KPSC ಇಲಾಖಾ ಪರೀಕ್ಷೆ ಅಧಿಸೂಚನೆ ಬಿಡುಗಡೆ

By | 12/10/2021

ಕರ್ನಾಟಕ ಲೋಕಸೇವಾ ಆಯೋಗವು 2021 ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ನೋಟಿಫಿಕೇಶನ್ ಪ್ರಕಟಿಸಿದೆ. ಸರಕಾರಿ ನೌಕರರು ಈ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್ಲೈನ್ ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಲು ಆರಂಭಿಕ ದಿನಾಂಕ : 12-10-2021

ಆನ್ಲೈನ್ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 12-11-2021

ಅರ್ಜಿ ಸಲ್ಲಿಸುವ ವಿಧಾನ

ಇಲಾಖಾ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗದ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಯಾರೆಲ್ಲಾ ಇಲಾಖೆ ಪರೀಕ್ಷೆ ತೆಗೆದುಕೊಳ್ಳಲು ಅರ್ಹರು ?

ಸರಕಾರಿ ನೌಕರರು, ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ/ಮಂಡಳಿ/ಸ್ಥಳೀಯ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು/ ಪ್ರಾಧಿಕಾರಗಳ ಖಾಯಂ ನೌಕರರು

ಸೂಚನೆ : ಗ್ರೂಪ್ ಡಿ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಪ್ರಥಮ ಹಂತದ ಪರೀಕ್ಷೆಗಳು :

ಪ್ರಥಮ ಹಂತವಾಗಿ 04 ವಿಷಯಗಳ ಪರೀಕ್ಷೆಗಳನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುವುದು. ದಿನಾಂಕ 04-01-2022 ರಿಂದ 06-01-2022 ರವರೆಗೆ ನಡೆಯುತ್ತದೆ

ದ್ವಿತೀಯ ಹಂತದ ಪರೀಕ್ಷೆ

ದ್ವಿತೀಯ ಹಂತವಾಗಿ 46 ವಿಷಯಗಳ ಪರೀಕ್ಷೆಯನ್ನು ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಕಲಬುರಗಿ ಮತ್ತು ನವದೆಹಲಿ ಹಾಗೂಮಸ್ಸೂರಿ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುವುದು. ದಿನಾಂಕ 10-01-2022 ರಿಂದ 21-01-2022 ರವರೆಗೆ ನಡೆಸಲಾಗುತ್ತದೆ.

ಮೂರನೇ ಹಂತದ ಪರೀಕ್ಷೆಗಳು

ತೃತೀಯ ಹಾಗೂ ಅಂತಿಮ ಹಂತವಾಗಿ 18 ವಿಷಯಗಳ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಮತ್ತು ಅಪೇಕ್ಷಿತಾ ಅರ್ಹ ಅಭ್ಯರ್ಥಿಗಳಿದ್ದಲ್ಲಿ ನವದೆಹಲಿ ಮತ್ತು ಮಸ್ಸೂರಿಯಲ್ಲಿ ನಡೆಸಲಾಗುತ್ತದೆ. ದಿನಾಂಕ 24-01-2022 ರಿಂದ 30-01-2022 ರವರೆಗೆ ನಡೆಸಲಾಗುತ್ತದೆ.

ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಒಟ್ಟು 96 ಪತ್ರಿಕೆಗಳಿಗೆ ಹಾಗೂ ವಿವರಣಾತ್ಮಕ ಮಾದರಿಯ ಒಟ್ಟು 19 ಪತ್ರಿಕೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಪಠ್ಯಕ್ರಮವನ್ನು ಮತ್ತು ಇತರೆ ಮಾಹಿತಿಗಳನ್ನು ನೋಟಿಫಿಕೇಶನ್ ಮೂಲಕ ಚೆಕ್ ಮಾಡಬಹುದು.

Leave a Reply

Your email address will not be published. Required fields are marked *