Tag Archives: ಕನ್ನಡ ರೆಸಿಪಿ

ಪುಟಾಣಿಗಳಿಗೆ ಇಷ್ಟವಾಗುವ ಬಟಾಣಿ ಪಲಾವ್ ರೆಸಿಪಿ

By | 01/09/2018

ಬೆಳಗ್ಗೆ ತಿಂಡಿ ಏನು ಮಾಡುವುದು ಎಂದು ಯೋಚನೆ ಮಾಡುತ್ತಿದ್ದೀರಾ…? ಸುಲಭದ ಅಡುಗೆಯೆಂದರೆ ಬಟಾಣಿ ಬಲಾವ್.  ಅರೆ ಪಲಾವ್ ಮಾಡುವುದಕ್ಕೆ ಬೇಕಾದ ತರಕಾರಿ ಇಲ್ಲ ಎಂದು ಕೊಳ್ಳುತ್ತೀರಾ. ಆದರೆ ಈ ಬಟಾಣಿ ಪಲಾವ್ ಗೆ ತರಕಾರಿನೂ ಬೇಕಾಗಿಲ್ಲ. ಬಟಾಣಿ ಇದ್ದರೆ ಆಯ್ತು. ಹಸಿ ಬಟಾಣಿ ಇದ್ದರೂ ಆಯ್ತು. ಇಲ್ಲದಿದ್ದರೆ ನೆನಸಿಟ್ಟ ಬಟಾಣಿಯಾದರೂ ಆಯ್ತು. ಇವಿಷ್ಟಿದ್ದರೆ ರುಚಿ ರುಚಿಯಾದ ಪಲಾವ್ ಅನ್ನು ಸವಿಯಬಹುದು. ಬಟಾಣಿ ಪಲಾವ್ ಮಾಡಲು ಬೇಕಾಗುವ ಸಾಮಾಗ್ರಿಗಳು 1ಕಪ್ ಬಾಸುಮತಿ ಅಕ್ಕಿ ತೆಗೆದುಕೊಳ್ಳಿ. ಅರ್ಧ ಕಪ್ ನೆನಸಿಟ್ಟುಕೊಂಡ ಬಟಾಣಿಯಾದರೂ ಪರ್ವಾಗಿಲ್ಲ. ಹಸಿ… Read More »

ಎಲ್ಲರಿಗೂ ಪ್ರಿಯವಾದ ಈರುಳ್ಳಿ ದೋಸೆ ಹೀಗೆ ಮಾಡಿ

By | 01/09/2018

ಹೋಟೆಲ್ ಗೆ ಹೋದಾಗ ಮಸಾಲೆದೋಸೆ, ಪ್ಲೈನ್ ದೋಸೆ ಸವಿದಿರುತ್ತೀರಿ. ಹಾಗೇ ಈರುಳ್ಳಿ ದೋಸೆನೂ. ಆದರೆ ಮನೆಯಲ್ಲಿ ಇದನ್ನು ಟ್ರೈ ಮಾಡುವುದು ಹೇಗೇ ಎಂದು ಯೋಚನೆ ಮಾಡುತ್ತೀದ್ದೀರಾ…? ಮನೆಯಲ್ಲಿಯೇ ಈರುಳ್ಳಿ ದೋಸೆ ಮಾಡುವುದು ಹೇಗೆ ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ. ರುಚಿಯಾದ ಈರುಳ್ಳಿಯನ್ನು ದೋಸೆಯನ್ನು ಬೆಳಿಗ್ಗಿನ ಉಪಹಾರಕ್ಕಾಗಿ ನಿಮ್ಮ ಮನೆಯಲ್ಲಿ ತಯಾರಿಸಿ. ಈರುಳ್ಳಿ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು ಉದ್ದಿನಬೇಳೆ- 1/2 ಕಪ್  ತೆಗೆದುಕೊಳ್ಳಿ. ಹಾಗೇ ಅಕ್ಕಿ – 2 ಕಪ್‌ಗಳು, ಮೆಂತ್ಯ – 1ಚಮಚ . ಈರುಳ್ಳಿ – ಕತ್ತರಿಸಿದ… Read More »

ಪುದೀನಾ ರೈಸ್ ಬಾತ್ ರೆಸಿಪಿ- ಬೆಳಗಿನ ಉಪಹಾರಕ್ಕೆ ಪುದೀನಾ ಅನ್ನ

By | 31/08/2018

ಮನೆಗೆ ತರಕಾರಿ ಸೊಪ್ಪು ತರುವಾಗ ಪುದೀನಾ ಕೊತ್ತಂಬರಿಸೊಪ್ಪನ್ನು ತರುತ್ತೇವೆ. ಪುದೀನಾದಿಂದ ಚಟ್ನಿ ಇತ್ಯಾದಿಗಳನ್ನು ಮಾಡುತ್ತೇವೆ ಇದೇ ಪುದೀನಾದಿಂದ ಒಂದೊಳ್ಳೆ ರೈಸ್ ಬಾತ್ ಕೂಡ ಮಾಡಬಹುದು. ಕೆಲವೊಮ್ಮೆ ಬೆಳಿಗ್ಗಿನ ತಿಂಡಿ ಮಾಡುವುದಕ್ಕೆ ಏನೂ ಇಲ್ಲದಾಗ ಈ ಪುದೀನಾದಿಂದ ಒಂದೊಳ್ಳೆ ಉಪಹಾರವನ್ನು ತಯಾರಿಸಿ ಮನೆಮಂದಿಯೆಲ್ಲಾ ಸವಿಯಿರಿ. ಮನೆಯಲ್ಲಿ ನಿನ್ನೆ ಮಾಡಿದ ಅನ್ನ ಉಳಿದಿದ್ದರೆ, ದಿನಾ ಅದೇ ಚಿತ್ರಾನ್ನ, ಲೆಮನ್ ರೈಸ್ ಮಾಡಿ ತಿಂದು ಬೇಜಾರಾಗಿದ್ದರೆ ಈ ಪುದೀನಾ ರೈಸ್ ಅನ್ನು ಒಮ್ಮೆ ಮಾಡಿ ಸವಿಯಿರಿ. ಪುದೀನಾ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಹಾಗಾದರೆ ಇದಕ್ಕೆ… Read More »

ರವಾ ಇಡ್ಲಿ- ರುಚಿಕರ, ಆರೋಗ್ಯಕರ ಬ್ರೇಕ್ ಫಾಸ್ಟ್ ರೆಸಿಪಿ

By | 31/08/2018

ರವಾ ಇಡ್ಲಿ ಇದು ಆರೋಗ್ಯಕರವಾದ ತಿಂಡಿಯಾಗಿದ್ದು ಬೆಳಗಿನ ಉಪಹಾರಕ್ಕೆ ಅತ್ಯಂತ ಸೂಕ್ತ. ಇದನ್ನು ಮಕ್ಕಳು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಾರೆ. ಚಟ್ನಿ ಮತ್ತು ಸಾಂಬಾರ್ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಏನು ತಿಂಡಿ ಮಾಡಲಿ ಎಂಬ ಯೋಚನೆಯಲ್ಲಿದ್ದವರಿಗೆ, ಮನೆಗೆ ದಿಡೀರ್ ಎಂದು ಯಾರಾದರೂ ಅತಿಥಿಗಳು ಬಂದಾಗ  ಈ ರವಾ ಇಡ್ಲಿ ಮಾಡಬಹುದು. ಇದನ್ನು ತಯಾರಿಸುವುದೂ ಸುಲಭ, ರುಚಿಕರ ಹಾಗೂ ಆರೋಗ್ಯಕರ ಕೂಡ ಹೌದು.  ಇಡ್ಲಿ, ದೋಸೆ, ತಿಂದು ಬೇಜಾರಾದವರು ಈ ರವಾ ಇಡ್ಲಿ ಮಾಡಿ ನೋಡಿ. ಇನ್ನು ಇದಕ್ಕೆ… Read More »

ರೆಸಿಪಿ: ರುಚಿಕರ ಸಬ್ಬಕ್ಕಿ ಕಿಚಡಿ ಹೀಗೆ ಮಾಡಿ

By | 28/08/2018

ಕಿಚಡಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತಿಂಡಿ. ಆದರೆ ಕೆಲವರಿಗೆ ಇದನ್ನು ಮಾಡುವುದು ಹೇಗೆ ಎಂಬ ಚಿಂತೆಯೂ ಕಾಡುತ್ತಿರುತ್ತದೆ. ರುಚಿ ನೋಡಿರುವವರಿಗೆ ಇದನ್ನು ಮಾಡುವ ವಿಧಾನದ ಬಗ್ಗೆ ತಿಳಿಯಬೇಕೆನಿಸುವುದು ಸಹಜ, ಏಕೆಂದರೆ ಈ ಕಿಚಡಿ ಬೆಳಗಿನ ತಿಂಡಿಯಾಗಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ನಿಮಗೂ ಕೂಡ ಕಿಚಡಿ ಮಾಡುವುದು ಹೇಗೆ ಎಂಬ ಕುತೂಹಲವಿರಬಹುದಲ್ಲವೇ? ಇದನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ರೆಸಿಪಿ ಇಲ್ಲಿದೆ ನೋಡಿ. ಹೆಸರುಬೇಳೆ ಕಿಚಡಿ, ರೈಸ್ ಕಿಚಡಿಯನ್ನೆಲ್ಲಾ ನೀವು ಸವಿದಿರುತ್ತೀರಿ. ನಾನಿಲ್ಲಿ ಸಾಬಕ್ಕಿ ಕಿಚಡಿ ಮಾಡುವುದರ ಕುರಿತು ಮಾಹಿತಿ ನೀಡಿದ್ದೇನೆ. ಕಡಿಮೆ ಸಾಮಾಗ್ರಿಯಲ್ಲಿ ಫಟಾಫಟ್… Read More »

ಹೋಟೆಲ್ ಸ್ಟೈಲ್ ಮಸಾಲೆದೋಸೆ ಮನೆಯಲ್ಲಿಯೇ ರೆಡಿಮಾಡಿ

By | 27/08/2018

ಬೆಳಿಗ್ಗಿನ ತಿಂಡಿ ಏನು ಮಾಡಬೇಕು ಎಂಬುದೇ ಕೆಲವರಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ ತಿಂದು ಬೋರು ಅನಿಸಿದ್ರೆ, ಒಮ್ಮೆ ಈ ಮಸಾಲ ದೋಸೆ ಪ್ರಯತ್ನಿಸಿ ನೋಡಿ.  ಮಸಾಲಾ ದೋಸೆ ಮನೆಯಲ್ಲಿ ಚೆನ್ನಾಗಿ ಬರುತ್ತಾ…?, ಕೆಟ್ಟು ಹೋದರೆ, ರುಚಿ ಬಾರದೇ ಇದ್ದರೆ, ಮನೆಯಲ್ಲಿ ಯಾರು ತಿನ್ನದೇ ಹೋದರೆ ಏನು ಗತಿ ಎಂದೆಲ್ಲಾ  ತಲೆಬಿಸಿ ತೆಗೆದುಕೊಳ್ಳಬೇಡಿ. ಇಲ್ಲಿ ಹೇಳಿರುವ ಪ್ರಕಾರ ಒಮ್ಮೆ ಟ್ರೈ ಮಾಡಿ ನೋಡಿ. ರುಚಿಕರವಾದ ಮಸಾಲಾ ದೋಸೆಯನ್ನು ಮನೆಯಲ್ಲಿಯೇ ಮಾಡಿಕೊಂಡು ಸವಿಯಿರಿ. ಅಂದಹಾಗೇ ಮಾಡುವುದಕ್ಕೆ ಬೇಕಾದ ಸಾಮಾಗ್ರಿಗಳು ಇಲ್ಲಿವೆ ನೋಡಿ.… Read More »