ONGC : 21 ಹುದ್ದೆಗಳಿಗೆ ನೇಮಕಾತಿ- ಸುದ್ದಿಜಾಲ ನ್ಯೂಸ್

By | 16/12/2021

ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ ( ಓಎನ್ ಜಿಸಿ) ದಲ್ಲಿ ಖಾಲಿ ಇರುವ ಹೆಚ್ ಆರ್ ಎಕ್ಸಿಕ್ಯೂಟಿವ್ ಮತ್ತು ಸಂಪರ್ಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 15, ಡಿಸೆಂಬರ್ 2021

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 4, 2022 ರಾತ್ರಿ 11.55 ರೊಳಗೆ

ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ ಮತ್ತು ಅನುಭವ : ಎಂಬಿಎ/ ಪೋಸ್ಟ್ ಗ್ರಾಜ್ಯುಯೇಶನ್ ಪದವಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆ ; ಪಿಜಿ ಪದವಿ/ ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ / ವಿಶ್ವವಿದ್ಯಾಲಯ / ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ಹುದ್ದೆಗಳ ವಿವರ : ಹೆಚ್ ಆರ್ ಎಕ್ಸಿಕ್ಯೂಟಿವ್ – 15 ಹುದ್ದೆಗಳು

ಸಾರ್ವಜನಿಕ ಸಂಪರ್ಕ ಅಧಿಕಾರಿ – 6 ಹುದ್ದೆಗಳು

ಒಟ್ಟು 21 ಹುದ್ದೆಗಳು.

ವಯೋಮಿತಿ : ಈ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಗರಿಷ್ಠ 30 ವರ್ಷ ವಯೋಮಿತಿಯೊಳಗಿರಬೇಕು‌. ಓಬಿಸಿಯ ಗರಿಷ್ಠ 33 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಮತ್ತು ಗರಿಷ್ಠ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ನೇಮಕಾತಿ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಆಯ್ಕೆ ಪ್ರಕ್ರಿಯೆ : ಶೈಕ್ಷಣಿಕ ಅರ್ಹತೆ, ಯುಜಿಸಿ ಎನ್ ಇಟಿ ಜೂನ್ 2020 ರ ಅಂಕಗಳ ಆಧಾರದ ಮೇಲೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಅರ್ಜಿ ಶುಲ್ಕ : ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 300/- ರೂ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬಹುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.

ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *