ಕರ್ನಾಟಕ ಪರೀಕ್ಷಾ ಪ್ರಾಧಿಕಾರ ; ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

By | 01/10/2021

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆ ಗಳನ್ನು ಭರ್ತಿ ಮಾಡಲು ಇದೀಗ ಅಧಿಸೂಚನೆ ಬಿಡುಗಡೆ ಆಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಬಿಡುಗಡೆ ಆಗಿದೆ.

2015 ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದೆ ಭರ್ತಿಯಾಗದಿರುವ 145 ಹುದ್ದೆಗಳನ್ನು ಒಳಗೊಂಡಂತೆ ಪ್ರಸ್ತುತ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.

ಹುದ್ದೆ : ಸಹಾಯಕ ಪ್ರಾಧ್ಯಾಪಕರು

ಹುದ್ದೆಗಳ ಸಂಖ್ಯೆ : 1242

ಈ ಹುದ್ದೆಗಳ ಪೈಕಿ 1021 non HK ಹುದ್ದೆಗಳು, 221 HK ಹುದ್ದೆಗಳು ಖಾಲಿ ಇವೆ‌.

ವಿದ್ಯಾರ್ಹತೆ : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಖಾಲಿ ಇರುವ ಹುದ್ದೆಯ ವಿಷಯಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ ಜೊತೆಗೆ ಎನ್ ಇಟಿ, ಕೆಎಸ್ ಇಟಿ, ಪಿಹೆಚ್ ಡಿ ಉತ್ತೀರ್ಣರಾಗಿರಬೇಕು.

ಪ್ರಮುಖ ದಿನಾಂಕ : ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 07-10-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-11-2021

ಈ ಹುದ್ದೆಗಳಲ್ಲಿ ಶೇ.95 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಮತ್ತು ಶೆ.5 ರಷ್ಟು ಇಲಾಖೆಯ ಗ್ರೂಪ್ ಸಿ ವೃಂದದಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿದೆ.

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಯುಜಿಸಿ ವೇತನ ಶ್ರೇಣಿ ರೂ. 57,700- 1,82,400 ರವರೆಗೆ ಇರುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೀಸಲಾತಿ ( ನೇರ ಮತ್ತು ಸಮತಳ) ಮತ್ತು ರೋಸ್ಟರ್ ಗಳ ಮೂಲಕ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ

Leave a Reply

Your email address will not be published. Required fields are marked *