SSC ಇಂದ ಗ್ರೂಪ್ ಬಿ, ಸಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ : ಜನವರಿ 23 ರವರೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ – ಸುದ್ದಿಜಾಲ ನ್ಯೂಸ್

By | 24/12/2021

ಸೆಲೆಕ್ಷನ್ ಕಮಿಷನ್ ( ಸಿಬ್ಬಂದಿ ನೇಮಕಾತಿ ಆಯೋಗ ) ಕಂಬೈನ್ಡ್ ಗ್ರಾಜ್ಯುಯೇಟ್ ಲೆವೆಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. ಟೈಯರ್ 1 ಪರೀಕ್ಷೆಗೆ ರಿಜಿಸ್ಟ್ರೇಶನ್ ಪಡೆಯಲು ಲಿಂಕ್ ಬಿಡುಗಡೆ ಮಾಡಲಾಗಿದೆ. ಯಾವುದೇ ಪದವೀಧರರು ಎಸ್ ಎಸ್ ಸಿ ಸಿಜಿಎಲ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಕಿಯ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :23-12-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 23, 2022

ಅಸಿಸ್ಟೆಂಟ್ ಅಡಿಟ್ ಆಫೀಸರ್, ಇನ್ಸ್ ಪೆಕ್ಟರ್, ಇನ್ ಕಮ್ ಟ್ಯಾಕ್ಸ್ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್, ಆಡಿಟರ್, ಜೆಎಸ್ ಒ ಮತ್ತು ಸ್ಪೆಷಲಿಸ್ಟ್ ಆಫೀಸರ್ ಸೇರಿದಂತೆ 36 ವಿಧದ ಹುದ್ದೆಗಳನ್ನು ಕೇಂದ್ರ ಸರಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳಲ್ಲಿ ನೇಮಕ ಮಾಡಲು ಎಸ್ ಎಸ್ ಸಿ ನೇಮಕ ಪ್ರಕ್ರಿಯೆ ನಡೆಸುತ್ತದೆ.

ಎಸ್ ಎಸ್ ಸಿ ಸಿಜಿಎಲ್ ಹುದ್ದೆಗಳ ಭರ್ತಿಗೆ 3 ಹಂತದ ಪರೀಕ್ಷೆ ಇರುತ್ತದೆ‌. ಟೈಯರ್ 1 ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮುಂದಿನ ಪರೀಕ್ಷೆ ಹಂತ ಟೈಯರ್ 2, ಟೈಯರ್ 3 ( ವಿವರಣಾತ್ಮಕ) ಪರೀಕ್ಷೆ ಬರೆಯಬಹುದು.

ಒಟ್ಟು ಹುದ್ದೆಗಳ ಸಂಖ್ಯೆಯನ್ನು ಎಸ್ ಎಸ್ ಸಿ ಮುಂದಿನ ದಿನಗಳಲ್ಲಿ ಅಪ್ ಡೇಟ್ ಮಾಡಲಿದೆ. 36 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.

ವಯೋಮಿತಿ : ಕನಿಷ್ಠ 18 ವರ್ಷ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗರಿಷ್ಠ ವಯೋಮಿತಿ ಹುದ್ದೆಗಳ ಆಧಾರದಲ್ಲಿ 27 ರಿಂದ 30 ವರ್ಷದವರೆಗೆ ಇರುತ್ತದೆ. ಅಲ್ಲದೇ ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದೆ.

ವಿದ್ಯಾರ್ಹತೆ : ಪದವಿ

ವೇತನ : ಈ ಹುದ್ದೆಗಳ ಪೈಕಿ ಗ್ರೂಪ್ ಬಿ, ಗ್ರೂಪ್ ಸಿ ಎಂದಿರುತ್ತದೆ. 36 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು , ಯಾವುದೇ ಹುದ್ದೆಗೆ ಕನಿಷ್ಠ 30,000 ದಿಂದ 81,000 ರೂ. ವರೆಗೆ ಮಾಸಿಕ ವೇತನ ಇರುತ್ತದೆ.

ಅರ್ಜಿ ಸಲ್ಲಿಕೆ ಹೇಗೆ ?

ಸ್ಟಾಫ್ ಸೆಲೆಕ್ಷನ್ ಕಮಿಷನ್ ನ ವೆಬ್‌ಸೈಟ್‌ ssc.nic.in ಗೆ ಭೇಟಿ ನೀಡಿ. ನಂತರ ಪೇಜ್ ನಲ್ಲಿ ಕಂಬೈನ್ಡ್ ಗ್ರಾಜ್ಯುಯೇಟ್ ಲೆವೆಲ್ ಪರೀಕ್ಷೆಯ ಅಧಿಸೂಚನೆಗೆ ಸಂಬಂಧಿಸಿದಂತೆ ಲಿಂಕ್ ಕ್ಲಿಕ್ ಮಾಡಿದಾಗ ಅಧಿಸೂಚನೆ ಓಪನ್ ಆಗುತ್ತದೆ. ಓದಿಕೊಳ್ಳಿ. ನಂತರ ssc.nic.in ವೆಬ್ ಪುಟದ ಬಲಭಾಗದಲ್ಲಿ ರಿಜಿಸ್ಟ್ರೇಶನ್ ಪಡೆಯಲು ಅವಕಾಶ ಇರುತ್ತದೆ. ಈಗಾಗಲೇ ಈ ಹಿಂದಿನ ಪರೀಕ್ಷೆಗಳಿಗೆ ರಿಜಿಸ್ಟ್ರೇಶನ್ ಪಡೆದವರು, ಲಾಗಿನ್ ಡೀಟೆಲ್ಸ್ ಮೂಲಕ ಮತ್ತೆ ಅರ್ಜಿ ಸಲ್ಲಿಸಬಹುದು.

ಹೊಸ ಅಭ್ಯರ್ಥಿಗಳು ‘ ನ್ಯೂ ಯೂಸರ್’ ಎಂದಿರುವಲ್ಲಿ ಕ್ಲಿಕ್ ಮಾಡಿ, ಅಗತ್ಯ ಮಾಹಿತಿಗಳನ್ನು ನೀಡಿ ರಿಜಿಸ್ಟ್ರೇಶನ್ ಪಡೆಯಿರಿ. ನಂತರ ಎಸ್ ಎಸ್ ಸಿ ಸಿಜಿಎಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಶುಲ್ಕವನ್ನು ಕೂಡಾ ಆನ್ಲೈನ್ ಮೂಲಕವೇ ಪಾವತಿಸಬಹುದು. ಒಮ್ಮೆ ಅರ್ಜಿ ಪೂರ್ಣಗೊಂಡ ನಂತರ ಮುಂದಿನ ರೆಫರೆನ್ಸ್ ಗೆ ಪ್ರಿಂಟ್ ತೆಗೆದುಕೊಳ್ಳಿ.

ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *