KPTCL Recruitment 2022- ಕರ್ನಾಟಕ ವಿದ್ಯುತ್‌ ನಿಗಮದಲ್ಲಿ ಭರ್ಜರಿ ನೇಮಕ, 1492 ಹುದ್ದೆಗಳಿಗೆ ಅರ್ಜಿ ಆಹ್ವಾನ

By | 25/01/2022

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಭಾರೀ ನೇಮಕಾತಿ (KPTCL Recruitment 2022)ನಡೆಯಲಿದ್ದು, ಉದ್ಯೋಗ ಪ್ರಕಟಣೆಯನ್ನು ಕೆಪಿಟಿಸಿಎಲ್‌ ಹೊರಡಿಸಿದೆ. ಸಹಾಯಕ ಎಂಜಿನಿಯರ್‌ (ವಿದ್ಯುತ್‌), ಸಹಾಯಕ ಎಂಜಿನಿಯರ್‌ (ಸಿವಿಲ್‌) , ಕಿರಿಯ ಎಂಜಿನಿಯರ್‌ (ವಿದ್ಯುತ್‌), ಕಿರಿಯ ಎಂಜಿನಿಯರ್‌ (ಸಿವಿಲ್‌) ಮತ್ತು ಕಿರಿಯ ಸಹಾಯಕ ಹುದ್ದೆಗಳಿಗೆ ಕೆಪಿಟಿಸಿಎಲ್‌ ಅರ್ಜಿ ಆಹ್ವಾನಿಸಿದೆ.

KPTCL Recruitment 2022: ಹುದ್ದೆಗಳ ವಿವರ


ಸಹಾಯಕ ಎಂಜಿನಿಯರ್‌ (ವಿದ್ಯುತ್‌)-505 ಹುದ್ದೆಗಳು, ಸಹಾಯಕ ಎಂಜಿನಿಯರ್‌ (ಸಿವಿಲ್‌)-28 ಹುದ್ದೆಗಳು, ಕಿರಿಯ ಎಂಜಿನಿಯರ್‌ (ವಿದ್ಯುತ್‌)-570 ಹುದ್ದೆಗಳು, ಕಿರಿಯ ಎಂಜಿನಿಯರ್‌ ಸಿವಿಲ್ 29 ಹುದ್ದೆಗಳು ಮತ್ತು ಕಿರಿಯ ಸಹಾಯಕ 360 ಸೇರಿದಂತೆ ಒಟ್ಟು 1492 ಹುದ್ದೆಗಳಿಗೆ ಕರ್ನಾಟಕ ವಿದ್ಯುತ್‌ ನಿಗಮವು ಅರ್ಜಿ ಆಹ್ವಾನಿಸಿದೆ.
Assistant Engineer (Electric.)505 Posts, Assistant Engineer (Civil)- 28 Posts, Junior Engineer (Electric.)- 570 Posts, Junior Engineer (Civil)- 29 Posts and Junior Assistant- 360 Posts availbale for apply.

ಸಹಾಯಕ ಎಂಜಿನಿಯರ್‌ (ವಿದ್ಯುತ್‌)-505 ಹುದ್ದೆಗಳಲ್ಲಿ ಮಿಕ್ಕುಳಿದ ವೃಂದದಲ್ಲಿ 393 ಹುದ್ದೆಗಳು ರೆಗ್ಯುಲರ್‌ ಮತ್ತು 6 ಹುದ್ದೆಗಳು ಬ್ಯಾಕ್‌ಲಾಗ್‌ ಹುದ್ದೆಗಳಾಗಿವೆ. ಸ್ಥಳೀಯ ವೃಂದದಲ್ಲಿ 106 ಹುದ್ದೆಗಳನ್ನು ರೆಗ್ಯುಲರ್‌ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.
ಸಹಾಯಕ ಎಂಜಿನಿಯರ್‌ (ಸಿವಿಲ್‌)-28 ಹುದ್ದೆಗಳಲ್ಲಿ ಮಿಕ್ಕುಳಿದ ವೃಂದದಲ್ಲಿ 21 ರೆಗ್ಯುಲರ್‌ ಅಭ್ಯರ್ಥಿಗಳಿಗೆ, ಸ್ಥಳೀಯ ವೃಂದದ್ಲ್ಲಿ 7 ಹುದ್ದೆಗಳನ್ನು ರೆಗ್ಯುಲರ್‌ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಕಿರಿಯ ಎಂಜಿನಿಯರ್‌ (ವಿದ್ಯುತ್‌)-570 ಹುದ್ದೆಗಳಲ್ಲಿ ಮಿಕ್ಕಳಿದ ವೃಂದದಲ್ಲಿ ರೆಗ್ಯುಲರ್‌ ಅಭ್ಯರ್ಥಿಗಳಿಗೆ 477 ಹುದ್ದೆಗಳು, 9 ಬ್ಯಾಕ್‌ಲಾಗ್‌ ಹುದ್ದೆಗಳಿವೆ. ಸ್ಥಳೀಯ ವೃಂದದಲ್ಲಿ ರೆಗ್ಯುಲರ್‌ ಅಭ್ಯರ್ಥಿಗಳಿಗೆ 82 ಹುದ್ದೆಗಳು ಮತ್ತು ಬ್ಯಾಕ್‌ಲಾಗ್‌ ಅಭ್ಯರ್ಥಿಗಳಿಗೆ 2 ಹುದ್ದೆಗಳಿವೆ. ಕಿರಿಯ ಎಂಜಿನಿಯರ್‌ ಸಿವಿಲ್ 29 ಹುದ್ದೆಗಳಲ್ಲಿ ಮಿಕ್ಕುಳಿದ ವೃಂದದಲ್ಲಿ 21 ಹುದ್ದೆಗಳನ್ನು ರೆಗ್ಯುಲರ್‌ ಅಭ್ಯರ್ಥಿಗಳಿಗೆ ಮತ್ತು 8 ಹುದ್ದೆಗಳನ್ನು ಸ್ಥಳೀಯ ವೃಂದದ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಕಿರಿಯ ಸಹಾಯಕ ಹುದ್ದೆಗಳಲ್ಲಿ ಮಿಕ್ಕುಳಿದ ವೃಂದದ ಅಭ್ಯರ್ಥಿಗಳಿಗೆ 357 ರೆಗ್ಯುಲರ್‌ ಹುದ್ದೆಗಳು ಮತ್ತು ಸ್ಥಳೀಯ ವೃಂದದ ಅಭ್ಯರ್ಥಿಗಳಿಗೆ 3 ರೆಗ್ಯುಲರ್‌ ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಒಟ್ಟು 1492 ಹುದ್ದೆಗಳಿರುವುದರಿಂದ ಈ ವರ್ಷದ ಕರ್ನಾಟಕ ಸರಕಾರದ ಇಲಾಖೆಯೊಂದರ ಬೃಹತ್‌ ನೇಮಕಾತಿ ಇದಾಗಿದ್ದು, ತಪ್ಪದೇ ಅರ್ಜಿ ಸಲ್ಲಿಸಿ.

KPTCL Recruitment 2022: ವೇತನ ಎಷ್ಟು?

ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ ಆರಂಭಿಕ ವೇತನ 41,130 ರೂ. ಇದ್ದು, ಭವಿಷ್ಯದಲ್ಲಿ 72,920 ರೂ.ವರೆಗೆ ವೇತನ ಪಡೆಯಲಿದ್ದಾರೆ. ಕಿರಿಯ ಎಂಜಿನಿಯರ್‌ ಹುದ್ದೆಗಳಿಗೆ ಆರಂಭಿಕ 26,270 ರೂ. ವೇತನವಿದ್ದೂ, ಭವಿಷ್ಯದಲ್ಲಿ 65,020 ರೂ.ವರೆಗೆ ವೇತನ ಪಡೆಯಲಿದ್ದಾರೆ. ಕಿರಿಯ ಸಹಾಯಕ ಹುದ್ದೆಗಳಿಗೆ 20,220 ರೂ. ಆರಂಭಿಕ ವೇತನವಿದ್ದು, 51,640 ರೂ.ವರೆಗೆ ಭವಿಷ್ಯದಲ್ಲಿ ವೇತನ ಪಡೆಯಲಿದ್ದಾರೆ.

KPTCL Recruitment 2022: ಅರ್ಜಿ ಸಲ್ಲಿಕೆ ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಹುದ್ದೆಗಳ ವರ್ಗೀಕರಣ, ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, KPTCL Recruitment 2022 ವಯೋಮಿತಿ, KPTCL Recruitment 2022 ಅರ್ಹತೆ, KPTCL Recruitment 2022: , KPTCL Recruitment 2022 ನೇಮಕಾತಿ ವಿಏಧಾನ, KPTCL Recruitment 2022 ಅರ್ಜಿ ನಮೂನೆ ಮತ್ತು ಇತರೆ ಮಾಹಿತಿಗಳನ್ನು ಕೆಪಿಟಿಸಿಎಲ್‌ ಫೆಬ್ರವರಿ 7, 2022ರಂದು ನೀಡಲಿದೆ. ಉದ್ಯೋಗಾಸಕ್ತರು ಅರ್ಜಿ ಸಲ್ಲಿಸಲು ಸಿದ್ಧವಾಗಿರಿ.

KPTCL Recruitment 2022: ವಯೋಮಿತಿ

ಸಾಮಾನ್ಯವಾಗಿ ಕೆಪಿಟಿಸಿಎಲ್‌ನ ಈ ಹುದ್ದೆಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಫೆಬ್ರವರಿ ಏಳರಂದು ಪಡೆಯಬಹುದು.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ KPTCL Website Address:

Leave a Reply

Your email address will not be published. Required fields are marked *