‘ರಾಷ್ಟ್ರೀಯ ಶಿಕ್ಷಣ ನೀತಿ’ ಯಂತೆ ಇನ್ಮುಂದೆ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಯಾವ ರೀತಿ ಗೊತ್ತಾ? ‘ ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

By | 25/08/2021

ಆಗಸ್ಟ್‌ 23,2021 ರಿಂದ ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ( NEP) – 2020ರ ಅನುಸಾರವಾಗಿ ತರಗತಿ, ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದೆ. ಈ ರಾಷ್ಟ್ರೀಯ ಶಿಕ್ಷಣ ‌ನೀತಿಯಂತೆ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ಬಗ್ಗೆ ಹಾಗೂ ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಶಿಕ್ಷಕರ ಆಯ್ಕೆ ಪ್ರಕ್ರಿಯೆ NEP ಯಂತೆ ಹೀಗೆ ನಡೆಯಲಿದೆ

ಜಿಪಿಎಸ್ ಟಿಆರ್ ನ‌ 6 ರಿಂದ 8 ನೇ ತರಗತಿಯ ಶಿಕ್ಷಕರಾಗಲು ಬಿಎ, ಬಿಎಡ್, ಟಿಇಟಿ ಅಥವಾ ಪಿಯುಸಿ, ಡಿಇಡಿ, ಬಿಎ, ಟಿಇಟಿ ಮಾಡಿರಬೇಕು.

HSTR ನ 9, 10, 11 ಮತ್ತು 12 ನೇ ತರಗತಿಗಳ ಶಿಕ್ಷಕರಾಗಲೂ, ಎಂ.ಬಿಎಡ್ ಮಾಡಿರಬೇಕು. ಇಲ್ಲಿ ಟಿಇಟಿ ಅವಶ್ಯಕತೆ ಇರುವುದಿಲ್ಲ.

GPSTR ಮತ್ತು HSTR ಎರಡಕ್ಕೂ ವಯೋಮಾನದ ಮಿತಿ ಎಸ್ಸಿ, ಎಸ್ಟಿಗಳಿಗೆ 45 ವರ್ಷ, ಒಬಿಸಿಗಳಿಗೆ 43ವರ್ಷ, ಜನರಲ್ ಕೆಟಗರಿಯವರಿಗೆ 40 ವರ್ಷವಾಗಿದೆ.

GPSTR 6 ರಿಂದ 8 ನೇ ತರಗತಿ ಶಿಕ್ಷಕರ ಹುದ್ದೆಗಳ ಆಯ್ಕೆಗಾಗಿ ಶೇ.10 ರಷ್ಟು ಡಿಇಡಿ, ಬಿಇಡಿ ಅಂಕ, ಶೇ. 15 ರಷ್ಟು ಬಿಎ ಅಂಕ, ಶೇ.25 ರಷ್ಟು ಟಿಇಟಿ ಅಂಕ ಹಾಗೂ ಶೇ.50 ರಷ್ಟು ಸಿಇಟಿ ಅಂಕ ಸೇರಿ ಶೇ.100 ರಷ್ಟು ಇರಲಿದೆ. ಈ ವಿಧಾನದ ಮೂಲಕ ಶಿಕ್ಷಕರ ಹುದ್ದೆಗೆ ಆಯ್ಕೆ ನಡೆಯಲಿದೆ.

HSTR ಪ್ರೌಢ ಶಾಲಾ ಶಿಕ್ಷಕರ ಹುದ್ದೆಗೆ ಶೇ. 20 ರಷ್ಟು ಬಿಎ ಅಂಕ, ಶೇ.10 ರಷ್ಟು ಎಂಎ ಅಂಕ, ಶೇ. 60 ರಷ್ಟು ಸಿಇಟಿ ಅಂಕ ಸೇರಿದಂತೆ ಶೇ.100 ರಷ್ಟು ಅಂಕಗಳೊಂದಿಗೆ ಆಯ್ಕೆ ವಿಧಾನ ನಡೆಯಲಿದೆ.

GPSTRರ 6 ರಿಂದ 8 ನೇ ಶಿಕ್ಷಕರಾಗಲು ಬಿಎ ನಲ್ಲಿ ಐಚ್ಛಿಕವಾಗಿ ವಿಷಯಗಳಲ್ಲಿ ಕಡ್ಡಾಯವಾಗಿ ಎಸ್ಸಿ- ಎಸ್ಟಿ ಅಭ್ಯರದಥಿಒ ಕನಿಷ್ಠ ಶೇ.45 ಅಂಕ ಕಡ್ಡಾಯ. ಇತರರಿಗೆ ಶೇ.50 ರಷ್ಟು ಅಂಕ ಪಡೆದಿರೋದು ಕಡ್ಡಾಯವಾಗಿದೆ.

HSTR ಪ್ರೌಢ ಶಾಲೆ ಶಿಕ್ಷಕರಾಗಲು ಎಂಎ ಯಲಿ ಎಸ್ಸಿ- ಎಸ್ಟಿ ಅಭ್ಯರ್ಥಿಗಳು ಶೇ.45 ರಷ್ಟು ಅಂಕ, ಇತರೆ ಅಭ್ಯರ್ಥಿಗಳು ಶೇ.50 ಅಂಕ ಪಡೆದಿರೋದು ಕಡ್ಡಾಯವಾಗಿದೆ.

GPSTR ಶಾಲೆಗಳಲ್ಲಿ ನ ವಿಜ್ಞಾನ, ಸಮಾಜ ,ಗಣಿತ ಶಿಕ್ಷಕರಾಗಲು ವಿವರಣಾತ್ಮಕ – 150, ಕನ್ನಡ- 100, ಸಾಮಾನ್ಯ ಜ್ಞಾನ – 150 ಒಟ್ಟು 400 ಅಂಕಗಳಿಗೆ ಮೂರು ಪತ್ರಿಕೆಗಳ ಸಿಇಟಿ ಪರೀಕ್ಷೆ ನಡೆಯಲಿದೆ. ಹೀಗೆ ನಡೆಯುವಂತ ಪತ್ರಿಕೆ-2 ಮತ್ತು 3 ರಲ್ಲಿ ಕ್ರಮವಾಗಿ ಶೇ.50 , 60 ಅಂಕ ಪಡೆದಿರಬೇಕು.

GPSTR ಇಂಗ್ಲೀಷ್ ಶಿಕ್ಷಕರ ಹುದ್ದೆಗಾಗಿ ಸಾಮಾನ್ಯ ಜ್ಞಾನ 150, ಡಿಸ್ಕ್ರಿಪ್ಷನ್ ಪೇಪರ್ 150 ಅಂಕಗಳು ಸೇರಿದಂತೆ 300 ಅಂಕಗಳಿಗೆ ಸಿಇಟಿ ಪರೀಕ್ಷೆ ನಡೆಯಲಿದೆ. 2 ನೇ ಪೇಪರ್ ನಲ್ಲಿ ಕಡ್ಡಾಯವಾಗಿ ಶೇ‌.50 ರಷ್ಟು ಅಂಕ ಪಡೆಯಬೇಕಿದೆ.

ಇಂಜಿನಿಯರಿಂಗ್ ನವರು ಆರ್ಕಿಟೆಕ್ಚರ್ ಒಂದನ್ನು ಬಿಟ್ಟು ಯಾವುದೇ ಕೋರ್ಸ್ ಜೊತೆಗೆ ಗಣಿತ ಓದಿರಬೇಕು. ಇದಲ್ಲದೆ ಬಿಎಡ್, ಟಿಇಟಿ ಪರೀಕ್ಷೆ ಪಾಸ್ ಮಾಡಿರೋದು ಕಡ್ಡಾಯವಾಗಿದೆ.

Leave a Reply

Your email address will not be published. Required fields are marked *