ಪೂಜೆ ಮಾಡುವಾಗ ಯಾವ ಬೇಡಿಕೆಗೆ ಯಾವ ನೈವೇದ್ಯ ಕೊಡಬೇಕು…ಇಲ್ಲಿದೆ ಉತ್ತರ

By | 09/09/2021

ನಮ್ಮ ದೇಶದ ಸಂಸ್ಕೃತಿಯಲ್ಲಿ ನೀತಿ ನ್ಯಾಯ ಹಾಗೂ ಮಾನವೀಯತೆಗಳು ಜನಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ದಿವ್ಯ ಶಕ್ತಿ ನಮ್ಮನ್ನು ಮುಂದಕ್ಕೆ ನಡೆದುಕೊಂಡು ಹೋಗುತ್ತಿದೆ ಎಂಬ ನಂಬಿಕೆ ಇದೆ. ದೇವರೆಂಬ ಹೆಸರಿನಲ್ಲಿ ಆ ದಿವ್ಯ ಶಕ್ತಿ ನಮ್ಮನ್ನು ಕಾಪಾಡುತ್ತದೆ ಹಾಗೂ ಪ್ರತಿದಿನ‌ ಪೂಜೆ ಮಾಡುತ್ತೇವೆ.

ಹಾಗೆಯೇ ಪೂಜೆ ಮಾಡುವಾಗ ಯಾವ ಕೋರಿಕೆಗೆ ಯಾವ ನೈವೇದ್ಯವನ್ನು ಸಮರ್ಪಿಸಿದರೆ ಒಳ್ಳೆಯದು ಎಂಬುದು ಗೊತ್ತೇ?

ಬಾಳೆಹಣ್ಣನ್ನು ದೇವರಿಗೆ ನೈವೇದ್ಯವಾಗಿ ಇಟ್ಟರೆ ಇಷ್ಟಾರ್ಥ ಸಿದ್ಧಿ ಪಡೆಯಬಹುದು. ಅಂದರೆ ನಾವು ಕೋರುವ ಕೋರಿಕೆಗಳು ದೇವರು ಪೂರೈಸುತ್ತಾರೆ.

2 ಚಿಕ್ಕ ಬಾಳೆಹಣ್ಣನ್ನು ದೇವರಿಗೆ ಇಡುವುದರಿಂದ ನಿಂತು ಹೋಗಿರುವ ಕೆಲಸಗಳು ಮತ್ತೆ ಪ್ರಾರಂಭವಾಗುತ್ತದೆ.

ಬಾಳೆಹಣ್ಣಿನ ಗೊಜ್ಜನ್ನು ನೈವೇದ್ಯವಾಗಿ ಇಟ್ಟರೆ ಸಾಲದ ಬಾಧೆ ಬೇಗ ದೂರವಾಗುತ್ತದೆ. ಬರಬೇಕಾದ ಹಣ ನಿಮ್ಮ ಕೈಗೆ ಬಂದು ಸೇರುತ್ತದೆ. ವ್ಯಾಪಾರದಲ್ಲಿ ನಷ್ಟವಾಗಿರುವ ಹಣ ಮತ್ತೆ ಬರುತ್ತದೆ.

ತೆಂಗಿನಕಾಯಿಯನ್ನು ನೈವೇದ್ಯವಾಗಿ ಸಮರ್ಪಿಸಿದರೆ ಕೆಲಸಗಳು ಸುಲಭವಾಗಿ ದಿಗ್ವಿಜಯವಾಗಿ ಪೂರ್ತಿಯಾಗುತ್ತದೆ.

ಸಪೋಟ ಹಣ್ಣನ್ನು ನೈವೇದ್ಯವಾಗಿ ಇಟ್ಟರೆ ಅಡಚಣೆ ಕಾರ್ಯಗಳು ಇದ್ದರೆ ಅದು ಬೇಗ ದೂರವಾಗಿ ಕಾರ್ಯಗಳು ಪೂರ್ತಿಯಾಗುತ್ತದೆ.

ಕಿತ್ತಳೆ ಹಣ್ಣನ್ನು ನೈವೇದ್ಯವಾಗಿ ಇಡುವುದರಿಂದ ಒಪ್ಪಂದ ಪ್ರಕಾರ ಆಗುವ ಕಾರ್ಯಗಳು ಯಾವುದಾದರೂ ಕಾರಣದಿಂದಾಗಿ ನಿಂತು ಹೋಗಿದ್ದರೆ, ಅದು ಒಂದು ನಂಬಿಕೆ ಇರುವ ವ್ಯಕ್ತಿಯಿಂದ ಆ ಕಾರ್ಯವು ಪೂರ್ತಿಯಾಗುತ್ತದೆ.

Leave a Reply

Your email address will not be published. Required fields are marked *