ವಿಪತ್ತು ನಿರ್ವಹಣಾ ಯೋಜನೆ ಕಲಬುರಗಿ: ಹುದ್ದೆಗಳಿಗೆ ಅರ್ಜಿ ಆಹ್ವಾನ

By | 20/04/2021

ವಿಪತ್ತು ನಿರ್ವಹಣಾ ಯೋಜನೆ ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 26 ಮಧ್ಯಾಹ್ನ 1.30 ರೊಳಗೆ. ಕೊನೆ ದಿನದ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹುದ್ದೆ : ಜಿಲ್ಲಾ ವಿಪತ್ತು ನಿರ್ವಹಣೆಗಾರ ( district disaster Professional ) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

ವಯೋಮಿತಿ : ಅಭ್ಯರ್ಥಿಗಳು ವಯೋಮಿತಿಯು 65 ವರ್ಷ ಮೀರಿರಬಾರದು.

ಕೆಲಸದ ಅವಧಿ : 12 ತಿಂಗಳ ಅವಧಿಯ ಮೇರೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪಡೆದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಪತ್ತು ನಿರ್ವಹಣೆ, ಸಾಮಾಜಿಕ ಕಾರ್ಯ, ಸಮಾಜ ಶಾಸ್ತ್ರ, ಕೃಷಿ, ವಾಸ್ತುಶಿಲ್ಪ, ಇಂಜಿನಿಯರಿಂಗ್ ನಗರ ಯೋಜನೆ ಹಾಗೂ ಇನ್ನಿತರ ಸಾಮಾಜಿಕ ವಿಜ್ಞಾನದಲ್ಲಿ ಪದವಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುವುದು.
5 ವರ್ಷಗಳ ಅನುಭವ ಇರಬೇಕು. ಪಿಎಚ್ಡಿ ಪಡೆದ ಅಭ್ಯರ್ಥಿಗಳಿಗೆ 3 ವರ್ಷಗಳ ಅನುಭವ ಇರಬೇಕು.

ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಉತ್ತಮ ಹಿಡಿತ ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.

ಎಂ.ಎಸ್.ಆಫೀಸ್ ಮತ್ತು ಇಂಟರ್ನೆಟ್ ನಲ್ಲಿ ಉತ್ತಮ ಜ್ಞಾನ ಹೊಂದಿರಬೇಕು. ಪ್ರತಿ ಮಾಹೆಗೆ ರೂ. 44,000/- ವೇತನ ನೀಡಲಾಗುವುದು.

ಅಭ್ಯರ್ಥಿಗಳು ಇತ್ತೀಚಿನ ಸ್ವ ವಿವರಗಳೊಂದಿಗೆ ಸ್ವಯಂ ದೃಢೀಕರಿಸಿದ ಶೈಕ್ಷಣಿಕ ಮತ್ತು ಅನುಭವ ಪ್ರಮಾಣ ಪತ್ರಗಳೊಂದಿಗೆ ಅರ್ಜಿಯನ್ನು ಜಿಲ್ಲಾಧಿಕಾರಿಗಳು( ವಿಪತ್ತು ನಿರ್ವಹಣಾ ಕೋಶ ) ಕಲಬುರಗಿ -585102 ನೋಂದಾಯಿತ ಅಂಚೆ ಮೂಲಕ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂ.ಸಂಖ್ಯೆ 08472- 278677 ಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *