Tag Archives: kannada recipe

ರೆಸಿಪಿ- ಮಕ್ಕಳು ಇಷ್ಟಪಡುವಂತಹ ಬ್ರೇಡ್ ಪಿಜ್ಜಾ

By | 16/10/2018

ಸಾಮಾನ್ಯವಾಗಿ ಬ್ರೇಡ್ ನ್ನು ಹಾಲು, ಟೀಯಲ್ಲಿ ಮುಳುಗಿಸಿಕೊಂಡು ತಿನ್ನತ್ತಾರೆ. ಆದರೆ ಇದನ್ನು ಹಾಗೇ ತಿನ್ನುವ ಬದಲು ಸ್ನ್ಯಾಕ್ಸ್ ರೀತಿಯಾಗಿ ತಯಾರಿಸಿಕೊಂಡು ತಿಂದರೆ ಚೆನ್ನಾಗಿರುತ್ತದೆ. ಮಕ್ಕಳು ಹೆಚ್ಚಾಗಿ ಹೊರಗಡೆ ಸಿಗುವಂತಹ ಪಿಜ್ಜಾ, ಬರ್ಗರ್ ಗಳನ್ನು ಇಷ್ಟಪಡುತ್ತಾರೆ. ಈ ರೀತಿ ಹೊರಗಡೆ ಸಿಗುವ ತಿಂಡಿಗಳನ್ನು ತಿನ್ನುವುದರಿಂದ ಅವರ ಆರೋಗ್ಯ ಹಾಳಾಗಬಹುದು. ಆದ್ದರಿಂದ ಪಿಜ್ಜಾ ತಿನ್ನಲು ಇಷ್ಟಪಡುವ ಮಕ್ಕಳಿಗೆ ತುಂಬಾ ಸುಲಭವಾಗಿ ತಯಾರಾಗುವಂತಹ ಬ್ರೇಡ್ ಪಿಜ್ಜಾ ಮಾಡಿಕೊಡಿ. ಇದರಿಂದ ಮಕ್ಕಳು ತುಂಬಾ ಸಂತೋಷ ಪಡುತ್ತಾರೆ.ಬ್ರೆಡ್ ಪಿಜ್ಜಾ ಮಾಡಲು ಏನೆಲ್ಲಾ ಸಾಮಾಗ್ರಿಗಳು ಬೇಕೆಂಬುದನ್ನು ನೋಡೋಣ :ಬ್ರೇಡ್ 3… Read More »

ಕುಂದಾಪುರ ಶೈಲಿಯ ನೀರುದೋಸೆ ಹಾಗೂ ಚಿಕನ್ ಸುಕ್ಕಾ

By | 09/10/2018

ಕುಂದಾಪುರದಲ್ಲಿ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಮಾಡುವಂತಹ ನಾನ್ ವೆಜ್ ರೆಸಿಪಿ ಎಂದರೆ ಅದು ನೀರುದೋಸೆ ಹಾಗೂ ಚಿಕನ್ ಸುಕ್ಕಾ. ಹೆಚ್ಚಾಗಿ ಇದನ್ನು ಎಲ್ಲರೂ ತುಂಬಾ ಇಷ್ಟಪಡುತ್ತಾರೆ. ಯಾಕೆಂದರೆ ಇವೆರಡನ್ನು ಜೊತೆಯಾಗಿ ಸೇವಿಸಿದರೆ ಅದರ ಮಜಾನೆ ಬೇರೆ. ನೀರುದೋಸೆ ಹಾಗೂ ಚಿಕನ್ ಸುಕ್ಕಾ ಮಾಡಲು ಬೇಕಾಗುವಂತಹ ಸಾಮಗ್ರಿಗಳು  ನೀರುದೋಸೆ ಮಾಡಲು : ಅಕ್ಕಿ 2 ಕಪ್, ತೆಂಗಿನಕಾಯಿ ಸ್ವಲ್ಪ, ರುಚಿಗೆ ತಕಷ್ಟು ಉಪ್ಪು.ಚಿಕನ್ ಸುಕ್ಕಾ ಮಾಡಲು ಬೇಕಾಗುವಂತಹ ಸಾಮಗ್ರಿಗಳು : ದನಿಯಾ -3 ಚಮಚ, ಮೆಣಸಿನಕಾಳು-1 1/2 ಚಮಚ, ಜೀರಿಗೆ-1ಚಮಚ, ಮೆಂತ್ಯಕಾಳು,ಸಾಸಿವೆ-1/4 ಚಮಚ,… Read More »

ರುಚಿಕರವಾದ ಹಸಿಬಟಾಣಿ ಸಾರು ಮಾಡುವ ಸುಲಭ ವಿಧಾನ

By | 24/09/2018

ಬಟಾಣಿ ಒಂದು ರುಚಿಕರವಾದ ಧಾನ್ಯ. ಇದನ್ನು ಹಾಕಿ ಮಾಡಿದ ಯಾವುದೇ ಸಾಂಬಾರು, ತಿಂಡಿ ಏನೆ ಇರಲಿ ಅದು ರುಚಿಕರವಾಗಿಯೇ ಇರುತ್ತದೆ. ಚಿಕ್ಕ ಮಕ್ಕಳು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಬಟಾಣಿಯಿಂದ ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಹೆಚ್ಚಾಗಿ ಬಟಾಣಿಯನ್ನು ಹಾಗೇ ಬೇಯಿಸಿ ಅಡುಗೆ ಮಾಡುತ್ತಾರೆ. ಆದರೆ ಬಟಾಣಿಯನ್ನು ರುಬ್ಬಿ ಹಾಕಿ ಮಾಡುವ ಅಡುಗೆಯ ರುಚಿಯೇ ಬೇರೆ. ಇದನ್ನು ಹೆಚ್ಚಾಗಿ ಉತ್ತರಭಾರತದ ಕಡೆ ಮಾಡುತ್ತಾರೆ. ಇಂತಹ ರುಚಿಕರವಾಗ ಬಟಾಣಿ ಸಾಂಬಾರು ಮಾಡುವುದು ಹೇಗೆಂದು ನೋಡೋಣ. ಬಟಾಣಿ ಸಾಂಬಾರು ಮಾಡಲು ಬೇಕಾಗುವ ಸಾಮಗ್ರಿಗಳು : ಹಸಿ… Read More »

ಬರೀ ಆಮ್ಲೆಟ್ ಮಾಡಿ ತಿನ್ನುವ ಬದಲು ಒಮ್ಮೆ ಆಮ್ಲೆಟ್ ಗ್ರೇವಿ ಮಾಡಿ ನೋಡಿ

By | 23/09/2018

ಆಮ್ಲೆಟ್ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮೊಟ್ಟೆಯಿಂದ ತಯಾರಿಸುವ ಯಾವ ಆಹಾರವಾದರೂ ಅದು ರುಚಿಯಾಗಿಯೇ ಇರುತ್ತದೆ. ಅದರಲ್ಲಿ ಆಮ್ಲೆಟ್ ಕೂಡ ಒಂದು. ತುಂಬಾ ಹಸಿವಾದಾಗ ತಿನ್ನಲು ಏನು ಸಿಗದಿದ್ದಾಗ ಎಲ್ಲರಿಗೂ ಮೊದಲು ನೆನಪಾಗುವುದು ಆಮ್ಲೆಟ್. ಯಾಕೆಂದರೆ ಇದನ್ನು ತುಂಬಾ ಸುಲಭವಾಗಿ, ತಕ್ಷಣ ತಯಾರಿಸಬಹುದು. ಅಲ್ಲದೇ ತಿನ್ನಲು ಬಹಳ ರುಚಿಕರವಾದ ತಿನಿಸು. ಹಾಗೇ ಈ ಆಮ್ಲೆಟ್ ನಿಂದ ಗಟ್ಟಿಯಾದ ಗ್ರೇವಿ ಕೂಡ ತಯಾರಿಸಬಹುದು. ಅದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಅದನ್ನು ತಯಾರಿಸುವ ವಿಧಾನ ಇಲ್ಲಿದೆ ನೋಡಿ.… Read More »

ರೆಸಿಪಿ: ಶಾಹಿ ಮಟರ್ ಪನ್ನೀರ್ ಗ್ರೇವಿ

By | 18/09/2018

ಪನ್ನೀರ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರಿಗೆಲ್ಲಾ ತುಂಬಾ ಇಷ್ಟ. ಇದರಿಂದ ತಯಾರಿಸಲಾಗುವ ಗ್ರೇವಿ ಕೂಡ ತುಂಬಾ ಚೆನ್ನಾಗಿ ಇರುತ್ತೆ. ಚಪಾತಿ, ಪುಲ್ಕ, ರೋಟಿ ಜತೆಗೆ ಈ ಗ್ರೇವಿ ಹೇಳಿಮಾಡಿಸಿದ್ದು. ಹೊರಗಡೆ ಹೊಟೆಲ್ ನಲ್ಲಿ ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿ ಇದರ ರುಚಿ ಸವಿಯಿರಿ. ಪನ್ನೀರ್ ಗ್ರೇವಿ ಮಾಡಲು ಬೇಕಾಗಿರುವ ಸಾಮಾಗ್ರಿ ಬಟಾಣಿ-ಕಾಲು ಕಪ್ ತೆಗೆದುಕೊಳ್ಳಿ. ಬೆಣ್ಣೆ-1 ಚಮಚದಷ್ಟು, ಪನೀರ್-50 ಗ್ರಾಂ ಸಾಕು. ತುಪ್ಪ-1 ಚಮಚ, ಹಾಲು-1/4 ಕಪ್, ಒಣಮೆಣಸಿನಪುಡಿ-1 ಚಮಚದಷ್ಟು, ಅರಿಶಿನ-1/12 ಚಮಚ, ಕೊತ್ತಂಬರಿ ಪುಡಿ-1 ಚಮಚ, ದಪ್ಪನೆಯ ಕ್ರಿಮ್-2 ಚಮಚದಷ್ಟು, ಕಸೂರಿ… Read More »

ಚಪಾತಿ ಮಿಕ್ಕಿದೆ ಎಂದು ಚಿಂತಿಸಬೇಡಿ, ರುಚಿಕರವಾದ ಚಪಾತಿ ನೂಡಲ್ಸ್ ತಯಾರಿಸಿ

By | 16/09/2018

ಚಪಾತಿ ಆರೋಗ್ಯಕ್ಕೆ ತುಂಬಾ ಉತ್ತಮವಾದುದು. ಚಪಾತಿಯನ್ನು ಗೋಧಿಯಿಂದ ತಯಾರಿಸುವುದರಿಂದ ಇದರಲ್ಲಿ ಕೊಬ್ಬನಾಂಶ ಕಡಿಮೆ ಇರುತ್ತೆ ಹಾಗೂ ಹಲವು ಖನಿಜಾಂಶಗಳನ್ನು ಒಳಗೊಂಡಿರುವ ಕಾರಣ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಈ ಚಪಾತಿಯಿಂದ ಸಿಗುತ್ತದೆ. ಇದು ದೇಹದ ತೂಕ ಇಳಿಸಿಕೊಳ್ಳಲು ಕೂಡ ತುಂಬಾ ಸಹಕಾರಿಯಾಗಿದೆ. ಚಪಾತಿಯನ್ನು ಹೆಚ್ಚಾಗಿ ರಾತ್ರಿ ಸಮಯದಲ್ಲಿ ತಿನ್ನುತ್ತಾರೆ. ಅದರಲ್ಲೂ ತುಂಬಾ ದಪ್ಪ ಇರುವವರು ದೇಹದ ತೂಕ ಇಳಿಸಲು ಹಾಗೂ ರಾತ್ರಿ ಅನ್ನ ತಿಂದರೆ ಸರಿಯಾಗಿ ಜೀರ್ಣ ಆಗದೆ ಇರುವವರು ರಾತ್ರಿ ಚಪಾತಿಯನ್ನು ತಿನ್ನುತ್ತಾರೆ. ಆದರೆ ಎಲ್ಲಾ ತಿಂದು ಮುಗಿದ ಮೇಲೆ ಮಾಡಿದ… Read More »