VIMS : 130 ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ – ಸುದ್ದಿಜಾಲ ನ್ಯೂಸ್

By | 03/01/2022

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯಲ್ಲಿ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಸಂಸ್ಥೆಯು ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಜನವರಿ 10, 2022 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ನೇಮಕಾತಿ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ : ಶುಶ್ರೂಷಾಧಿಕಾರಿ – 110 ಹುದ್ದೆಗಳು
ರೇಡಿಯೋಗ್ರಾಫರ್ – 1 ಹುದ್ದೆ
ಫಾರ್ಮಸಿ ಅಧಿಕಾರಿ – 2 ಹುದ್ದೆಗಳು
ಕ್ಷ ಕಿರಣ ತಂತ್ರಜ್ಞರು – 3 ಹುದ್ದೆಗಳು
ಫಿಜಿಯೋಥೆರಪಿಸ್ಟ್ – 1 ಹುದ್ದೆ
ಡಯೆಟಿಷಿಯನ್ – 1 ಹುದ್ದೆ
ಲ್ಯಾಬ್ ಟೆಕ್ನಿಷಿಯನ್ – 3 ಹುದ್ದೆ
ಡ್ರೈವರ್ – 6 ಹುದ್ದೆ
ಡಯಾಲಿಸಿಸ್ ಟೆಕ್ನಿಷಿಯನ್ – 1 ಹುದ್ದೆ
ಸಿಟಿ ಟೆಕ್ನಿಷಿಯನ್ – 2 ಹುದ್ದೆ

ಒಟ್ಟು 130 ಹುದ್ದೆಗಳು

ಅರ್ಜಿ ಶುಲ್ಕ : ನೇರ ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ಅರ್ಜಿಯೊಂದಿಗೆ ರೂ.500/- ಶುಲ್ಕವನ್ನು, ನಿರ್ದೇಶಕರು, ವಿಮ್ಸ್, ಬಳ್ಳಾರಿ ಇವರ ಹೆಸರಿನಲ್ಲಿ ಡಿ ಡಿ ಮೂಲಕ ಪಡೆದು ಸಲ್ಲಿಸತಕ್ಕದ್ದು.

ವಯೋಮಿತಿ : ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷದ ಸಾಮಾನು ಅಭ್ಯರ್ಥಿಗಳು, ಇತರೆ ಹಿಂದುಳಿದ ವರ್ಗಗಳ ಗರಿಷ್ಠ 28 ವರ್ಷ ಮತ್ತು ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ ಗರಿಷ್ಠ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಈ ಮೇಲೆ ತಿಳಿಸಿದ ವಿವಿಧ ಹುದ್ದೆಗಳ ನೇಮಕಾತಿಗೆ ಜನವರಿ 10, 2022 ರಂದು ಬೆಳಿಗ್ಗೆ 10.30 ಕ್ಕೆ ನೇರ ಸಂದರ್ಶನ ನಡೆಸಲಾಗುತ್ತದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಸಂದರ್ಶನ ನಡೆಯುವ ಸ್ಥಳ : ಜಿಲ್ಲಾಧಿಕಾರಿಗಳ‌ ಕಚೇರಿ ಸಭಾಂಗಣ, ಬಳ್ಳಾರಿ

Leave a Reply

Your email address will not be published. Required fields are marked *