Coconut Water Benefits for Pregnancy: ಎಳನೀರು ಕುಡಿಯುವುದರಿಂದ ಗರ್ಭಿಣಿಯರಿಗೆ ದೊರಕುವ 7 ಪ್ರಯೋಜನಗಳು

By | 05/09/2021

ಹೆಚ್ಚಾಗಿ ಆರೋಗ್ಯ ಸರಿ ಇಲ್ಲ ಅಂದರೆ ಸಾಕು ವೈದ್ಯರು ಹೇಳುವುದೆ ಎಳೆನೀರು ಕುಡಿಯಿರಿ ಅಂತಾ. ಆದರೆ ಗರ್ಭಾವಸ್ಥೆಯಲ್ಲಿ, ಗರ್ಭಿಣಿಯರು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಸ್ವತಃ ವೈದ್ಯರು ಸಲಹೆ ನೀಡುತ್ತಾರೆ.

ಆಗ ಸೇವಿಸುವ ಪ್ರತಿ ಆಹಾರ, ಪಾನೀಯ ಅವರ ದೇಹ ಮತ್ತು ಹೊಟ್ಟೆಯಲ್ಲಿನ ಶಿಶುವಿನ ಮೇಲೆಯೂ ಪರಿಣಾಮ ಬೀರುತ್ತದೆ.

ಎಳೆನೀರಿನಲ್ಲಿ ಕ್ಲೋರೈಡ್, ಎಲೆಕ್ಟ್ರೋಲೈಟ್, ರೈಬೋಫ್ಲಾವಿನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಗರ್ಭಾವಸ್ಥೆಯಲ್ಲಿ ತೆಂಗಿನ ನೀರನ್ನು ಸೇವಿಸುವುದರಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳು ಮತ್ತು ದ್ರವಗಳು ದೇಹಕ್ಕೆ ಬೇಕಾದ ದೈನಂದಿನ ಪೋಷಕಾಂಶಗಳನ್ನು ಪೂರೈಸುತ್ತವೆ.

ಗರ್ಭಾವಸ್ಥೆಯಲ್ಲಿ ಎಳನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು

  • ಎಳನೀರು ದೇಹದಲ್ಲಿ ರಕ್ತದ ಮಟ್ಟ ಹೆಚ್ಚಿಸುತ್ತಿದೆ.
  • ಮೂತ್ರದ ಸೋಂಕನ್ನು ನಿವಾರಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿ.
  • ಗರ್ಭಾವಸ್ಥೆಯಲ್ಲಿ ಎದೆಯುರಿ ಸಮಸ್ಯೆಯಿಂದ ಪರಿಹಾರ ಬೇಕಾದಲ್ಲಿ ಎಳನೀರು ಸೇವನೆ ಮಾಡಬೇಕು..
  • ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆ ಮತ್ತು ಆಯಾಸವನ್ನು ನಿವಾರಿಸಲು ನೀವು ಎಳನೀರನ್ನು ಕುಡಿಯಬಹುದು.
  • ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಎಳನೀರನ್ನು ಸೇವಿಸುವ ಮೂಲಕ ಇದನ್ನು ತಪ್ಪಿಸಬಹುದು.
  • ಎಳನೀರಿನಲ್ಲಿ ಕ್ಯಾಲೊರಿ ಪ್ರಮಾಣ ಕಡಿಮೆಯಿದ್ದು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ.
  • ಗರ್ಭಾವಸ್ಥೆಯಲ್ಲಿ ಮಹಿಳೆಯರ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *