ಪಿಯುಸಿ ನಂತರ ಮುಂದೇನು? ಇಲ್ಲಿದೆ ಉತ್ತಮ ಅವಕಾಶ- ಸುದ್ದಿಜಾಲ ನ್ಯೂಸ್

By | 26/11/2021

ಪಿಯುಸಿ ಮುಗಿದ ಮೇಲೆ ತುಂಬಾ ಜನರಿಗೆ ತಾನು ಮುಂದೆ‌ ಏನು ಓದಬೇಕು‌? ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು? ಎಂಬ ಚಿಂತನೆ ಸಾಮಾನ್ಯ. ವಿದ್ಯಾರ್ಥಿಗಳು ಜೀವನದ ಯಶಸ್ಸಿಗೆ ಬೇಕಾದ ಕೆರಿಯರ್ ನ್ನು ಆಯ್ಕೆ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ.

ಇತ್ತೀಚೆಗೆ ಶಿಕ್ಷಣ ರಂಗದಲ್ಲಿ ಹಲವಾರು ಕೋರ್ಸ್ ಗಳಿವೆ. ಯಾರಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ‌ ಅಂತಹ ವಿಷಯವನ್ನು ಆಯ್ಕೆ ಮಾಡಬಹುದು. ನಾವು ಈಗ ನಿಮಗೆ ತಿಳಿಯಪಡಿಸುವ ವಿಷಯ ಇದು ಜನಸಾಮಾನ್ಯರಿಗೆ ಅಪರಿಚಿತವಾಗಿರಬಹದು. ಇದು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನೀಡಬಹುದು ಎಂಬುದು ನಮ್ಮ‌ ಅಭಿಪ್ರಾಯ.

ಭಾರತದಲ್ಲಿ ಅಕ್ಯುಪೇಶನಲ್ ಥೆರಪಿ 1950 ರಲ್ಲೇ ಶುರು ಆಗಿತ್ತು. ಆದರೆ ಈಗ ಅದರ ಕುರಿತಾದ ಹೆಚ್ಚಿನ ಮಾಹಿತಿ ಯಾರಿಗೂ ಗೊತ್ತಿಲ್ಲ.

ಅಂಗವಿಕಲ ಮಕ್ಕಳಿಗೆ ಶಾರೀರಿಕ ಮತ್ತು ಮಾನಸಿಕ ರೂಪದಲ್ಲಿ ಚಿಕಿತ್ಸೆ ನೀಡುವುದೇ ಅಕ್ಯುಪೇಶನಲ್ ಥೆರಪಿ.

ಮಾನಸಿಕ ಅಸ್ವಸ್ಥರ ಆರೈಕೆ ಮತ್ತು ಪುನರ್ವಸತಿಗಳಿಗೆ ಕೆಲಸ ಮಾಡುವವರನ್ನು ಆಕ್ಯುಪೇಶನಲ್ ಥೆರಪಿಸ್ಟ್ ಎಂದು ಕರೆಯುತ್ತಾರೆ.

ದ್ವಿತೀಯ ಪಿಯುಸಿಯನ್ನು ಬಯೋಲಜಿ, ಕೆಮಿಸ್ಟ್ರಿ, ಪಿಜಿಕ್ಸ್ ವಿಷಯಗಳಲ್ಲಿ ಪಾಸಾಗಿರುವ ಅಭ್ಯರ್ಥಿಗಳು ಈ ಕೋರ್ಸ್ ಮಾಡಬಹುದು.

ಇದೊಂದು 4 ವರ್ಷದ ಡಿಗ್ರಿ ಕೋರ್ಸ್ ಆಗಿದೆ. ಡಿಗ್ರಿ ಆದ ಮೇಲೆ ಮಾಸ್ಟರ್ ಡಿಗ್ರಿ ಮತ್ತು ಡಾಕ್ಟರೇಟ್ ಪದವಿಯನ್ನು ಕೂಡಾ ಮಾಡಬಹುದು.

ಪಿಡಿಯಾಟ್ರಿಕ್ಸ್, ನ್ಯೂರೋಲಜಿಸ್ಟ್ , ಮಾನಸಿಕ ರೋಗ, ಕಮ್ಯುನಿಟಿ ರಿಹ್ಯಾಬಿಲಿಟೇಶನ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆಯಬಹುದು.

ಖಾಸಗಿ ಸಂಸ್ಥೆ, ಡೇ ಕೇರ್ ಸೆಂಟರ್, ಶಾಲೆಗಳಲ್ಲಿ ಅಕ್ಯುಪೇಶನಲ್ ಥೆರಪಿಸ್ಟ್ ಗಳಿಗೆ ಸಾಕಷ್ಟು ಬೇಡಿಕೆ ಇರುವುದರ ಕಾರಣ ನೀವು ಈ ಕೋರ್ಸ್ ಮಾಡಬಹುದು.

ಒಳ್ಳೆಯ ಕಮ್ಯುನಿಕೇಶನ್, ಟೀಮ್ ವರ್ಕ್, ಹಾರ್ಡ್ ವರ್ಕ್, ಒತ್ತಡ ನಿರ್ವಹಣೆ ಮುಂತಾದ ಗುಣಗಳು ಮುಖ್ಯ. ಅಕ್ಯುಪೇಶನಲ್ ಥೆರಪಿಯಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ವಿಧಾನಗಳ ಜೊತೆಗೆ ರೋಗಿಗಳ ನೋವನ್ನು ಅರಿತು ಚಿಕಿತ್ಸೆ ನೀಡುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು.

ಅಕ್ಯುಪೇಶನಲ್ ಥೆರಪಿಸ್ಟ್ ಗೆ ವಿದೇಶದಲ್ಲೂ ಉತ್ತಮ ಅವಕಾಶಗಳಿವೆ. ಅಮೆರಿಕಾದಲ್ಲಿ ಅಕ್ಯುಪೇಶನಲ್ ಥೆರಪಿಸ್ಟ್ ಗಳ ಒಂದು ವರ್ಷದ ಸಂಬಳ‌ 70 ಸಾವಿರ ಡಾಲರ್. ಅಂದರೆ ಸುಮಾರು 50 ಲಕ್ಷ. ಭಾರತದಲ್ಲಿ ಮೊದ ಮೊದಲು ಅಕ್ಯುಪೇಶನಲ್ ಥೆರಪಿಸ್ಟ್ ಗಳಿಗೆ ಕಡಿಮೆ ಸಂಬಳ‌ ಇದ್ದರೂ ಅನುಭವಸ್ಥರಿಗೆ ಒಳ್ಳೆಯ ವರಮಾನವಿದೆ.

ಬಿಎಸ್ಸಿ ಇನ್ ಅಕ್ಯುಪೇಶನಲ್ ಥೆರಪಿ, ಬ್ಯಾಚುಲರ್ ಆಫ್ ಅಕ್ಯುಪೇಶನಲ್ ಥೆರಪಿ, ಡಿಪ್ಲೋಮಾ ಇನ್ ಅಕ್ಯುಪೇಶನಲ್ ಥೆರಪಿ, ಎಮ್ ಎಸ್ ಸಿ ಇನ್ ಪಿಜಿಕಲ್ ಎಂಡ್ ಅಕ್ಯುಪೇಶನಲ್ ಥೆರಪಿ, ಮಾಸ್ಟರ್ ಆಫ್ ಅಕ್ಯುಪೇಶನಲ್ ಥೆರಪಿ ಇವಿಷ್ಟು ಅಕ್ಯುಪೇಶನಲ್ ಥೆರಪಿಯ ಕೋರ್ಸ್ ಗಳು.

Leave a Reply

Your email address will not be published. Required fields are marked *