Category Archives: ಕತೆ

ನೀತಿಕತೆ: Torchlight ಆನ್ ಮಾಡಲು ನಿಮಗೆ ಗೊತ್ತೆ?

By | 17/06/2019

ಹೆಡ್‍ಲೈನ್ ನೋಡಿದಾಗ ನಿಮಗೆ ಆಶ್ಚರ್ಯವಾಗಿರಬಹುದು. ಟಾರ್ಚ್ ಯಾಕೆ? ದೊಡ್ಡ ಜನರೇಟರ್‍ ಅನ್ನೇ ಆನ್ ಮಾಡ್ತಿವಿ, ಎಂದು ಹೇಳಬಹುದು. ನಾನು ಹೇಳಲು ಹೊರಟ ಟಾರ್ಚ್ ಒಂದಿಷ್ಟು ವಿಚಾರ ಮಾಡುವಂತದ್ದು. ನೀತಿಕತೆ. ಯಂಡಮೂರಿ ವೀರೇಂದ್ರನಾಥ್ ಬರೆದ ಕಣಿವೆಯಿಂದ ಶಿಖರಕ್ಕೆ (ಕನ್ನಡ ಅನುವಾದ- ಯತಿರಾಜ್ ವೀರಾಂಬುಧಿ) ಪುಸ್ತಕ ಓದಿದಾಗ ಒಂದು ಕತೆ ಗಮನ ಸೆಳೆಯಿತು. ಅದನ್ನು ಕರ್ನಾಟಕಬೆಸ್ಟ್.ಕಾಂ ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು. [rml_read_more] “ತನ್ನ ಸ್ನೇಹಿತನನ್ನು ಒಬ್ಬ ಡಿನ್ನರ್‍ಗೆ ಆಹ್ವಾನಿಸಿದ. ಆತ ಮನೆಗೆ ಮರಳಿ ಹೊರಟಾಗ ಅವನಿಗೆ ಟಾರ್ಚ್‍ಲೈಟ್ ಒಂದನ್ನು ನೀಡಿದನಂತೆ. “ಇದೇಕೆ, ನನಗೆ ರಾತ್ರಿ ವೇಳೆ… Read More »

Moral Story: ಡೇವಿಡ್ ಮತ್ತು ಗೋಲಿಯಾಥ್ (ಸಂಗ್ರಹ)

By | 03/12/2018

ಶಿವ್ ಖೇರಾ ಬರೆದ “ಯು ಕ್ಯಾನ್ ವಿನ್’ ಪುಸ್ತಕದಲ್ಲಿ ಓದಿದ ಕತೆಯಿದು. ಈ ಕತೆಯನ್ನು ಈ ಹಿಂದೆ ಬೇರೆಲ್ಲೋ ಓದಿದ್ದೆ. ಯಾವ ಕ್ಲಾಸ್ ಪಠ್ಯ ಪುಸ್ತಕದಲ್ಲಿ ಎನ್ನುವುದು ನೆನಪಿಲ್ಲ. ಈ ಪುಟ್ಟ ಕತೆಯು ದೊಡ್ಡದಾದ ವ್ಯಕ್ತಿತ್ವ ವಿಕಸನ ಪಾಠ ಹೊಂದಿದೆ. ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಡೇವಿಡ್ ಮತ್ತು ಗೋಲಿಯಾಥ್ ಒಂದು ಊರಿನಲ್ಲಿ ದೈತ್ಯನಿದ್ದ. ದೈತ್ಯನೆಂದರೆ ತುಂಬಾ ಬೃಹತ್ ಗಾತ್ರದ ಶಕ್ತಿಶಾಲಿ ವ್ಯಕ್ತಿ. ಆತ ಎಲ್ಲರಿಗೂ ಕಿರುಕುಳ ಕೊಡುತ್ತಿದ್ದ. ಆ ಊರಿನವರು ಆತ ಕೊಡುವ ಹಿಂಸೆಯಿಂದ ತತ್ತರಿಸಿದ್ದರು. ಆತನಿಗೆ ಭಯಪಟ್ಟು ಬದುಕುತ್ತಿದ್ದರು. ಒಂದು ದಿನ… Read More »

Moral Story: ಪರೀಕ್ಷೆ ತಪ್ಪಿಸಿದ ಹುಡುಗರು

By | 18/11/2018

ನಾಲ್ವರು ಕಾಲೇಜು ಹುಡುಗರಿದ್ದರು. ಅವರಿಗೆ ಮರುದಿನ ಪರೀಕ್ಷೆ ಇತ್ತು. ಆದರೆ, ಹಿಂದಿನ ದಿನ ಸ್ನೇಹಿತನ ಹುಟ್ಟುಹಬ್ಬವೆಂದು ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಿದರು. ಮರುದಿನ ಪರೀಕ್ಷೆಯ ವಿಷಯವೇ ಅವರಿಗೆ ಮರೆತು ಹೋಗಿತ್ತು. ಅವರು ಏನೂ ಅಧ್ಯಯನ ಮಾಡಿರಲಿಲ್ಲ. ಮರುದಿನ ಪರೀಕ್ಷೆ. ಈ ಪರೀಕ್ಷೆ ತಪ್ಪಿಸಲು ಏನಾದರೂ ಐಡಿಯಾ ಮಾಡಬೇಕು ಎಂದುಕೊಂಡರು. ನಾವು ನಿನ್ನೆ ರಾತ್ರಿ ಒಂದು ಮದುವೆಗೆ ಹೋಗಿದಾಗ ಒಂದು ಘಟನೆ ನಡೆಯಿತು.  ಬರುವಾಗ ಕಾರಿನ ಒಂದು ಟೈರ್ ಸ್ಪೋಟಗೊಂಡು ರಸ್ತೆಯಲ್ಲಿಯೇ ರಾತ್ರಿಯಿಡಿ ಕಳೆಯಬೇಕಾಯಿತು ಎಂಬ ಸುಳ್ಳನ್ನು ಪ್ರಾಂಶುಪಾಲರ ಬಳಿ ಹೇಳಿದರು. ಇವರ ಮಾತುಗಳನ್ನು… Read More »

Moral Story: ದಾರಿಯ ನಡುವೆ ಇರುವ ದೊಡ್ಡ ಕಲ್ಲು

By | 18/11/2018

ಒಬ್ಬ ರಾಜನಿದ್ದ. ಒಂದು ದಿನ ಆತ ಮಾರುವೇಷದಲ್ಲಿ ನಗರ ಸಂಚಾರಕ್ಕೆ ಹೊರಟ. ಒಂದು ರಸ್ತೆಯಲ್ಲಿ ದೊಡ್ಡ ಕಲ್ಲೊಂದನ್ನು ಇಟ್ಟು ಅಡಗಿ ಕುಳಿತ. ದಾರಿಗೆ ಅಡ್ಡವಾದ ಆ ಕಲ್ಲನ್ನು ಯಾರಾದರೂ ಬದಿಗೆ ಸರಿಸುತ್ತಾರೋ ಎಂದು ಕಾದುಕುಳಿತ.  ಆ ರಾಜನ ರಾಜ್ಯದ ಶ್ರೀಮಂತರು ಮತ್ತು ವರ್ತಕರು ರಸ್ತೆಯಲ್ಲಿ ಬಂದರು. ಆ ಕಲ್ಲನ್ನು ನೋಡಿದರೂ ನೋಡದಂತೆ ಮುಂದೆ ಸಾಗಿದರು. ಮತ್ತೆ ಹಲವು ಮಂದಿ ಬಂದರೂ ಯಾರೂ ಕಲ್ಲನ್ನು ಪಕ್ಕಕ್ಕೆ ಸರಿಸುವ ಯೋಚನೆ ಮಾಡಲಿಲ್ಲ. ಕೊನೆಗೆ ಒಬ್ಬಾತ ಬಂದ. ಆತನ ಕೈ ತುಂಬಾ ತರಕಾರಿ ಇತ್ತು. ನೋಡಲು… Read More »

Moral Story: ಕುಂಟ ನಾಯಿಮರಿಗೆ ಬೆಲೆ ಎಷ್ಟು?

By | 16/11/2018

ಒಬ್ಬ ಅಂಗಡಿಯವ ತನ್ನ ಅಂಗಡಿಯ ಹೊರಗೆ `ನಾಯಿಮರಿಗಳು ಮಾರಾಟಕ್ಕಿವೆ” ಎಂದು ಬೋರ್ಡ್ ಹಾಕಿದ. ಇಂತಹ ಬೋರ್ಡ್‍ಗಳು ಮಕ್ಕಳನ್ನು ಸೆಳೆಯುತ್ತವೆ ಎಂದು ಅವನಿಗೆ ಗೊತ್ತಿತ್ತು. ಅದೇರೀತಿ ಆಯಿತು. ಪುಟ್ಟ ಬಾಲಕನೊಬ್ಬ ಅಂಗಡಿಗೆ ಬಂದ. `ನಾಯಿಮರಿಯನ್ನು ಎಷ್ಟು ರೂಪಾಯಿಗೆ ಮಾರುವಿರಿ?’ ಎಂದು ಆ ಬಾಲಕ ಪ್ರಶ್ನಿಸಿದ.  `2 ಸಾವಿರ ರೂ.ನಿಂದ 5 ಸಾವಿರ ರೂ.’ ಎಂದು ಅಂಗಡಿ ಮಾಲಿಕ ಉತ್ತರಿಸಿದ.  ಆ ಬಾಲಕ ತನ್ನ ಕಿಸೆಗೆ ಕೈ ಹಾಕಿದ. ಅವನಲ್ಲಿ ಇನ್ನೂರು ರೂಪಾಯಿ ಮಾತ್ರವಿತ್ತು. `ನನ್ನಲ್ಲಿ ಈಗ ಇಷ್ಟೇ ಇದೆ, ನಾನೊಮ್ಮೆ ನಾಯಿ ಮರಿಗಳನ್ನು… Read More »

ಸಣ್ಣಕತೆ: ಕನ್ನಡಿ ಹೇಳಿದ ಸತ್ಯ

By | 04/09/2018

ಸಣ್ಣಕತೆ: ಕನ್ನಡಿ ಹೇಳಿದ ಸತ್ಯ ಐ ಲವ್ ಯು ಎಂದು ಪ್ರಪೋಸ್ ಮಾಡಿದ ಅವನಿಗೆ ಅವಳು ಕೋಪದಿಂದ “ನಿನ್ನ ಮುಸುಡಿ ಕನ್ನಡಿಯಲ್ಲಿ ನೋಡ್ಕೋ, ಥೂ” ಎಂದು ಬಯ್ದಳು. ಅವನು ಕನ್ನಡಿ ನೋಡಿದ. ಅವಳು ಕುರೂಪಿಯಾಗಿ ಕಂಡಳು. *** ಹನಿಕಥೆ: ಕೂಗು “ಗಂಡಸ್ರನ್ನ ಯಾವತ್ತೂ ನಂಬಬಾರದು” ಮತ್ತೊಮ್ಮೆ ಗೊಣಗಿಕೊಂಡಳು.ಪ್ರೀತಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟನಲ್ಲ, ಎಷ್ಟೊಂದು ನಂಬಿಬಿಟ್ಟೆ ಅವನನ್ನು….ಹಾಗಂತ ಅವಳು ಯೋಚಿಸುತ್ತಿರುವಾಗಲೇ “ಮಹೂರ್ತಕ್ಕೆ ಹೆಚ್ಚು ಸಮಯವಿಲ್ಲ. ಹುಡುಗಿನ ಕರೆತನ್ನಿ” ಎಂಬ ಪುರೋಹಿತರ ಧ್ವನಿ ಆಕೆಯನ್ನು ಎಚ್ಚರಿಸಿತು. ಹಿರಿಯರನ್ನು ಅನುಸರಿಸಿಕೊಂಡು ಹೋಗಿ ಹಸೆ ಮೇಲೆ ಕುಳಿತು… Read More »