Category Archives: ಕತೆ

ಹೊಸ ಮನೆ

`ಅಂತು ಕೊನೆಗೂ ಮನೆ ಕಟ್ಟಿಬಿಟ್ರಿ’ ಪಕ್ಕದ ಮನೆಯಾಕೆ ಈಗಷ್ಟೇ ಹೇಳಿದ ಮಾತು ಕಮಲಮ್ಮನಿಗೆ ನೆನಪಾಯಿತು. ಸರಿಯಾದ ಪಂಚಾಗ ಇರುವ ಮನೆಯೊಂದನ್ನು ಕಟ್ಟಬೇಕೆಂದು ಅದೆಷ್ಟು ವರ್ಷದಿಂದ ಕನಸು ಕಾಣುತ್ತಿದ್ದರು. ಹೊಟ್ಟೆ ಬಟ್ಟೆ ಕಟ್ಟಿ ಹಣ ಕೂಡಿಡುತ್ತಿದ್ದರು. ಆದರೆ ಕಾಲ ಕೂಡಿ ಬರಲು ಅದೆಷ್ಟು ವರ್ಷಗಳು ಬೇಕಾಯಿತು. ಒಂದಿಷ್ಟು ಹಣ ಸಂಗ್ರಹವಾದಗ ಯಾವುದಾದರೂ ಕಷ್ಟಗಳು ಎದುರಾಗುತ್ತಿದ್ದವು. ಅವರ ಆರೋಗ್ಯ, ಮಕ್ಕಳ ಓದು, ತೋಟ ಸಮಸ್ಯೆಗಳು ಒಂದೆರಡಲ್ಲ. ಸ್ವಂತ ಮನೆ ಕಟ್ಟೋಕೆ ತಮ್ಮ ಕಾಲದಲ್ಲಿ ಆಗದಿದ್ದರೂ ಮಕ್ಕಳ ಕಾಲದಲ್ಲಿಯಾದರೂ ನೆರವೇರಿತಲ್ಲ. ಅಂತ ಸಮಧಾನದಿಂದ ಹೊಟ್ಟೆ ಬಟ್ಟೆ… Read More »

ಅವನು ನಂಗೆ ಇಷ್ಟವಿಲ್ಲ ಕಣೇ…!!!

ಭಾಗ 1: ಅವನು ನನಗೆ ಬೇಡ `ಹೇ ಅವನು ನನಗೆ ಇಷ್ಟವಿಲ್ಲ ಕಣೇ’ ಶ್ರಾವ್ಯಳ ಮಾತಿಗೆ ರಂಜಿತ ಬೆಚ್ಚಿಕೇಳಿದಳು. `ಹೇ ಏನಾಗಿದೆ ನಿನಗೆ. ನಿನ್ನೆ ನಿನ್ನ ಎಂಗೇಜ್‌ಮೆಂಟ್‌ ಆಯ್ತು. ಅವತ್ತೇ ಹೇಳಬೇಕಿತ್ತು.. ನೀನು ಒಪ್ಪಿದರಿಂದ ತಾನೇ ಮದುವೆ ಫಿಕ್ಸ್‌ ಮಾಡಿದ್ದು. ಯಾಕೋ ಅಷ್ಟ ಚಂದದ ಹುಡುಗ ನಿನಗೆ ಬೇಡ್ವ?’ ಅದಕ್ಕೆ ಶ್ರಾವ್ಯ `ಸುಮ್ನಿರೇ, ನಂಗೆ ಬೆಂಗಳೂರು ಹುಡುಗ ಇಷ್ಟವಿಲ್ಲ. ಈ ಊರು ಬಿಟ್ಟು ಅಲ್ಲಿಗೆ ಹೋಗಬೇಕಾ? ಅಪ್ಪ ಅಮ್ಮನ ಒತ್ತಾಯಕ್ಕೆ ಹೂಂ ಅಂದದ್ದು’ `ನಂಗೊತ್ತಿಲ್ಲ ಏನಾದರೂ ಮಾಡ್ಕೊ’ ಅಂತ ರಂಜಿತ ಎದ್ದು… Read More »

ಹೀಗೊಂದು ಕತೆ

ಹೀಗೊಂದು ಕತೆ ‘ಏನಪ್ಪ ಒಂದೇ ಸಮನೆ ಆ ಕಡೆ ನೋಡ್ತಾ ಇದ್ದೀಯಾ. ಬೇಕಾದ್ರೆ ಒಬ್ಳನ್ನು ರೂಂಗೆ ಕರೆದುಕೊಂಡು ಹೋಗು’ ಗೆಳೆಯ ಹಾಸ್ಯ ಮಾಡಿದಾಗ `ಅಲ್ಲ ಕಣೋ ಆ ಕಡೆಯಲ್ಲಿ ಇದ್ದಾಳಲ್ಲ ನಸು ಕಪ್ಪಿನವಳು. ಅವಳನ್ನೋ ಎಲ್ಲೋ ನೋಡಿದ್ದಿನಿ’ ನನ್ನ ಮಾತನ್ನು ತುಂಡರಿಸುತ್ತ ಆತ `ಈ ಬಿಡೋ ಒಬ್ಬರಂತೆ 7 ಜನ ಇರ್ತಾರಂತೆ. ಅದ್ರಲ್ಲಿ  ಆ ಸೂಳೆಯೂ ಒಬ್ಬಳು’ ಅವನು ವಿಚಿತ್ರವಾಗಿ ನಕ್ಕ.  ನಾನು ನಗಲಿಲ್ಲ. `ಏ ಸುಮ್ನೆ ಸುಮ್ನೆ ಈ ಜಾಬ್‌ಗೆ ಅವರು ಬರೋಲ್ಲ ಕಣೋ. ಏನೋ ಜೀವನದಲ್ಲಿ ಕಷ್ಟ ಪಟ್ಟಿರ್ತಾರೆ’… Read More »

ಸೃಷ್ಟಿ

ಸೃಷ್ಟಿಕರ್ತ ತನ್ನ ಚೆಲುವಾದ ಪತ್ನಿಯೊಂದಿಗೆ ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿದ್ದ. `ಸಖ ಅಲ್ಲಿ ಕಾಣುವ ಆ ಗ್ರಹದಲ್ಲಿ ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆಯೋಣವೇ?’ ಸಖಿಯ ಬಯಕೆಯರಿತ ಸೃಷ್ಟಿಕರ್ತ ತನ್ನ ವಾಹನವನ್ನು ಆ ಗ್ರಹದಲ್ಲಿ ಇಳಿಸಿದನು. ಅವರಿಬ್ಬರು ತುಂಬಾ ಹೊತ್ತು ಅಲ್ಲಿ ವಿಶ್ರಾಂತಿ ಪಡೆದು ಇನ್ನೇನೂ ಹೋಗಬೇಕೆಂದು ಎದ್ದಾಗ ಸಖಿ ಹೇಳಿದಳು. ನಾಥ ನಾವಿಲ್ಲಿ ವಿಶ್ರಾಂತಿ ಪಡೆದ ನೆನಪಿಗೆ ಏನಾದರೂ ಮಾಡಬಾರದೇ. ಸೃಷ್ಟಿಕರ್ತನಿಗೂ ಅದು ಸರಿಯೆನಿಸಿತು. ಒಂದು ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದ. ಅವರ ವಾಸಕ್ಕೆ ಅನುಕೂಲವಾಗುವಂತಹ ವಾತಾವರಣ, ನೀರು, ಕಾಡು, ಪ್ರಾಣಿ ಪಕ್ಷಿಗಳನ್ನು… Read More »

ಪ್ರಭಾ

ಸುಮ್ಮಗೆ ಒಂದು ಕತೆ ಪ್ರಭಾ… `ಎಲ್ಲಿಗೆ ಮೇಡಂ` ಕಂಡೆಕ್ಟರ್‌ ಧ್ವನಿ ಕೇಳಿ ಬೆಚ್ಚಿದವಳಂತೆ ಎಚ್ಚೆತ್ತ ಪ್ರಭಾ `ಪುತ್ತೂರು’ ಎಂದು ಐನೂರರ ನೋಟೊಂದನ್ನು ನೀಡಿದಳು. ಕಂಡೆಕ್ಟರ್‌ ನೀಡಿದ ಚಿಲ್ಲರೆಯನ್ನು ಪರ್ಸ್‌ಗೆ ತುಂಬಿಕೊಂಡವಳ ಮನಸ್ಸು ಚಡಪಡಿಸುತ್ತಿತ್ತು. ನಾನು ಕೆಲಸ ಬಿಟ್ಟು ಬಂದೆ ಅಂದರೆ ಅಮ್ಮ ಏನು ಹೇಳಬಹುದು. ಅಪ್ಪನ ಮುಖ ಸಪ್ಪೆಯಾಗಬಹುದಾ? ಎರಡು ವರ್ಷದ ಹಿಂದೆ ಎಷ್ಟು ಆರಾಮವಾಗಿದ್ದೆ. ಯಾರಿಗೆ ಬೇಕು ಬೆಂಗಳೂರು ಥೂ! *** ಅವಳು ಬೆಂಗಳೂರಿಗೆ ಬಂದು ಎರಡು ವರ್ಷ ಕಳೆದಿದೆ. ಕೈಯಲ್ಲಿ ಒಂದಿಷ್ಟು ದುಡ್ಡು, ಅನುಭವ ಎಲ್ಲವೂ ನಿರೀಕ್ಷೆಗಿಂತ ಸ್ವಲ್ಪ… Read More »

ನೆನಪಿನ ತೋರಣ

ನೆನಪಿನ ತೋರಣ ನಾನು ನನ್ನ ಬಾಲ್ಯ ನಿನಗೆ ಶೇಷಮ್ಮ ಟೀಚರ್‌ನ ನಂಬರ್‌ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್‌ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್‌, ಮೇಸ್ಟ್ರು, ಊರು, ಕಾಡುಗುಡ್ಡ,  ಅಮ್ಮನ ಪ್ರೀತಿ, ಗುರುಗಳು ನೀಡಿದ್ದ ಬೆತ್ತದ ಏಟು, ಸ್ನೇಹಿತನ ಮುನಿಸು, ತಂಟೆ, ತಕರಾರು ಹೀಗೆ ನೆನಪುಗಳ ಜಾತ್ರೆ. ಎಲ್ಲರ ಭೀತಿಯಂತೆ ನನಗೆ ನನ್ನೂರು ಏನೋ ಕಳೆದುಕೊಂಡಂತೆ ಅನಿಸುತ್ತಿಲ್ಲ. ಊರು ವೃದ್ಧಾಶ್ರಮವೂ ಆಗಿಲ್ಲ. ಒಂದಿಷ್ಟು ಅಭಿವೃದ್ಧಿ… Read More »

ಒಂದೇ ವಾಕ್ಯದ ಎರಡು ಕತೆ

೧.ಅವನು ಅವಳ ತಿರಸ್ಕರಿಸೋ ಹೊತ್ತಿಗೆ ಅವಳಿಗೆ ಹೊಟ್ಟೆನೋವು ಆರಂಭವಾಗಿತ್ತು ೨. ಚೋಮ ಮನೆಯೊಳಗೆ ಯಾಕೆ ಬರೋಲ್ಲ, ಅನ್ನೋ ಮಗನ ಪ್ರಶ್ನೆಗೆ ಅಮ್ಮ “ಮನೆಯೊಳಗೆ ಭೂತವಿದೆ’ ಎಂದಳು