Category Archives: ಕವನ

ಕಣ್ ರೆಪ್ಪೆ ಹೇಳಿದ ಹನಿಗಳು

By | 13/07/2010

ನನ್ನನ್ನು ಸದಾ ಹಿಂಬಾಲಿಸುತಿವೆ ನೆರಳು … ಜೊತೆಗೆ ನಿಟ್ಟುಸಿರು..! ********* ಪ್ರೀತಿ ಹಿಮಾಲಯದ ತುತ್ತ ತುದಿಗೆ ತಲುಪಿ ಹಿಂತುರುಗಿ ನೋಡಿದಾಗ ಅಲ್ಲಿ ನೀನರಲಿಲ್ಲ ನಾನು ಕೆಳಕ್ಕೆ ಧುಮುಕಿದೆ ****** ನೀನು ಕೈ ಕೊಟ್ಟಾಗ ಕೇಳಿದ ನಗುವಿನ ಸದ್ದು ನನ್ನದಲ್ಲ.. ವಿಧಿಯದ್ದು .! **** ನೀನು ಚಂದ್ರನ ತಂದು ಕೊಡೆಂದು ಕೇಳಿದ ದಿನ ಅಮಾವಾಸ್ಯೆ

ಬೆಳದಿಂಗಳಿಗೂ ಹರೆಯ

By | 13/07/2010

ಕಡಲ ಬದಿಯಲ್ಲಿ ನೀ ನಿಂತಿರಲು ನರಳಿತು ಹಿತವಾಗಿ ಮರಳು ನೇಸರ ಮುಳುಗಲು ಮರೆತ ಮೀನುಗಳಿಗೂ ಪುಳಕ ಕಡಲಕ್ಕಿಗಳು ಮರೆತವು ಜಳಕ ನಿನ್ನ ಕಂಡಾಗ ಬೆಳದಿಂಗಳಿಗೂ ಹರೆಯ ಹುಣ್ಣಿಮೆ ಚಂದಿರ ನಿನ್ನ ಗೆಳೆಯ ಹಾರೋ ಮುಂಗುರುಳು ಮರೆತು ನೀ ನಕ್ಕಾಗ, ಮುತ್ತುಗಳು ನಾಚಿ ಕಪ್ಪೆಚಿಪ್ಪಿನೊಳಗೆ ಬಚ್ಚಿಕೊಂಡವು ಅಲೆಗಳಿಗೂ ಆಸೆ ನಿನ್ನ ಕಾಲನ್ನು ಸವರುತ್ತ ಸಾಗುತ್ತಿದ್ದವು ನನ್ನಲ್ಲಿ ಕಡಲ ಭೋರ್ಗರೆತ ನಿನಗಾವುದರ ಪರಿವೆಯಿಲ್ಲ ಅರಿವೆಯೂ ನಿನಗಿಲ್ಲ ನೀನು ನನ್ನ ಕವನ

ಸುಮ್ಮನೆ ಸಾಲುಗಳು

By | 16/06/2010

************* ಕಡಲಾಳದಲ್ಲಿ ಒಡಲಾಳದ ಭೋರ್ಗರೆತ ಭೂಕಂಪ ಭರತ ಇಳಿತ ಅನವರತ *********** ಹೆಚ್ಹಿನ ಹೂವುಗಳು ಮುಂಜಾನೆಯೇ ಅರಳುತ್ತವೆಸಂಜೆಯದಾಗ ನರಳುತ್ತವೆ ಸಂಜೆ ಹೂವು ಮಾತ್ರ ಸಂಜೆ ಅರಳುತ್ತದೆಕತ್ತಲಿನತ್ತ ಹೊರಳುತ್ತದೆ ****************************

naguva huvige

By | 13/05/2010

ನಗುವ ಹೂವಿಗೆ…. ದಿನಕ್ಕೊಂದಿಷ್ಟು ಮುಗುಳು ನಗುದಿನಕರನ ನೋಡಿ..ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗುಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗುಕಪ್ಪು ಸಮಾಜದ ನಡುವೆಕಣ್ಣಾ ಮುಚ್ಚಾಲೆ ಆಟವೇ…ಯಾರಿಗೂ ಕಾಣದಾಂಗೆ ಸ್ಫುರಿಸುವೆಮುಗುಳ್ನಗೆಯ ಒಲವ ನೋಟ… ನಿನ್ನೀ ನಗುವಲ್ಲಿ ನೂರು ಮಾತುನೂರೊಂದು ಮಧುರ ಕಾವ್ಯ..ಭಾವ ನವಿರೇಳುತಿದೆನಲಿದಾಡುತಿದೆ ನವಿಲಾಗಿ ಮನಸ್ಸು… ಒಲವ ರಂಗವಲ್ಲಿ ಚೆಲುವ ರಾಗದಲ್ಲಿಅನುರಾಗದ ಕಂಪು ಕಣಜನಿನ್ನೀ ಮನ ಮೈಮಾಟದಲ್ಲಿಮಳೆ ಬಿಲ್ಲ ಚೆಲುವು… ನಿತ್ಯ ನಗುವ ಮಲ್ಲಿಗೆಯಾಗುಕನಸ ಮುದ್ದು ಬದುಕ ಹಾಳೆಗೆಸಮಾಜದ ಉರಿಯ ನಾಲಗೆಗೆ ಸಿಗದಾಂಗೆಅಕ್ಷಯ ನಗುವಿರಲಿ ನಾಳೆಗೆ…

ಮೌನದ ಗೆಳತಿಗೆ

By | 06/12/2009

ನೀನೇಕೆ ಮೌನಿಯದೆ ಗೆಳತಿ ಯಾರೊಂದಿಗೂ ಮಾತನಾಡುತ್ತಿಲ್ಲ ಯಾರೊಂದಿಗೂ ಬೆರೆಯುತ್ತಿಲ್ಲ ನಿನ್ನ‍ಷ್ಟಕ್ಕೆ ನೀನು ….. ನಿನಗೆ ನಿನ್ನದೇ ಪ್ರಪಂಚ .. ಕಣ್ಣೆತ್ತಿ ಒಮ್ಮೆ ನೋಡು ಕಾಣುತ್ತಿಲ್ಲವೇ ನಾನು … ನನ್ನ ಕಣ್ಣಲ್ಲಿರುವ ಪ್ರೀತಿ ಕಾಣುತ್ತಿಲ್ಲವೇ ನಿನಗೆ ಮೌನದಲಿ ಮೌನವಾಗಿ ಅದೇನು ಯೋಚನೆ ನಿನ್ನ ನೆನೆದು ಪಡುತ್ತಿದ್ದೇನೆ ಯಾತನೆ ಮೌನದ ಗೆಳತಿಯಲ್ಲಿ ಮೌನ ಮುರಿ ಎಂದಾಗ ಮೌನವೇ ಮಾತಿಗೆ ಉತ್ತರವಾದಾಗ ಮೌನವೇ ಮಾತಿಗೆ ಪ್ರಶ್ನೆ ಯಾದಾಗ ನಾ … ಸತ್ಯ ತಿಳಿದುಕೊಂಡೆ ಗೆಳತಿ ನೀ .. ಮೌನಿ ಎಂದು ತಿಳಿದಾಗ ನಾನು … ಮೌನಿಯದೆ