Tag Archives: KSET

ಕೆ-ಸೆಟ್ ಪರೀಕ್ಷೆ ಮುಂದೂಡಿಕೆ

By | 21/04/2021

ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ.ಎಸ್.ಇ.ಟಿ) -2021 ನ್ನು ದಿನಾಂಕ 25-04-2021 (ಭಾನುವಾರ )ರಂದು ನಡೆಸಲು ನಿರ್ಧರಿಸಿತ್ತು. ಆದರೆ ಕೋವಿಡ್ -19 ಕೊರೊನಾ ವೈರಸ್ ಹರಡುತ್ತಿರುವ ಕಾರಣ ಕರ್ನಾಟಕ ಸರಕಾರ ವಾರಾಂತ್ಯದಲ್ಲಿ ಕರ್ಫ್ಯೂ ಘೋಷಿಸಿರುವ ಹಿನ್ನೆಲೆಯಲ್ಲಿ ಕೆಸೆಟ್ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಎಲ್ಲಾ ನೊಂದಾಯಿತ ಅಭ್ಯರ್ಥಿಗಳು ಕೆಸೆಟ್ 2021 ಪರೀಕ್ಷೆಗೆ ಸಂಬಂಧಿಸಿದಂತೆ ಕೆಸೆಟ್ ವೆಬ್‌ಸೈಟ್‌ನಲ್ಲಿ https://kset.uni-mysore.ac.in/ ಆಗ್ಗಿಂದಾಗ್ಗೆ ಹೊರಡಿಸುವ ವಿಷಯಗಳನ್ನು ನೋಡಬಹುದಾಗಿ ತಿಳಿಸಲಾಗಿದೆ.

KSET ಪರೀಕ್ಷಾ ದಿನಾಂಕ ನಿಗದಿ: ಅಧಿಕೃತ ಪ್ರಕಟಣೆ ಬಿಡುಗಡೆ

By | 15/04/2021

ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ) ಯನ್ನು ದಿನಾಂಕ : 11 ನೇ ಎಪ್ರಿಲ್ 2021 ರಂದು ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದ್ದರಿಂದ ಸದರಿ ಕೆಸೆಟ್ 2021 ಪರೀಕ್ಷೆಯನ್ನು 25-04-2021 (ಭಾನುವಾರ) ನಡೆಸಲು ತೀರ್ಮಾನಿಸಲಾಗಿದೆ. ಕೆಸೆಟ್ 2021 ರ ಪರೀಕ್ಷೆಯನ್ನು ನಡೆಸಲು ಪತ್ರದ ಮುಖಾಂತರ ಈಗಾಗಲೇ ಕರ್ನಾಟಕ ಸರಕಾರದ ಗಮನಕ್ಕೆ ತರಲಾಗಿದೆ. ಈ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಾರಿಗೆ… Read More »

KSET ಅರ್ಹತಾ ಪರೀಕ್ಷೆ ಮುಂದೂಡಿಕೆ

By | 10/04/2021

ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯು ದಿನಾಂಕ 11.04.2021 ರಂದು ನಡೆಯಬೇಕಾಗಿದ್ದು, ಮುಂದೂಡಿಕೆಯಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶನಿವಾರ ಹೊರಬಿದ್ದಿದೆ. ಮುಂದಿನ ಕೆಸೆಟ್ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಎಪ್ರಿಲ್ 11, 2021ರಂದು ವಿಶ್ವವಿದ್ಯಾಲಯವು ಕೆಸೆಟ್ ಪರೀಕ್ಷೆಯನ್ನು ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಕೆಸೆಟ್ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಮುಂದಿನ ಕೆಸೆಟ್ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

KSET: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ( ಕೆ- ಸೆಟ್)

By | 08/02/2021

ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆ-ಸೆಟ್ 2021 ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಓನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಅಧಿಸೂಚನೆಯ ದಿನಾಂಕ 06 ನೇ ಫೆಬ್ರವರಿ 2021 ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 08, ಫೆಬ್ರವರಿ 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07, ಮಾರ್ಚ್ 2021 ಅರ್ಜಿ ಶುಲ್ಕಸಾಮಾನ್ಯ ವರ್ಗ ರೂ.1150, ಪ್ರವರ್ಗ 2ಎ, 2 ಬಿ, 3ಎ , 3 ಬಿ ಅಭ್ಯರ್ಥಿಗಳಿಗೆ ರೂ. 950, ಪ್ರವರ್ಗ-1, ಪರಿಶಿಷ್ಟ ಜಾತಿ,ಪರಿಶಿಷ್ಟ… Read More »