ಕೊಪ್ಪಳ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ( ರಿ) : ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿ- ಸುದ್ದಿಜಾಲ ನ್ಯೂಸ್

By | 18/12/2021

ಕೊಪ್ಪಳ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ( ರಿ) , ಕೊಪ್ಪಳ ಇಲ್ಲಿ ಸಿಬ್ಬಂದಿಗಳ ನೇರ ನೇಮಕಾತಿಗೆ ಸಂದರ್ಶನದ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು : ಸಹಾಯಕ ಪ್ರಾಧ್ಯಾಪಕರು

ಹುದ್ದೆ ಸಂಖ್ಯೆ : 02

ಡಿಪಾರ್ಟ್ಮೆಂಟ್ : ಸಾಮಾನ್ಯ ವೈದ್ಯಶಾಸ್ತ್ರ ವಿಭಾಗ – 1& ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗ – 01

ಬೋಧಕ ಹುದ್ದೆಗಳು ಎಐಸಿಟಿಇ ವೇತನ ಶ್ರೇಣಿ ಮತ್ತು ಇತರೆ ಅರ್ಹ ಭತ್ಯೆಗಳನ್ನು ಒಳಗೊಂಡಿರುತ್ತದೆ.

ಸಂದರ್ಶನಕ್ಕೆ ಹಾಜರಾಗಬಯಸುವ ಅಭ್ಯರ್ಥಿಗಳು ಅಗತ್ಯವಾದ ಎಲ್ಲಾ ಮೂಲ ದಾಖಲಾತಿಗಳ ಜೊತೆಗೆ ಎರಡು ಸೆಟ್ ಜೆರಾಕ್ಸ್ ಪ್ರತಿಗಳು ಮತ್ತು ಎರಡು ಪಾಸ್ ಪೋರ್ಟ್ ಫೋಟೋಗಳೊಂದಿಗೆ ನಿರ್ದೇಶಕರ ಕಾರ್ಯಾಲಯ, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಪ್ಪಳ ಇಲ್ಲಿ ದಿನಾಂಕ 27.12.2021 ರಂದು ಬೆಳಿಗ್ಗೆ 9.30 ಗಂಟೆಗೆ ಆಯ್ಕೆ ಸಮಿತಿಯ ಮುಂದೆ ಹಾಜರಾಗಬೇಕು. ಲಕೋಟೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಯಾವ ಹುದ್ದೆಗೆ ಮತ್ತು ವಿಭಾಗಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದೆ ಎಂಬುದನ್ನು ಬರೆಯಬೇಕು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಜಾಲತಣಕ್ಕೆ ಭೇಟಿ ನೀಡಬಹುದು.

Leave a Reply

Your email address will not be published. Required fields are marked *