KSMC : ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ, ತಿಂಗಳಿಗೆ 30,000/- ರೂ.ಸಂಬಳ – ಸುದ್ದಿಜಾಲ ನ್ಯೂಸ್

By | 05/01/2022

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಹುದ್ದೆ : ಪರಿಸರ ಅಭಿಯಂತರರು – 2 ಹುದ್ದೆಗಳು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 30,000/- ಸಂಭಾವನೆ ಇರುತ್ತದೆ. ಗುತ್ತಿಗೆಯ ಅವಧಿ‌ ಎರಡು ವರ್ಷಗಳು. ನೇರ ಸಂದರ್ಶನ ಸಮಯ ಮತ್ತು ದಿನಾಂಕ : 11-01-2022 ( 3.00 ರಿಂದ 5.00 PM)

ಚಾಲಕರು : 2 ಹುದ್ದೆಗಳು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 16,000/- ವೇತನವಿರುತ್ತದೆ. ಗುತ್ತಿಗೆ ಅವಧಿ ಒಂದು ವರ್ಷ. ನೇರ ಸಂದರ್ಶನ ಸಮಯ ಮತ್ತು ದಿನಾಂಕ 13-01-2022
( 3.00 ರಿಂದ 5 PM)

ಸಂದರ್ಶನ ಸ್ಥಳ : ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗುವುದು.

ಸಂದರ್ಶನ ವಿಳಾಸ : ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್, 5 ನೇ ಮಹಡಿ, ಟಿ ಟಿ ಎಂ ಸಿ, ‘ ಎ’ ಬ್ಲಾಕ್, ಬಿಎಂಟಿಸಿ‌ ಕಟ್ಟಡ, ಕೆ.ಹೆಚ್.ರಸ್ತೆ, ಶಾಂತಿ ನಗರ, ಬೆಂಗಳೂರು -560027

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ ಗೆ ಭೇಟಿ ನೀಡಬಹುದು.

Leave a Reply

Your email address will not be published. Required fields are marked *