ನಿಜವಾದ ನಾಯಕರು ಅನುಸರಿಸಬೇಕಾದ ಹತ್ತು ವಿಷಯಗಳು

By | 17/07/2021

ಮೊದಲಿಗೆ ಒಂದಿಷ್ಟು ನುಡಿಮುತ್ತುಗಳಿಂದ ಆರಂಭಿಸೋಣ. ‘ನಿಮ್ಮ ಕ್ರಿಯೆಯು ಇತರರಿಗೆ ತಮ್ಮ ಕನಸನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು, ಇನ್ನಷ್ಟು ಕಲಿಯಲು, ಇನ್ನಷ್ಟು ಕೆಲಸ ಮಾಡಲು ಮತ್ತು ಇನ್ನಷ್ಟು ಸಾಧಿಸಲು ಸ್ಫೂರ್ತಿ ನೀಡುತ್ತಿದೆ ಎಂದಾದರೆ ನೀವು ನಿಜಕ್ಕೂ ನಾಯಕ’ ಎಂದು ಹೇಳುತ್ತಾರೆ ಜಾನ್‌ ಕ್ವಿನ್ಸಿ.

‘ಇತರರು ಮುಂದಿರಲಿ ಮತ್ತು ಅವರನ್ನು ನೀವು ಹಿಂದಿನಿಂದ ತಳ್ಳಿರಿ. ಮುಖ್ಯವಾಗಿ ನೀವು ಯಾವುದಾದರೂ ವಿಕ್ಟರಿಯನ್ನು ಸಾಧಿಸಿದಾಗ ನಿಮ್ಮ ತಂಡವನ್ನು ಮುಂದೆ ಇರಿಸಿ. ನೀವು ಹಿಂದೆ ಇರಿ. ಎಲ್ಲಾದರೂ ಏನಾದರೂ ಅಪಾಯ ಇದ್ದಾಗ ನೀವು ಮುಂದೆ ಇರಿ. ನಿಮ್ಮ ತಂಡ ಹಿಂದೆ ಇರಲಿ’ ಎಂದು ನೆಲ್ಸನ್‌ ಮಂಡೆÜಲ್ಲಾಹೇಳುತ್ತಾರೆ.

ನಿಜವಾದ ನಾಯಕರು ಸತ್ಯವನ್ನೇ ನುಡಿಯುತ್ತಾರೆ. ಈಗಿನ ಕಾಲದಲ್ಲಿಸತ್ಯ ಹೇಳಿದರೆ ವ್ಯವಹಾರ ನಡೆಸಲಾಗದು ಎಂದು ಹೆಚ್ಚಿನವರು ವಂಚನೆಯ ಹಾದಿ ಹಿಡಿಯುತ್ತಾರೆ. ಇತರರನ್ನು ಓಲೈಸುವ ಸಲುವಾಗಿ ಏನಾದರೂ ಹೇಳಿಬಿಡುವುದು ಸಾಮಾನ್ಯ. ಆದರೆ, ನಿಜವಾದ ನಾಯಕ ಹಾಗಿರುವುದಿಲ್ಲ. ಸತ್ಯವನ್ನು ಹೇಳುವುದು ಎಂದರೆ ಸ್ಪಷ್ಟತೆ, ಪ್ರಾಮಾಣಿಕತೆ ಮತ್ತು ನೈಜತೆಯ ಹಾದಿಯಲ್ಲಿನಡೆಯುವುದು ಎಂದು ಅರ್ಥವಾಗಿದೆ.

ಹೃದಯಪೂರ್ವಕವಾಗಿ ನೇತೃತ್ವ ವಹಿಸುತ್ತಾರೆ. ನಿಜವಾದ ನಾಯಕರು ಬಿಚ್ಚುಮನಸ್ಸಿನ ದಿಟ್ಟತನದ ವ್ಯಕ್ತಿಗಳಾಗಲು ಎಂದಿಗೂ ಹಿಂಜರಿಯುವುದಿಲ್ಲ. ಅವರು ಇತರರ ಬಗ್ಗೆ ನಿಜಕ್ಕೂ ಕಾಳಜಿ ಹೊಂದುತ್ತಾರೆ. ತಮ್ಮ ಸುತ್ತಲಿನ ಜನರ ಅಭ್ಯುದಯಕ್ಕಾಗಿ ಶ್ರಮಿಸುತ್ತಾರೆ. ನೀವು ನಿಜವಾದ ನಾಯಕನಾಗಬೇಕಾದರೆ ಯಾವಾಗಲೂ ಹೃದಯಪೂರ್ವಕವಾಗಿ ಕಾರ್ಯನಿರ್ವಹಿಸಿರಿ.

ನೈಜ ನಾಯಕರು ಅತ್ಯುನ್ನತ ನೈತಿಕ ಗುಣಮಟ್ಟ ಹೊಂದಿರುತ್ತಾರೆ.  ಈಗಿನ ಕಾಲದಲ್ಲಿನೈತಿಕತೆ ಎನ್ನುವುದು ಸುಲಭವಾಗಿ ದೊರಕುವ ವಿಷಯವಲ್ಲ. ವ್ಯವಹಾರದಲ್ಲಿಮುಂದೆ ಸಾಗಲು ಅಡ್ಡದಾರಿಗಳನ್ನು ಹಿಡಿಯುವವರೇ ಹೆಚ್ಚು. ನಿಜವಾದ ನಾಯಕರು ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ವರ್ತಿಸುತ್ತಾರೆ. ಅವರು ಏನು ಹೇಳುತ್ತಾರೋ, ಅದರಂತೆ ನಡೆಯುತ್ತಾರೆ. ಈ ರೀತಿಯ ನೈತಿಕ ಗುಣವುಳ್ಳವರನ್ನು ಜನರು ನಂಬುತ್ತಾರೆ. ಇವರು ಸದಾ ಗೌರವಕ್ಕೆ ಪಾತ್ರರಾಗುತ್ತಾರೆ. ಇವರ ಮಾತುಗಳನ್ನು ಜನರು ಆಲಿಸುತ್ತಾರೆ.

ನಿಜವಾದ ನಾಯಕರು ಧೈರ್ಯಶಾಲಿಗಳಾಗಿರುತ್ತಾರೆ. ಎಲ್ಲರೂ ಒಂದು ಕಡೆ ಸಾಗುವಾಗ ಇವರು ಧೈರ್ಯದಿಂದ ಪ್ರವಾಹದ ವಿರುದ್ಧ ಈಜುವ ಧೈರ್ಯ ತೋರುತ್ತಾರೆ. ಕೆಲವೊಮ್ಮೆ ಬದುಕಿನಲ್ಲಿತುಂಬಾ ಧೈರ್ಯದ ಅಗತ್ಯವಿರುತ್ತದೆ. ಅಪಾರ ಅಂತಃಶಕ್ತಿ ಬೇಕಾಗಿರುತ್ತದೆ.

ತಂಡಗಳನ್ನು ಮತ್ತು ಸಮುದಾಯಗಳನ್ನು ಕಟ್ಟುವ ಗುಣವನ್ನು ನಿಜವಾದ ನಾಯಕರು ಹೊಂದಿರುತ್ತಾರೆ. ಒಂದು ಒಳ್ಳೆಯ ಕಮ್ಯುನಿಟಿಯನ್ನು ನಿರ್ಮಿಸುವ ಸಾಮರ್ಥ್ಯ‌ ಹೊಂದಿರುತ್ತಾರೆ. ನಿಜವಾದ ನಾಯಕನಾದವನು ಮಾನವ ಸಂಬಂಧಗಳಿಗೆ ಬೆಲೆ ನೀಡುತ್ತಾರೆ. ಸುದೀರ್ಘ ಸ್ನೇಹವನ್ನು ಬೆಸೆಯುವಂತಹ ಕಾರ್ಯವಿಧಾನವನ್ನು ಅನುಸರಿಸುತ್ತಾರೆ.

ನಿಜವಾದ ನಾಯಕರು ತಮ್ಮನ್ನು ತಾವು ಗಾಢವಾದ ಚಿಂತನೆಯಲ್ಲಿತೊಡಗಿಸಿಕೊಳ್ಳುತ್ತಾರೆ. ನಿಜವಾದ ನಾಯಕನು ಸಮಸ್ಯೆಯ ಆಳಕ್ಕೆ ಇಳಿದು ಚಿಂತಿಸುವ ಗುಣವನ್ನು ಹೊಂದಿರುತ್ತಾನೆ. ಇವರಿಗೆ ತಮ್ಮ ದೌರ್ಬಲ್ಯಗಳ ಅರಿವಿರುತ್ತದೆ. ತಮ್ಮ ಶಕ್ತಿಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಾರೆ.

ನಿಜವಾದ ನಾಯಕರು ಅತ್ಯುತ್ತಮ ಕನಸುಗಾರರು. ಕಲ್ಪನೆಯು ಜ್ಞಾನಕ್ಕಿಂತ ಪ್ರಮುಖವಾದದ್ದು ಎಂದು ನಂಬಿರುವವರು ಅವರು. ತಮ್ಮ ಕಲ್ಪನೆಯಿಂದಲೇ ಶ್ರೇಷ್ಠ ವಿಚಾರಗಳನ್ನು ಹುಟ್ಟಿಸಿಕೊಳ್ಳುತ್ತಾರೆ. ಕಲ್ಪನೆಯ ಮೂಲಕವೇ ಹೊಸ ಹೊಸ ಐಡಿಯಾಗಳನ್ನು ಉಂಟುಮಾಡುತ್ತಾರೆ.

ನಿಜವಾದ ನಾಯಕರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ದೈಹಿಕವಾಗಿ ಲವಲವಿಕೆಯಿಂದ ಇರಲು ಗಮನ ನೀಡುತ್ತಾರೆ. ಸಾಕಷ್ಟು ನೀರು ಕುಡಿಯುವುದು, ಪ್ರಕೃತಿಯೊಂದಿಗೆ ಕಾಲಕಳೆಯುವುದು, ಅತ್ಯುತ್ತಮ ಆಹಾರ ಸೇವನೆ ಇತ್ಯಾದಿಗಳನ್ನು ನಿಜವಾದ ನಾಯಕರು ಮಾಡುತ್ತಾರೆ.

ಶ್ರೇಷ್ಠತೆಗೆ ಹೆಚ್ಚು ಗಮನ ನೀಡುತ್ತಾರೆ. ಯಾರೂ ಕೂಡ ಸಂಪೂರ್ಣ ಪರಿಪೂರ್ಣರಲ್ಲ. ಪರಿಪೂರ್ಣತೆಗಿಂತ ಶ್ರೇಷ್ಠತೆಗೆ ಹೆಚ್ಚು ಆದ್ಯತೆ ನೀಡಲು ನಿಜವಾದ ನಾಯಕರು ಬಯಸುತ್ತಾರೆ.

ಅವರು ಅಗಾಧ ಪರಿಣಾಮ ಬೀರುವವರು ಆಗಿರುತ್ತಾರೆ. ನಿಜವಾದ ನಾಯಕರ ಮಾತುಗಳು, ಕೆಲಸಗಳು ಇತರರಿಗೆ ಸದಾ ಸ್ಫೂರ್ತಿ ನೀಡುವಂತೆ ಇರುತ್ತವೆ. ಇವೆಲ್ಲವೂ ನಿಜವಾದ ನಾಯಕರ ಲಕ್ಷಣಗಳಾಗಿವೆ. ಅವು ನಿಮ್ಮದಾಗಲಿ.

Author: Rashmi Kannadathi

Profession: consultant optometrist. Hobby: Web Developer, SEO Consultaņt, Bloggȩr

Leave a Reply

Your email address will not be published. Required fields are marked *