ಬ್ಯೂಟಿಪಾರ್ಲರ್, ಟೈಲರಿಂಗ್ ಉಚಿತ ತರಬೇತಿ : ಆಸಕ್ತರು ಅರ್ಜಿ ಸಲ್ಲಿಸಿ, ಹೆಚ್ಚಿನ ಮಾಹಿತಿ ಇಲ್ಲಿದೆ- ಸುದ್ದಿಜಾಲ ನ್ಯೂಸ್

By | 10/12/2021

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮಣಿಪಾಲ ಇವರ ವತಿಯಿಂದ ನಿರುದ್ಯೋಗಿ ಸ್ವ ಉದ್ಯೋಗಾಕಾಂಕ್ಷಿಗಳಿಗಾಗಿ ದಿ.27.12.2021 ರಿಂದ 30 ದಿನಗಳ ‘ ಬ್ಯೂಟಿಪಾರ್ಲರ್ ಮ್ಯಾನೇಜ್ಮೆಂಟ್’ ಮತ್ತು ದಿ. 30.12.2021 ರಿಂದ 30 ದಿನಗಳ ‘ ಮಹಿಳೆಯರ ಟೈಲರಿಂಗ್ ‘ ಕುರಿತು ಉಚಿತ ತರಬೇತಿಯನ್ನು ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತರಿಙದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ತರಬೇತಿಯಲ್ಲಿ ಊಟ, ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು, ಸಂಬಂಧಿಸಿದ ಕ್ಷೇತ್ರದ ಬಗ್ಗೆ ಪ್ರಯೋಗಿಕವಾಗಿ ತಿಳಿಸುವುದರ ಜೊತೆಗೆ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮಾಹಿತಿ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ 18 ರಿಂದ 45 ವರ್ಷದೊಳಗಿನ ವಯೋಮಾನದ ನಿರುದ್ಯೋಗಿ ಯುವತಿಯರು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಆಸಕ್ತರು ಕೂಡಲೇ ತಮ್ಮ ಹೆಸರು, ಪೂರ್ಣವಿಳಾಸ, ಪಿನ್ ಕೋಡ್, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ ಪಡೆಯಲಿಚ್ಛಿಸಿರುವ ತರಬೇತಿಯ ಹೆಸರು, ಮುಂತಾದ ಮಾಹಿತಿಯೊಂದಿಗೆ ಖಾಲಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ದಿನಾಂಕ 25.12.2021 ರೊಳಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ( CBRSETI), ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ( ಅನೆಕ್ಸ್) ಸಂಕೀರ್ಣ, ಮಣಿಪಾಲ – 576104 ಇಲ್ಲಿಗೆ ಕಳುಹಿಸುವುದು.

ಒಬ್ಬ ಅಭ್ಯರ್ಥಿಗೆ ಒಂದು ತರಬೇತಿಯನ್ನು ಪಡೆಯಲು ಅವಕಾಶವಿರುತ್ತದೆ. ಆಸಕ್ತ ಕ್ಷೇತ್ರಕ್ಕೆ ಅರ್ಜಿಯನ್ನು ಕಳುಹಿಸುವುದು. ದೂರವಾಣಿ ಮುಖಾಂತರವೂ ತರಬೇತಿಗೆ ನೋಂದಾಯಿಸಿಕೊಳ್ಳಬಹುದು. ಗ್ರಾಮೀಣ ಪ್ರದೇಶದ ಬಿಪಿಎಲ್ ಕುಟುಂಬದ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು.

ಸಂಸ್ಥೆಯ ದೂರವಾಣಿ ಸಂಖ್ಯೆ 0820-2570455, 9449862655 ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *