ವಿಪ್ರೋ, ಇನ್ಫೋಸಿಸ್, ಟಾಟಾ ಕಂಪನಿಗಳಲ್ಲಿ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

By | 27/09/2021

ದೊಡ್ಡ ದೊಡ್ಡ ಕಂಪನಿಗಳಲ್ಲಿ ನೀವು ಉದ್ಯೋಗಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೀರಾ ? ಈ ದಿಕ್ಕಿನಲ್ಲಿ ನೀವು ಸಾಗುವುದಾದರೆ ಸಿದ್ಧತೆಯನ್ನು ಸರಿಯಾದ ರೀತಿಯಲ್ಲಿ ಮಾಡುವುದು ಅತ್ಯಗತ್ಯ.

ಸರಿಯಾದ ಸಿದ್ಧತೆ ನಡೆಸಿದರೆ, ಬಹಳ ಸುಲಭವಾಗಿ ಕೆಲಸ ಪಡೆಯಬಹುದು. ನಾವು ಎಷ್ಟೇ ತಯಾರಿ ಮಾಡಿಕೊಂಡಿದ್ದರೂ ಕೂಡಾ ಕಂಪನಿಗಳು ಅಭ್ಯರ್ಥಿಗಳಿಂದ ಏನನ್ನು ನಿರೀಕ್ಷಿಸುತ್ತದೆ ಎಂಬ ಗೊಂದಲ ಇದ್ದೇ ಇರುತ್ತದೆ. ದೈತ್ಯ ಐಟಿ ಕಂಪನಿಗಳಲ್ಲಿ ಯಾವ ರೀತಿ ಸಂದರ್ಶನ, ನೇಮಕಾತಿ, ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ? ನೀವು ಯಾವ ರೀತಿ ಸಂದರ್ಶನಕ್ಕೆ ಸಿದ್ಧರಾಗಬೇಕು ಈ ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ ;

  1. 1. ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (TCS)

ಅಪ್ಟಿಟ್ಯೂಡ್ ಟೆಸ್ಟ್ ( Aptitude Test ) : ಟಿಸಿಎಸ್ ಕಂಪನಿಯು ಲಾಜಿಕ್, ಇಂಗ್ಲಿಷ್ ಮತ್ತು ಮಾಥಮೆಟಿಕ್ಸ್ ಗೆ ಸಂಬಂಧಿಸಿದ ಪರೀಕ್ಷೆ ನಡೆಸುತ್ತದೆ.

ಹೆಚ್ ಆರ್ ಸಂದರ್ಶನ ( HR Interview) : ಈ ಸುತ್ತಿನಲ್ಲಿ ಕಂಪನಿಯು ಅಭ್ಯರ್ಥಿಗಳ ಸಂವಹನ ಕೌಶಲ್ಯಗಳನ್ನು ಪರಿಶೀಲಿಸುತ್ತದೆ.

ಟೆಕ್ನಿಕಲ್ ಸಂದರ್ಶನ ( Technical Interview) : ಕಂಪನಿಯು ತಾಂತ್ರಿಕ ಜ್ಞಾನ ಮತ್ತು ಅದರ ಟ್ರೆಂಡ್ಸ್ ಗಾಗಿ ಅಭ್ಯರ್ಥಿಗಳ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ.

2. ಇನ್ಫೋಸಿಸ್ ( Infosys) : ಇನ್ಫೋಸಿಸ್ ಕಂಪನಿಯು ವರ್ಬಲ್, ರೀಸನಿಂಗ್, ಮ್ಯಾಥಮೆಟಿಕಲ್, ಪಝಲ್ ಸಾಮರ್ಥ್ಯ – ಇಂತಹ ಪರೀಕ್ಷೆಗಳನ್ನು ನಡೆಸುತ್ತದೆ.

ಪರೀಕ್ಷೆಯಲ್ಲಿ 100 ಪ್ರಶ್ನೆಗಳಿದ್ದು, ಅಭ್ಯರ್ಥಿಗಳಿಗೆ ಸುಮಾರು 1 ಗಂಟೆ ( 60 ನಿಮಿಷ) ಕಾಲಾವಕಾಶ ನೀಡಲಾಗುತ್ತದೆ.

3. ಅಸೆಂಚರ್ ( Accenture) :

ವರ್ಬಲ್ ಮತ್ತು ಅಪ್ಟಿಟ್ಯೂಡ್ ಸಾಮರ್ಥ್ಯದ ಪರೀಕ್ಷೆ : ಈ ಸುತ್ತಿನಲ್ಲಿ 55 ಪ್ರಶ್ನೆಗಳನ್ನು ನೀಡಿ, 60 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

ಟೆಕ್ನಿಕಲ್ ರೌಂಡ್ : ಜಾವಾ, ಫೈಥಾನ್, C++,C, ಇತ್ಯಾದಿ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಹೆಚ್ ಆರ್ ರೌಂಡ್ : ಈ ಸುತ್ತಿನಲ್ಲಿ ಅಭ್ಯರ್ಥಿಗಳ ಸಂವಹನ ಕೌಶಲಗಳನ್ನು ಪರೀಕ್ಷಿಸಲಾಗುತ್ತದೆ.

4. ವಿಪ್ರೋ ( WIPRO)

ಪ್ರಿ- ಪ್ಲೇಸ್ ಮೆಂಟ್ ಟಾಕ್ : ಈ ಸುತ್ತಿನಲ್ಲಿ ಉದ್ಯೋಗ ಮತ್ತು ಕಂಪನಿಯ ಮಾಹಿತಿ ವಿವರಣೆಯನ್ನು ಒಳಗೊಂಡಿರುತ್ತದೆ.

ಅಪ್ಟಿಟ್ಯೂಡ್ ಟೆಸ್ಟ್ : ಈ ಸುತ್ತಿನಲ್ಲಿ ಇಂಗ್ಲಿಷ್, ಲಾಜಿಕಲ್ ಮತ್ತು ಕ್ವಾಂಟ್ಸ್ ವಿಭಾಗಗಳ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ.

ಪ್ರಬಂಧ ಬರೆಯುವುದು : ಈ ಸುತ್ತಿನಲ್ಲಿ ಕಂಪನಿಯು ಅಭ್ಯರ್ಥಿಯ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತವನ್ನು ತಿಳಿದುಕೊಳ್ಳಲು ಪ್ರಬಂಧ ಬರೆಸುತ್ತದೆ.

ಕೋಡಿಂಗ್ – ಕೋಡಿಂಗ್ ಸುತ್ತು ಎರಡು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. 60 ನಿಮಿಷಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸಬೇಕು.

ಸಂದರ್ಶನ : ಕೊನೆಯ ಸುತ್ತು ಇದಾಗಿದೆ. ಇಲ್ಲಿ OOP, DSA, DBMS ಇತ್ಯಾದಿಗಳಲ್ಲಿ ಅಭ್ಯರ್ಥಿಯ ಸಾಮರ್ಥ್ಯವನ್ನು ಪರೀಕ್ಷಿಸಲು ಟೆಕ್ನಿಕಲ್ ಮತ್ತು ಹೆಚ್ ಆರ್ ಇಂಟರ್ ವ್ಯೂಗಳನ್ನು ನಡೆಸಲಾಗುತ್ತದೆ.

5. ಟಾಟಾ (TATA)

ಡಿ 2 ಸಿ ಮೌಲ್ಯ ಮಾಪನ ( D2C Assessment ) : ಪ್ರೋಗ್ರಾಮಿಂಗ್ ಫಂಡಮೆಂಟಲ್ಸ್, ಜನರಲ್ ಅಪ್ಟಿಟ್ಯೂಡ್, ಸಾಫ್ಟ್ ಸ್ಕಿಲ್ ಮತ್ತು ಎಲಿಮೆಂಟರಿ ಆನ್ಲೈನ್ ಕೋಡಿಂಗ್ ಬಗ್ಗೆ ಕೇಳಲಾಗುತ್ತದೆ.

ತಾಂತ್ರಿಕ ಸಂದರ್ಶನ ( Technical Interview) : ಈ ಸುತ್ತಿನಲ್ಲಿ ಸಮಸ್ಯೆ – ಬಗೆಹರಿಸುವಿಕೆ, ತಾಂತ್ರಿಕ ಮತ್ತು ಕ್ರಿಟಿಕಲ್ ಕೌಶಲಗಳನ್ನು ಪರೀಕ್ಷಿಸಲಾಗುತ್ತದೆ.

6. ಇಂಟ್ಯೂಟ್ ( Intuit)

ಅಪ್ಟಿಟ್ಯೂಡ್ ಟೆಸ್ಟ್ – ಕಂಪನಿಯು ಅಭ್ಯರ್ಥಿಗಳ ಲಾಜಿಕ್ ಮತ್ತು ಇಂಗ್ಲೀಷ್ ಕೌಶಲ್ಯ ಗಳನ್ನು ಪರೀಕ್ಷಿಸಿ ಅವರ ಅರ್ಹತೆಯನ್ನು ಪರಿಶೀಲಿಸುತ್ತದೆ

ಕೋಡಿಂಗ್/ ಟೆಕ್ನಿಕಲ್ ಟೆಸ್ಟ್ : ಕಂಪನಿಯು ಅಭ್ಯರ್ಥಿಯ ತಾಂತ್ರಿಕ ಕೌಶಲ್ಯಗಳನ್ನು ಈ ಸುತ್ತಿನಲ್ಲಿ ಪರೀಕ್ಷಿಸುತ್ತದೆ. ಅಲ್ಗಾರಿದಮ್ಸ್, ಡೇಟಾ ಸ್ಟ್ರಕ್ಚರ್ಸ್,ಒಒಪಿಗಳು, ಒಎಸ್ ಗಳ ಬಗ್ಗೆ ಸುಮಾರು 35 ಪ್ರಶ್ನೆಗಳು ಇರುತ್ತದೆ.

ಹೆಚ್ ಆರ್ ಸುತ್ತು : ಈ ಸುತ್ತಿನಲ್ಲಿ ಸಿಚುಯೇಷನಲ್ ( ಸಾಂದರ್ಭಿಕ ) ಪ್ರಶ್ನೆ ಗಳು, ಕಂಪನಿಯ ಮಾಹಿತಿ ಮತ್ತು ಅಭ್ಯರ್ಥಿಗಳ ಪರಿಚಯವನ್ನು ಕೇಳಲಾಗುತ್ತದೆ.

Leave a Reply

Your email address will not be published. Required fields are marked *