇಷ ಚೇತನರಿಗೆ 1 ಹುದ್ದೆ ಮೀಸಲಿರಿಸಲಾಗಿದೆ. ಎಸ್‌ಟಿ ಅಭ್ಯರ್ಥಿಗಳಲ್ಲಿ1 ಹುದ್ದೆಯನ್ನು ಮಹಿಳಾ ಅಭ್ಯರ್ಥಿಗೆ ಮೀಸಲಿರಿಸಲಾಗಿದೆ. ಕಲ್ಯಾಣ ಕರ್ನಾಟಕದ ಎಸ್‌ಟಿ ಅಭ್ಯರ್ಥಿಗೆ 1 ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆ ಮೀಸಲಿರಿಸಲಾಗಿದೆ. ಲೇಡಿ ಆಫೀಸರ್‌ 2 ಹುದ್ದೆಗಳಲ್ಲಿ1 ಹುದ್ದೆಯನ್ನು ಜನರಲ್‌ ಮೆರಿಟ್‌ನ ಗ್ರಾಮೀಣ ಅಭ್ಯರ್ಥಿಗೆ ಮತ್ತು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ 1 ಹುದ್ದೆಯನ್ನು ಮೀಸಲಿರಿಸಲಾಗಿದೆ.

ಯಾವ ವಿದ್ಯಾರ್ಹತೆಯವರು ಅರ್ಜಿ ಸಲ್ಲಿಸಬಹುದು?

ಮೆಡಿಕಲ್‌ ಕೌನ್ಸಿಲ್‌ (ಎಂಸಿಐ/ಎನ್‌ಎಂಸಿ ) ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಜೊತೆಗೆ ಬೋಧಕ ಹುದ್ದೆಗಳಿಗೆ ಸಂಬಂಧಪಟ್ಟ ವಿಶೇಷ ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು.

kims kodagu recruitment 2022 ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?


ಪ್ರೊಫೆಸರ್‌ ಹುದ್ದೆಗೆ ಗರಿಷ್ಠ 50 ವರ್ಷ, ಅಸೋಸಿಯೇಟ್‌ ಪ್ರೊಫೆಸರ್‌ಗೆ 45 ವರ್ಷ, ಅಸಿಸ್ಟೆಂಟ್‌ ಪ್ರೊಫೆಸರ್‌ಗೆ 38 ವರ್ಷ ಮತ್ತು ಲೇಡಿ ಮೆಡಿಕಲ್‌ ಆಫೀಸರ್‌ಗೆ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿಒಬಿಸಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗುತ್ತದೆ.

ಕೊಡಗು ಕಿಮ್ಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?


ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 10, 2022ರ ಸಂಜೆ 5 ಗಂಟೆಯ ಮೊದಲು ತಲುಪುವಂತೆ ಭರ್ತಿ ಮಾಡಿದ ಅರ್ಜಿ ಮತ್ತು ಸಂಬಂಧಪಟ್ಟ ದಾಖಲೆಗಳ ಪ್ರತಿಗಳನ್ನು 2 ಸಾವಿರ ರೂ. ಡಿಡಿ ಜೊತೆಗೆ ಕಿಮ್ಸ್‌ ಕೊಡಗು ವಿಳಾಸಕ್ಕೆ ಕಳುಹಿಸಬೇಕು. ಡಿಡಿಯನ್ನು ಡೈರೆಕ್ಟರ್‌ ಆ್ಯಂಡ್‌ ಡೀನ್‌, ಕೊಡಗು ಇನ್‌ಸಿೂ್ಟ್ಯಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಮಡಿಕೇರಿ ಹೆಸರಿಗೆ ತಲುಪಿಸಬೇಕು. ಅಪೂರ್ಣ ಅರ್ಜಿಯನ್ನು ರಿಜೆಕ್ಟ್ ಮಾಡಲಾಗುತ್ತದೆ.
ಸಂದರ್ಶನದ ಮಾಹಿತಿ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಫೆಬ್ರವರಿ 15- 16, 2022ರಂದು ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಫೆಬ್ರವರಿ 15ರಂದು ಬೆಳಗ್ಗೆ 10 ಗಂಟೆ ಮೊದಲು ತಲುಪಿ ಹೆಸರು ನೋಂದಾಯಿಸಿಕೊಳ್ಳಬೇಕು. ಸಂದರ್ಶನವು ಪೂರ್ವಾಹ್ನ 10.30 ಗಂಟೆ ಬಳಿಕ ನಡೆಯಲಿದೆ. ಹೈದರಾಬಾದ್‌ ಕರ್ನಾಟಕದ ಅಭ್ಯರ್ಥಿಗಳಿಗೆ ಸಂದರ್ಶನವು ಬೆಳಗ್ಗೆ 9.30 ಗಂಟೆಯಿಂದ ನಡೆಯಲಿದೆ.

ಸಂದರ್ಶನಕ್ಕೆ ಬರುವ ಸಮಯದಲ್ಲಿಮೂಲ ದಾಖಲೆಗಳು, ಸ್ವಯಂ ದೃಢೀಕರಿಸಿದ ದಾಖಲೆಗಳ ಎರಡು ಪ್ರತಿ ಜೆರಾಕ್ಸ್‌ ಪ್ರತಿಗಳು, 2 ಪಾಸ್‌ ಪಾರ್ಟ್‌ ಫೋಟೊವನ್ನು ತರಬೇಕು.

ಸಂದರ್ಶನ ನಡೆಯುವ ಸ್ಥಳ: Director and Dean Office, 1st Floor, College Council Hall, A Block, Kodagu Institute of Medical Sciences, Madikeri.

Leave a Reply

Your email address will not be published. Required fields are marked *