ಗೃಹಪ್ರವೇಶಕ್ಕೆ 2020-21ರಲ್ಲಿ ಶುಭ ದಿನಗಳು ಯಾವುವು? ಇಲ್ಲಿದೆ ಸಂಪೂರ್ಣ ವಿವರ

By | 19/10/2020

ಗೃಹ ಪ್ರವೇಶವೆಂಬುದು ಹೊಸ ಮನೆಗೆ ನಡೆಸುವ ಮೊದಲ ಸಂಭ್ರಮದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಆ ಮನೆಯಲ್ಲಿ ನೆಲೆಸುವವರ ಸುಖನೆಮ್ಮದಿಗೂ ಈ ಗೃಹ ಪ್ರವೇಶ ವಿಧಾನಗಳಿಗೂ ಸಂಬಂಧವಿದೆ ಎಂದು ಬಲ್ಲವರು ಹೇಳುತ್ತಾರೆ. ಮುಖ್ಯವಾಗಿ ಗೃಹ ಪ್ರವೇಶವನ್ನು ಸೂಕ್ತ ದಿನ, ಸಮಯ ನೋಡಿಯೇ ಮಾಡಬೇಕು ಎನ್ನಲಾಗುತ್ತದೆ.

ನೀವು ಹೊಸ ಮನೆ ನಿರ್ಮಾಣ ಮಾಡುತ್ತಿದ್ದರೆ ಅಥವಾ ಅಪಾರ್ಟ್‍ಮೆಂಟ್ ಪ್ರವೇಶಕ್ಕೆ ಸಿದ್ಧಗೊಳ್ಳುತ್ತಿದ್ದರೆ ಕೊನೆಯ ಕ್ಷಣದ ಗಡಿಬಿಡಿಯಲ್ಲಿ ಸಿಕ್ಕದಿನದಂದು ಪ್ರವೇಶಿಸುವುದು ಸೂಕ್ತವಲ್ಲ. ಮೊದಲೇ ಪ್ಲ್ಯಾನ್ ಮಾಡಿಟ್ಟುಕೊಂಡು ಒಳ್ಳೆಯ ದಿನ ಆಯ್ಕೆ ಮಾಡಿಕೊಳ್ಳಿ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಅಂದಹಾಗೆ, ಈ ವರ್ಷ ಮತ್ತು ಮುಂದಿನ ವರ್ಷ ನೀವು ಹೊಸ ಮನೆಗೆ ಪ್ರವೇಶಿಸಲು ನಿ`ರ್Àರಿಸಿದ್ದರೆ ಇಲ್ಲಿ ನೀಡಲಾದ ದಿನಾಂಕವನ್ನು ಒಮ್ಮೆ ನೋಡಿಕೊಳ್ಳಿ. ಇಲ್ಲಿ ನೀಡಿರುವುದು ಕೇವಲ ಮಾಹಿತಿಗಾಗಿ. ನಿಮ್ಮ ಹುಟ್ಟಿದ ದಿನ, ನಕ್ಷತ್ರ ಇತ್ಯಾದಿಗಳಿಗೆ ತಕ್ಕಂತೆ ಒಳ್ಳೆಯ ದಿನಗಳ ಮಾಹಿತಿಯನ್ನು ನಿಮ್ಮ ಪಂಡಿತರು, ಆರ್ಚಕರು, ಜ್ಯೋತಿಷಿಗಳು ನೀಡಬಹುದು.

ಸದ್ಯ ಮಹೂರ್ತವಿಲ್ಲ

ಕಳೆದ ಜೂನ್ ನಿಂದ ಅಕ್ಟೋಬರ್ 2020ರವರೆಗೆ ( ಆಷಾಢ, ಶ್ರಾವಣ, ಬಾದ್ರಪದ, ಅಶ್ವಿನಿ ) ಗೃಹ ಪ್ರವೇಶಕ್ಕೆ ಒಳ್ಳೆಯ ದಿನಗಳು ಇಲ್ಲ. ಈ ಸಮಯದಲ್ಲಿ ಗೃಹ ಪ್ರವೇಶ ಮಾಡಿದರೆ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ ಮತ್ತು ಇದರಿಂದ ಹಣಕಾಸು ನಷ್ಟ ಮತ್ತು ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.  ಈ ತಿಂಗಳು ಅಶ್ವಿನಿ/ಕಾರ್ತಿಕ ಇದ್ದರೂ, ಗೃಹ ಪ್ರವೇಶಕ್ಕೆ ಅನುಕೂಲಕರ ದಿನವಿದೆಯೇ ಎಂದು ಕೇಳಿತಿಳಿದುಕೊಳ್ಳಿ. ಮುಂದಿನ ತಿಂಗಳು 19, 25 ಮತ್ತು 30ನೇ ತಾರೀಕು ಗೃಹ ಪ್ರವೇಶ ಮಾಡಿಕೊಳ್ಳಬಹುದು. ಡಿಸೆಂಬರ್ 2020ರ 10, 16, 23 ತಾರೀಖುಗಳು ಗೃಹ ಪ್ರವೇಶಕ್ಕೆ ಸೂಕ್ತವಾಗಿದೆ. 

2021ರ ಜನವರಿ 9ರಂದು ಶುಭದಿನವಿದೆ. ನಿಮ್ಮ ಹುಟ್ಟಿದ ತಕ್ಕಂತೆ ಈ ತಿಂಗಳಲ್ಲಿ ಸೂಕ್ತವಾದ ದಿನವಿದೆಯೇ ಎಂದು ಆರ್ಚಕರು ಅಥವಾ ಪಂಡಿತರಲ್ಲಿ ವಿಚಾರಿಸಬಹುದು. ಫೆಬ್ರವರಿ 2021ರಲ್ಲಿಯೂ ಸೂಕ್ತ ದಿನವಿಲ್ಲ. ಬಸಂತ್ ಪಂಚಮಿಯು ಫೆಬ್ರವರಿ 16ರಂದು ಇದ್ದರೂ ಆರ್ಚಕರಲ್ಲಿ ಕೇಳಿ ಮುಂದುವರೆಯುವುದು ಒಳ್ಳೆಯದು. 2021ರ ಮಾರ್ಚ್, ಏಪ್ರಿಲ್‍ನಲ್ಲಿಯೂ ಶುಭದಿನವಿಲ್ಲ.

2021ರ ಮೇ 13, 14, 21, 22, 24 ಮತ್ತು 26ರಂದು ನಿಮ್ಮ ಹೊಸ ಮನೆಗೆ ಗೃಹ ಪ್ರವೇಶ ಮಾಡಲು ಪ್ರಶಸ್ತವಾಗಿದೆ. ಮೇ 14-15ರಂದು ಅಕ್ಷಯ ತೃತೀಯ ಬರುತ್ತದೆ. ಗೃಹ ಪ್ರವೇಶಕ್ಕೆ ಇದು ಅತ್ಯಂತ ಶುಭ ದಿನವೆಂದು ಹೇಳಲಾಗುತ್ತದೆ. 2021ರ ಜೂನ್ 4, 5, 19 ಮತ್ತು 26ರಂದು ಸಹ ಗೃಹ ಪ್ರವೇಶ ಮಾಡಬಹುದು. ಜೂನ್ 10ರಂದು ಅತ್ಯಂತ ಒಳ್ಳೆಯ ಮಹೂರ್ತವಿದ್ದರೂ ಅಂದೇ ಸೂರ್ಯಗ್ರಹಣ ಇರುವುದರಿಂದ ಈ ದಿನಾಂಕವನ್ನು ತಪ್ಪಿಸುವುದು ಒಳ್ಳೆಯದು. ಜುಲೈ 1ರಂದು ಸಹ ಶುಭದಿನವಾಗಿದೆ. ಜುಲೈ ಮಧ್ಯದಿಂದ ಅಕ್ಟೋಬರ್ 2021ರವರೆಗೆ ಅಂತಹ ಒಳ್ಳೆಯ ದಿನಗಳು ಇಲ್ಲ. ಹೀಗೆ, 2021ರವರೆಗೆ ಸಾಕಷ್ಟು ದಿನಗಳು ಗೃಹ ಪ್ರವೇಶಕ್ಕೆ ಪೂರಕವಾಗಿದ್ದು, ನಿಮ್ಮ ಕನಸಿನ ಮನೆಗೆ ಪ್ರವೇಶಿಸುವ ಸಂಕಲ್ಪವನ್ನು ಇಂದೇ ಮಾಡಿ. ಅಂದಹಾಗೆ, ಇಲ್ಲಿ ನೀಡಲಾದ ದಿನಗಳು ಮಾಹಿತಿಗಷ್ಟೇ, ನಿಮ್ಮ ಆರ್ಚಕರು, ಪಂಡಿತರು, ಜ್ಯೋತಿಷಿಗಳ ಬಳಿ ವಿಚಾರಿಸಿದರೆ ನಿಮ್ಮ ಗೃಹ, ನಕ್ಷತ್ರಗಳಿಗೆ ಸೂಕ್ತವಾಗಿ ಶು`À ಮಹೂರ್ತಗಳನ್ನು ಸೂಚಿಸುತ್ತಾರೆ.

ಗೃಹ ಪ್ರವೇಶಕ್ಕೆ ಒಳ್ಳೆಯ ದಿನ ಯಾವುದಿದೆ? ಈ ಕೆಳಗಿನ ಕ್ಯಾಲೆಂಡರ್‌ ನೋಡಿ

ಗೃಹ ಪ್ರವೇಶ ದಿನಾಂಕ     ವಾರ   ತಿಥಿ
ನವೆಂಬರ್ 19. 2020 ಗುರುವಾರಪಂಚಮಿ
ನವೆಂಬರ್ 25, 2020ಬುಧವಾರಏಕಾದಶಿ
ನವೆಂಬರ್ 30, 2020 ಸೋಮವಾರಹುಣ್ಣಿಮೆ
ಡಿಸೆಂಬರ್ 10, 2020 ಗುರುವಾರಏಕಾದಶಿ
ಡಿಸೆಂಬರ್ 16, 2020 ಬುಧವಾರ   ತೃತಿಯಾ
ಡಿಸೆಂಬರ್ 23, 2020   ಬುಧವಾರ     ದಶಮಿ
ಜನವರಿ 9, 2021       ಶನಿವಾರಏಕಾದಶಿ
ಮೇ 13, 2021   ಗುರುವಾರ        ದೂಜ್ (ತ್ರಯೋದಶಿ)
ಮೇ 14, 2021      ಶುಕ್ರವಾರ   ಅಕ್ಷಯ ತೃತೀಯಾ *
ಮೇ 21, 2021        ಶುಕ್ರವಾರ   ದಶಮಿ
ಮೇ 22, 2021   ಶನಿವಾರ ಏಕಾದಶಿ
ಮೇ 24, 2021   ಸೋಮವಾರ     ತ್ರಯೋದಶಿ
ಮೇ 26, 2021    ಬುಧವಾರ    ಪ್ರತಿಪಾದ (ಚಂದ್ರಗ್ರಹಣ)
ಜೂನ್ 4, 2021  ಶುಕ್ರವಾರ    ಏಕಾದಶಿ
ಜೂನ್ 05, 2021ಶನಿವಾರಏಕಾದಶಿ
ಜೂನ್ 19, 2021 ಶನಿವಾರದಶಮಿ
ಜೂನ್ 26, 2021ಶನಿವಾರತ್ರಯೋದಶಿ
ಜುಲೈ 1, 2021 ಗುರುವಾರ   ಸಪ್ತಮಿ
ನವೆಂಬರ್ 5, 2021    ಶುಕ್ರವಾರ ತ್ರಯೋದಶಿ
ನವೆಂಬರ್ 6, 2021  ಶನಿವಾರತೃತೀಯಾ
ನವೆಂಬರ್ 10, 2021    ಬುಧವಾರ   ಸಪ್ತಮಿ
ನವೆಂಬರ್ 20, 2021ಶನಿವಾರ      ದೂಜ್
ನವೆಂಬರ್ 29, 2021  ಸೋಮವಾರ       ದಶಮಿ
ಡಿಸೆಂಬರ್ 13, 2021   ಸೋಮವಾರ     ದಶಮಿ
2021ರ ಮೇ 14-15ರಂದು ಅಕ್ಷಯ ತೃತೀಯವಿದ್ದು, ಗೃಹ ಪ್ರವೇಶಕ್ಕೆ ಅತ್ಯಂತ ಶುಭ ದಿನಗಳಾಗಿವೆ.

ಗೃಹ ಪ್ರವೇಶಕ್ಕೆ ಮೊದಲು ಮನೆಯ ವಸ್ತುಗಳನ್ನು ತರಬಹುದೇ?

ಬಲ್ಲವರ ಪ್ರಕಾರ ಗ್ಯಾಸ್ ಸಿಲಿಂಡರ್ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಹೊಸ ಮನೆಗೆ ಗೃಹ ಪ್ರವೇಶಕ್ಕೆ ಮೊದಲು ತರಬಾರದು ಎನ್ನಲಾಗುತ್ತದೆ. ಆದರೆ, ಬೆಂಗಳೂರಿನಂತಹ ನಗರಗಳಲ್ಲಿ ಮನೆ ಬದಲಾಯಿಸುವ ಸಮಯ, ಸಂದರ್ಭಕ್ಕೆ ತಕ್ಕಂತೆ ಕೆಲವರಿಗೆ ಇದು ಕಷ್ಟವಾಗಬಹುದು. ಇದಕ್ಕಾಗಿ ನಿಮ್ಮ ಆರ್ಚಕರು/ಪಂಡಿತರಲ್ಲಿ ಕೇಳಿ ಮುಂದುವರೆಯಿರಿ.

Leave a Reply

Your email address will not be published. Required fields are marked *