ಮೌನದ ಗೆಳತಿಗೆ


ನೀನೇಕೆ ಮೌನಿಯದೆ ಗೆಳತಿ
ಯಾರೊಂದಿಗೂ ಮಾತನಾಡುತ್ತಿಲ್ಲ
ಯಾರೊಂದಿಗೂ ಬೆರೆಯುತ್ತಿಲ್ಲ
ನಿನ್ನ‍ಷ್ಟಕ್ಕೆ ನೀನು …..
ನಿನಗೆ ನಿನ್ನದೇ ಪ್ರಪಂಚ ..
ಕಣ್ಣೆತ್ತಿ ಒಮ್ಮೆ ನೋಡು
ಕಾಣುತ್ತಿಲ್ಲವೇ ನಾನು …
ನನ್ನ ಕಣ್ಣಲ್ಲಿರುವ ಪ್ರೀತಿ
ಕಾಣುತ್ತಿಲ್ಲವೇ ನಿನಗೆ
ಮೌನದಲಿ ಮೌನವಾಗಿ ಅದೇನು ಯೋಚನೆ
ನಿನ್ನ ನೆನೆದು ಪಡುತ್ತಿದ್ದೇನೆ ಯಾತನೆ
ಮೌನದ ಗೆಳತಿಯಲ್ಲಿ
ಮೌನ ಮುರಿ ಎಂದಾಗ
ಮೌನವೇ ಮಾತಿಗೆ ಉತ್ತರವಾದಾಗ
ಮೌನವೇ ಮಾತಿಗೆ ಪ್ರಶ್ನೆ ಯಾದಾಗ
ನಾ … ಸತ್ಯ ತಿಳಿದುಕೊಂಡೆ
ಗೆಳತಿ ನೀ .. ಮೌನಿ ಎಂದು ತಿಳಿದಾಗ
ನಾನು … ಮೌನಿಯದೆ

Author: Praveen Chandra Puttur

ಬೆಂಗಳೂರಿನಲ್ಲಿ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಫುಲ್ ಟೈಂ ಹಿರಿಯ ಉಪಸಂಪಾದಕ. ಪಾರ್ಟ್ ಟೈಂ ಇಂಗ್ಲಿಷ್ ಟು ಕನ್ನಡ ಅನುವಾದಕ. ಸಮಯ ಸಿಕ್ಕಾಗ ವೆಬ್ ಸೈಟ್ ರಚನೆ, ವೆಬ್ ಸೈಟ್ ವಿನ್ಯಾಸ. ಜೊತೆಗೆ ಕರ್ನಾಟಕಬೆಸ್ಟ್.ಕಾಂನ ಸ್ಥಾಪಕ  ಓದುವುದು, ಬರೆಯುವುದು ಇಷ್ಟದ ಕೆಲಸ. ಹೆಚ್ಚಿನ ವಿವರಕ್ಕೆ ನನ್ನ ಬಗ್ಗೆ ಪುಟವನ್ನು ನೋಡಿ