ರೆಸಿಪಿ: ರುಚಿಯಾದ ಬಟರ್ ಚಿಕನ್ ಮಾಡುವುದು ಹೇಗೆ?

Bisibele bath recipe kannada

ಬಟರ್ ಚಿಕನ್ ರೊಟ್ಟಿ, ಚಪಾತಿ ಜತೆ ಹೇಳಿ ಮಾಡಿಸಿದ ಗ್ರೇವಿ. ಹೋಟೆಲ್ ನಲ್ಲಿ ಒಂದಷ್ಟು ದುಡ್ಡು ಕೊಟ್ಟು ಬಟರ್ ಚಿಕನ್ ತಿನ್ನುವ ಬದಲು ಮನೆಯಲ್ಲಿಯೇ ಈ ರುಚಿಯಾದ ಬಟರ್ ಚಿಕನ್ ಸವಿಯಲು ಸಿದ್ಧ

ಕೋಳಿಮಾಂಸ ಅರ್ಧ ಕೆ.ಜಿ ತೆಗೆದುಕೊಳ್ಳಿ. ಈರುಳ್ಳಿ-ಒಂದು ದೊಡ್ಡದ್ದು, ಟೊಮೆಟೊ-ಹದ ಗಾತ್ರದ್ದು ಎರಡು ತೆಗೆದುಕೊಳ್ಳಿ ಹಾಗೇ ಇದನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಕೆಂಪು ಮೆಣಸಿನ ಪುಡಿ ಒಂದು ಚಮಚದ್ಟು, ಜೀರಿಗೆ ಪುಡಿ ಅರ್ಧ ಚಮಚ, ಮೊಸರು 250 ಗ್ರಾಂನಷ್ಟಿದ್ದರೆ ಸಾಕು. ಹಸಿಮೆಣಸು 4, ಗೋಡಂಬಿ-ಕಾಲು ಕಪ್ ತೆಗೆದುಕೊಳ್ಳಿ, ಬೆಣ್ಣೆ 50 ಗ್ರಾಂ, ಗರಂ ಮಸಾಲಾ ಸ್ವಲ್ಪ, ಪಲಾವ್ ಎಲೆ-ಒಂದು. ಉಪ್ಪು ರುಚಿಗೆ ತಕ್ಕಷ್ಟು.

ಮೊದಲಿಗೆ ಕತ್ತರಿಸಿಟ್ಟುಕೊಂಡ ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಮೊಸರು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅರ್ಧ ಗಂಟೆ ಹಾಗೇ ಇಡಿ. ಇದು ಚೆನ್ನಾಗಿ ಮ್ಯಾರಿನೇಟ್ ಆಗಬೇಕು.

ನಂತರ ಒಂದು ಬಾಣಲೆ ಬಿಸಿ ಮಾಡಿ ಅದಕ್ಕೆ ಎರಡು ಚಮಚ ಎಣ್ಣೆ ಹಾಕಿ. ಇದು ಬಿಸಿಯಾದ ಮೇಲೆ ಅದಕ್ಕೆ ಮಿಶ್ರಣ ಮಾಡಿಟ್ಟುಕೊಂಡ ಚಿಕನ್ ಹಾಕಿ ಹತ್ತು ನಿಮಿಷ ಹುರಿದುಕೊಳ್ಳಿ. ನಂತರ ಒಂದು ಅಗಲವಾದ ಬಾಣಲೆಗೆ ಬೆಣ್ಣೆ ಹಾಕಿ ಅದು ಬಿಸಿಯಾದ ಕೂಡಲೆ ಅದಕ್ಕೆ ಬೆಣ್ಣೆ ಹಾಕಿ ಬೆಣ್ಣೆ ಕರಗಿದ ಕೂಡಲೇ ಅದಕ್ಕೆ ಒಂದು ಪಲಾವ್ ಎಲೆಯನ್ನು ಸೇರಿಸಿ. ಆಮೇಲೆ ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ. ಈರುಳ್ಳಿ ಪೇಸ್ಟ್ ಕೆಂಪು ಬಣ್ಣಕ್ಕೆ ತಿರುಗುವವರಗೆ ಚೆನ್ನಾಗಿ ಹುರಿಯಿರಿ.

ನಂತರ ಇದಕ್ಕೆ ಟೊಮೆಟೊ ಪೇಸ್ಟ್ ಅನ್ನು ಸೇರಿಸಿ ಮೂರರಿಂದ ನಾಲ್ಕು ನಿಮಿಷದಷ್ಟು ಹೊತ್ತು ಹುರಿಯಿರಿ. ನಂತರ ಅದಕ್ಕೆ ಮೆಣಸಿನ ಪುಡಿ, ಜೀರಿಗೆ ಪುಡಿ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿರಿ. ಗೋಡಂಬಿಯನ್ನು ಒಂದು ಕಾಲು ಗಂಟೆ ನೆನಸಿಟ್ಟುಕೊಳ್ಳಿ. ನಂತರ ತುಸು ನೀರು ಸೇರಿಸಿ ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಈ ಮಿಶ್ರಣವನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ. ನಂತರ ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಒಂದು ಐದು ನಿಮಿಷ ಕುದಿಸಿರಿ. ಉಪ್ಪು ಬೇಕಿದ್ದರೆ ಹಾಕಿಕೊಳ್ಳಿ. ಆಮೇಲೆ ಇದಕ್ಕೆ ಹುರಿದಿಟ್ಟುಕೊಂಡ ಚಿಕನ್ ಸೇರಿಸಿ ಗರಂ ಮಸಾಲ ಕೂಡ ಹಾಕಿ 5ರಿಂದ 8 ನಿಮಿಷದವರಗೆ ಬೇಯಿಸಿ. ಕೆಳಕ್ಕೆ ಇಳಿಸಿ.ಕೊತ್ತಂಬರಿಸೊಪ್ಪಿನಿಂದ ಅಲಂಕಾರ ಮಾಡಿದರೆ ರುಚಿಯಾದ ಬಟರ್ ಚಿಕನ್ ರೆಡಿ.

ನಂತರ ಅದಕ್ಕೆ ಮೆಣಸಿನ ಪುಡಿ, ಜೀರಿಗೆ ಪುಡಿ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿರಿ. ಗೋಡಂಬಿಯನ್ನು ಒಂದು ಕಾಲು ಗಂಟೆ ನೆನಸಿಟ್ಟುಕೊಳ್ಳಿ. ನಂತರ ತುಸು ನೀರು ಸೇರಿಸಿ ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ೀ ಮಿಶ್ರಣವನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ. ನಂತರ ಿದಕ್ಕೆ ಸ್ವಲ್ಪ ಮೊಸರು ಸೇರಿಸಿ ಒಂದು ಐದು ನಿಮಿಷ ಕುದಿಸಿರಿ. ಉಪ್ಪು ಬೇಕಿದ್ದರೆ ಹಾಕಿಕೊಳ್ಳಿ. ಆಮೇಲೆ ಇದಕ್ಕೆ ಹುರಿದಿಟ್ಟುಕೊಂಡ ಚಿಕನ್ ಸೇರಿಸಿ ಗರಂ ಮಸಾಲ ಕೂಡ ಹಾಕಿ 5ರಿಂದ 8 ನಿಮಿಷದವರಗೆ ಬೇಯಿಸಿ. ಕೆಳಕ್ಕೆ ಇಳಿಸಿ. ಕೊತ್ತಂಬರಿಸೊಪ್ಪಿನಿಂದ ಅಲಂಕಾರ ಮಾಡಿದರೆ ರುಚಿಯಾದ ಬಟರ್ ಚಿಕನ್ ರೆಡಿ.