ಸೆಕ್ಸ್ ಬಳಿಕ ಪುರುಷರು ಏನು ಯೋಚನೆ ಮಾಡುತ್ತಾರೆ ?- ಸುದ್ದಿಜಾಲ ನ್ಯೂಸ್

By | 05/12/2021

ಸೆಕ್ಸ್ ನ ಬಳಿಕ ಹುಡುಗರ ಮನದಲ್ಲಿ ಅನೇಕ ಆಲೋಚನೆಗಳು ಸುತ್ತುವರಿದಿದೆ. ಅನೇಕ ಪುರುಷರು ತಮ್ಮ ಸಂಗಾತಿ ಸಂಭೋಗದಿಂದ ಖುಷಿ ಪಟ್ಟಳೇ ಇಲ್ಲವೇ ಎಂಬ ಒಂದು ಆಲೋಚನೆಯಲ್ಲಿ ಇರುತ್ತಾರೆ.

ಸಂಭೋಗಿಸಿದ ನಂತರ ಹುಡುಗರು ಸಾಮಾನ್ಯವಾಗಿ ಏನು ಯೋಚನೆ ಮಾಡುತ್ತಾರೆ ಎಂಬುದನ್ನು ಇಲ್ಲಿ ತಿಳಿಯೋಣ :

ಸೆಕ್ಸ್ ನ್ನು ಆನಂದಿಸಿದಳೇ ? – ಹುಡುಗರು ಸೆಕ್ಸ್ ನಂತರ ತಮ್ಮ ಹುಡುಗಿಯ ಪ್ರೀತಿಯ ಪ್ರತಿಕ್ರಿಯೆಯನ್ನು ಕೇಳಲು ಬಯಸುತ್ತಾರೆ. ಲೈಂಗಿಕ ಸುಖ ಇಷ್ಟಪಟ್ಟರೇ ಇಲ್ಲವೇ , ತನ್ನಂತೆಯೇ ಆಕೆ ಕೂಡಾ ಸಂಭೋಗವನ್ನು ಇಷ್ಟ ಪಟ್ಟರೇ ?, 2 ನೇ ಸುತ್ತಿಗೆ ಹೋಗಲು ಉತ್ಸುಕರಾಗಿದ್ದಾರೆಯೇ ಎಂಬ ಬಗ್ಗೆ ಯೋಚನೆ ಕಾಡುತ್ತೆ‌.

ಅವಳು ಪರಾಕಾಷ್ಠೆ ಹೊಂದಿದ್ದಾಳೆಯೇ ?

ಸಾಮಾನ್ಯವಾಗಿ ಪುರುಷರು ಮಹಿಳೆಯರಿಗಿಂತ ವೇಗವಾಗಿ ಪರಾಕಾಷ್ಠೆಯನ್ನು ತಲುಪುತ್ತಾರೆ. ಸ್ಖಲನೆ‌ಗೊಂಡು ಸುಸ್ತಾಗಿ ಮಲಗುತ್ತಾರೆ. ಆದರೆ, ತನ್ನ ಜೊತೆಗೇ ಸಂಗಾತಿಯೂ‌ ಆನಂದ ಹೊಂದಿದಳೇ ಎಂಬ ಚಿಂತೆ ಗಂಡಸರನ್ನು ಕಾಡುತ್ತೆ. ಸಂಗಾತಿ ಸಾಕಷ್ಟು ಸಂಭೋಗ ಪರಾಕಾಷ್ಠೆಯನ್ನು ತಲುಪಿಲ್ಲ ಎಂದು ತಿಳಿದರೆ ಪುರುಷನ ಇಗೋ ಹರ್ಟ್ ಆಗುತ್ತದೆ.

ನಾನು ಬೇಗ ಮುಗಿಸಿದೆನೆಯೇ ?

ಕೆಲವೇ ನಿಮಿಷಗಳಲ್ಲಿ ಅಥವಾ ಸೆಕೆಂಡ್ ಗಳಲ್ಲಿ ಸ್ಖಲಿಸುವ ಪ್ರತಿಯೊಬ್ಬ ವ್ಯಕ್ತಿಯೂ ಇದನ್ನು ಯೋಚಿಸುತ್ತಾನೆ‌. ತಮ್ಮ ಸಂಗಾತಿಗೆ ಹೋಲಿಸಿದರೆ ತುಂಬಾ ಬೇಗನೆ ಸಂಭೋಗದ ಪರಾಕಾಷ್ಠೆ ತಲುಪುವ ಅವರು ನಂತರ ಮುಜುಗರ ಅನುಭವಿಸುತ್ತಾ ಇರಬಹುದು.

ಕೆಲವು ಗಂಡಸರಿಗೆ ತಮ್ಮ ಶಿಶ್ನದ ಉದ್ದದ ಬಗ್ಗೆ ಕೀಳರಿಮೆ ಇರುತ್ತದೆ. ಸಣ್ಣ ಶಿಶ್ನ ಇದ್ದವರಿಗೆ ಇದು ಹೆಚ್ಚು. ತನ್ನ ಶಿಶ್ನದ ನಿಮಿರುವಿಕೆಯ ಉದ್ದ ಸಂಗಾತಿಯನ್ನು ತೃಪ್ತಿಪಡಿಸಲು ಸಾಕಾಗಿದೆಯೇ ಇಲ್ಲವೇ ಎಂದು ಚಿಂತೆ ಮಾಡುತ್ತಾರೆ.

ಪುರುಷರು ತಾವು ಪ್ರೀತಿಸಿದ ಮಹಿಳೆಯರೊಂದಿಗೆ ಭವಿಷ್ಯದ ಕೂಡುವಿಕೆಗಳ ಬಗ್ಗೆ ಯೋಚಿಸುತ್ತಾರೆ ಹೊರತು ಆ ಕ್ಷಣದ ಮಿಲನಗಳ ಬಗೆಗೆ ಅಲ್ಲ.

Leave a Reply

Your email address will not be published. Required fields are marked *