ಬ್ಯಾಂಕ್ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್, ಶೀಘ್ರವೇ 41,177 ಹುದ್ದೆಗಳ ಭರ್ತಿ- ಸುದ್ದಿಜಾಲ ನ್ಯೂಸ್

By | 14/12/2021

ನವದೆಹಲಿ : ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ 41,177 ಹುದ್ದೆಗಳು ಖಾಲಿ ಇದ್ದು, ಅಗತ್ಯಾನುಸಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ 2021ರ ಡಿಸೆಂಬರ್ 1 ರ ವೇಳೆಗೆ ಮಂಜೂರಾಗಿರುವ ಒಟ್ಟು ಹುದ್ದೆಗಳ ಸಂಖ್ಯೆ 8,05,986, ಇದರಲ್ಲಿ 41,177 ಹುದ್ದೆಗಳು ಖಾಲಿ ಇದ್ದು, ಬ್ಯಾಂಕ್ ಗಳ ಪೈಕಿ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ 8,544 ಹುದ್ದೆಗಳು ಖಾಲಿ ಇವೆ. ಅಗತ್ಯಾನುಸಾರ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕ ಬ್ಯಾಂಕ್ ಗಳಲ್ಲಿ ಅಧಿಕಾರಿ, ಕ್ಲರ್ಕ್, ಉಪ ಸಿಬ್ಬಂದಿ ವಿಭಾಗದಲ್ಲಿ ಖಾಲಿಯಾಗಿರುವ ಹುದ್ದೆಗಳು ಪಂಜಾಬ್ ನ್ಯಾಷನಲ್ ನಲ್ಲಿ 6,743, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,295, ಇಂಡಿಯಾ ಓವರ್ ಸೀಸ್ ಬ್ಯಾಂಕ್ ನಲ್ಲಿ 5,112 ಮತ್ತು ಬ್ಯಾಂಕ್ ಆಫ್ ಇಂಡಿಯಾದಲ್ಲಿ 4,848 ಹುದ್ದೆಗಳು, ಎಸ್ ಬಿಐ ನಲ್ಲಿ 1,423 ಅಧಿಕಾರಿಗಳ ಹಾಗೂ 5,121 ಕ್ಲರ್ಕ್ ಗಳ ಮತ್ತು ಬ್ಯಾಂಕ್ ಆಫ್ ಇಂಡಿಯಾದಲ್ಲಿ 4,848 ಹುದ್ದೆಗಳು, ಎಸ್ ಬಿಐ ನಲ್ಲಿ 1,423 ಅಧಿಕಾರಿಗಳ ಹಾಗೂ 5,121 ಕ್ಲರ್ಕ್ ಗಳ ಹುದ್ದೆಗಳು ಖಾಲಿ ಇವೆ.

Leave a Reply

Your email address will not be published. Required fields are marked *