Tag Archives: CET

ಮೊಬೈಲ್ ನಲ್ಲಿಯೇ ಸಿಇಟಿ ಗೆ ಅರ್ಜಿ

By | 16/06/2021

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( ಕೆಇಎ) ವಿದ್ಯಾರ್ಥಿ ಸ್ನೇಹಿ ಯೋಜನೆ ರೂಪಿಸಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ) ತೆಗೆದುಕೊಳ್ಳಲು (2021) ಇಚ್ಛಿಸುವ ವಿದ್ಯಾರ್ಥಿಗಳು ಮೊಬೈಲ್ ನಲ್ಲೇ ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದು. ಈ ಮೊದಲು ಕಂಪ್ಯೂಟರ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇತ್ತು‌. ಆದರೆ ಬಹುತೇಕ ವಿದ್ಯಾರ್ಥಿಗಳು ಕೊರೊನಾ ಅಲೆ ವ್ಯಾಪಕವಾಗಿ ಹರಡಿರುವುದರಿಂದ ಎಲ್ಲರೂ ಹಳ್ಳಿಯಲ್ಲಿ ನೆಲೆಸಿದ್ದಾರೆ. ಕಂಪ್ಯೂಟರ್ ಇಲ್ಲದವರು ಸೈಬರ್ ಸೆಂಟರ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಕಷ್ಟವಾಗುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಮೊಬೈಲ್… Read More »

2021-22 ನೇ ಸಾಲಿನ ಕರ್ನಾಟಕದ ರಾಜ್ಯದಲ್ಲಿನ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ

By | 15/06/2021

ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಸರಕಾರದ ಆದೇಶದ ಅನುಸಾರವಾಗಿ , ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ – 2021 ಅರ್ಹತೆ ಮೆರಿಟನ್ನು ಆಧರಿಸಿ ಕರ್ನಾಟಕ ರಾಜ್ಯದಲ್ಲಿನ ಸರಕಾರಿ/ವಿಶ್ವವಿದ್ಯಾಲಯ/ ಖಾಸಗಿ ಅನುದಾನಿತ/ಖಾಸಗಿ ಅನುದಾನರಹಿತ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ವೆಟರಿನರಿ ಕೋರ್ಸ್ ಗಳಲ್ಲಿ ಲಭ್ಯವಿರುವ ಸರಕಾರದ ಪಾಲಿನ ಸೀಟುಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಿಇಟಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಬೇತಿ ಮಾಹಿತಿ

By | 15/06/2021

ಆನ್ ಲೈನ್ ತರಬೇತಿ ಕಾರ್ಯಕ್ರಮವನ್ನು ಸಿಇಟಿ ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ನೀಡುತ್ತಿದ್ದು, ಇಲ್ಲಿಯವರೆಗೆ 60,000 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದಾರೆ. ಈ ಕೆಳಗೆ ನೀಡಲಾದ ಲಿಂಕನ್ನು ಬಳಸಿ ನೋಂದಣಿ ಮಾಡಿಕೊಳ್ಳಬಹುದು. ಪ್ರತಿ ನಿತ್ಯ 5 ಗಂಟೆಯಿಂದ 8 ಗಂಟೆಯವರೆಗೆ ವೀಕ್ಷಿಸಬಹುದು ‌ ವಿಜ್ಞಾನದ ವಿಷಯಗಳನ್ನು ಬೋಧನೆ ಮಾಡಲಿದ್ದಾರೆ. ಸಿಇಟಿ ಗೆ ಸಿದ್ಧತೆ ನಡೆಸುವವರಿಗೆ ಇದು ಅನುಕೂಲವಾಗಲಿದ್ದು, ಈ ಕಾರ್ಯಕ್ರಮ ದಲ್ಲಿ ನೂರಕ್ಕೂ ಹೆಚ್ಚು ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪಿ.ಯು.ನಿರ್ದೇಶಕಿ ಆರ್.ಸ್ನೇಹಲ್ ಮನವಿ ಮಾಡಿದ್ದಾರೆ.… Read More »

ಸಿಇಟಿ ಅರ್ಜಿ ಸಲ್ಲಿಕೆ ದಿನಾಂಕ ಪ್ರಕಟ : ಹೆಚ್ಚಿನ ವಿವರಗಳು ಇಲ್ಲಿದೆ

By | 14/06/2021

ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ಸಿಇಟಿ ( ಸಾಮಾನ್ಯ ಪ್ರವೇಶ ಪರೀಕ್ಷೆ) ಗೆ ಜೂನ್.15 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭವಾಗಿದೆ. ಆರ್ಕಿಟೆಕ್ಟ್, ಫಾರ್ಮಸಿ, ಇಂಜಿನಿಯರಿಂಗ್, ಪಶುವೈದ್ಯ, ಕೃಷಿ ವಿಜ್ಞಾನ ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುವುದು. ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಿರುವ ಕಾರಣದಿಂದ ಅರ್ಹತಾ ಅಂಕಗಳು ಇಲ್ಲದಿರುವುದರಿಂದ ಎಲ್ಲರೂ ಪರೀಕ್ಷೆ ಬರೆಯಬಹುದು. ಸಿಇಟಿಯಲ್ಲಿ ಪಡೆಯುವ ಅಂಕಗಳೇ ರ್ಯಾಂಕಿಂಗ್, ಸೀಟು ಹಂಚಿಕೆಗೆ ಮಾನದಂಡವಾಗಿರುವುದು ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ. ಅರ್ಜಿ ಸಲ್ಲಿಸಲು ಜು.10,… Read More »

KCET 2021: ವೃತ್ತಿಪರ ಕೋರ್ಸ್ ಗಳಿಗೆ ಸಿಇಟಿ ಅಂಕವೇ ಮಾನದಂಡ

By | 08/06/2021

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ,ಎಲ್ಲರಲ್ಲೂ ಹಲವಾರು ಗೊಂದಲಗಳು ಉಂಟಾಗಿದ್ದವು. ಆದರೆ ವಿದ್ಯಾರ್ಥಿಗಳಿಗೆ ಸರಕಾರವು ಬಿಗ್ ರಿಲೀಫ್ ಸುದ್ದಿಯೊಂದನ್ನು ನೀಡಿದೆ. ವೃತ್ತಿ ಪರ ಕೋರ್ಸ್ ಗಳಿಗೆ ಸಿಇಟಿ ಪರೀಕ್ಷೆಯ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಡಿಸಿಎಂ ಮತ್ತು ಉನ್ನತ ಶಿಕ್ಷಣ ಸಚಿವರಾದ ಸಿಡಿಎಂ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ವೃತ್ತಿಪರ (ಸಿಇಟಿ) ಕೋರ್ಸ್ ಗಳಿಗೆ ದ್ವಿತೀಯ ಪಿಯುಸಿಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ಸಿಇಟಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆಯೇ ಸೀಟುಗಳನ್ನು ಹಂಚಲಾಗುವುದು. ಜೂನ್ 15 ರಂದು ಆನ್ಲೈನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳ ಬಹುದು… Read More »