ಕಮಲಿ: ಧಾರವಾಹಿಯ ಹಳ್ಳಿಹುಡುಗಿ, ನಿಜ ಜೀವನದಲ್ಲಿ ಹೇಗಿದ್ದಾರೆ?

ಝೀವಾಹಿನಿಯಲ್ಲಿ ಇತ್ತೀಚೆಗೆ ಆರಂಭಗೊಂಡ ಕಮಲಿ ಸೀರಿಯಲ್ ಆರಂಭದಿಂದಲೂ ಇಂಟ್ರೆಸ್ಟಿಂಗ್. ಅದೇ ತಲೆಚಿಟ್ಟುಹಿಡಿಸುವ ಫ್ಯಾಮಿಲಿ ಸೀರಿಯಲ್ ನೋಡಿ ತಲೆಕೆಟ್ಟು ಹೋಗಿರುವವರಿಗೆ ಕಾಲೇಜು ಸ್ಟೋರಿ ಇರುವ ಕಮಲಿ ಇಷ್ಟವಾಗಿರುವುದು ಸುಳ್ಳಲ್ಲ. ಕೊರಿಯನ್ ಡ್ರಾಮಾ ನೆನಪಿಸುವಂತೆ ಇಲ್ಲೂ ಕಾಲೇಜಿನಲ್ಲಿ ನಡೆಯುವ ಘಟನೆಗಳು ಇಂಟ್ರೆಸ್ಟಿಂಗ್.

ನಗರದಲ್ಲಿರುವ ಕಾಲೇಜಿಗೆ ಮುಗ್ಧಮುಖದ, ಮುದ್ದಾಗಿ ಮಾತನಾಡುವ ಕಮಲಿಯೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆಕೆಯ ಹಳ್ಳಿ ಶೈಲಿಯ ಮಾತುಗಾರಿಕೆ, ಸಾಧಿಸಬೇಕೆಂಬ ಹಂಬಲ, ಒಳ‍್ಳೆಯತನ, ಮುಗ್ಧತೆ, ಸೌಂದರ್ಯದಲ್ಲಿ ಸ್ನಿಗ್ಧತೆ ಇವೆಲ್ಲದರಿಂದ ಕಮಲಿಯೀಗ ನಿಧಾನವಾಗಿ ಕನ್ನಡಿಗರ ಹೃದಯ ಹೊಕ್ಕಿದ್ದಾರೆ.

ಕಮಲಿ ಎಂದರೆ ಹಳ್ಳಿಹುಡುಗಿ. ಎಷ್ಟು ಮುದ್ದುಮುದ್ದಾಗಿ ಹಳ‍್ಳಿ ಸೊಗಡಿನಲ್ಲಿ ಕಾಣುತ್ತಾಳೆ. ಬಹುಶಃ ಧಾರವಾಹಿ ತಂಡದವರು ತುಂಬಾ ಕಷ್ಟಪಟ್ಟು ಯಾವುದೋ ಹಳ್ಳಿಮೂಲೆಯಿಂದ ಈ ಪಾತ್ರಕ್ಕಾಗಿಯೇ ಈಕೆಯನ್ನು ಆರಿಸಿ ತಂದಿದ್ದಾರೆ ಎಂದುಕೊಂಡರೆ ಅದು ತಪ್ಪು. ಯಾಕೆಂದರೆ, ಈ ಕಮಲಿ ಹಳ್ಳಿಹುಡುಗಿಯಲ್ಲ- ಮಾಡರ್ನ್ ಬೆಡಗಿ ಎಂದರೆ ಅಚ್ಚರಿಪಡುವಿರಿ. ಈ ಕೆಳಗಿನ ಫೋಟೊ ನೋಡಿ(ಫೋಟೊ ಕೃಪೆ: ಕಮಲಿ ನಾಯಕಿ ನಟಿಯ ಫೇಸ್ಬುಕ್ ಪುಟ).

ಕಮಲಿಯ ನಿಜವಾದ ಹೆಸರು: ಅಮೂಲ್ಯ ಓಂಕಾರ್. ಕೊರಿಯನ್ ಡ್ರಾಮಾದ ಹುಡುಗಿಗೆ ಈಜು ಇಷ್ಟವಾದರೆ ಈ ಕಮಲಿಗೆ ಕಬಡ್ಡಿ ಎಂದರೆ ಪಂಚಪ್ರಾಣ. ತನ್ನ ಪ್ರತಿಭೆಯಿಂದಲೇ ಸ್ಕಾಲರ್ಷಿಪ್ ಪಡೆದು ನಗರಕ್ಕೆ ಬರುವ ಕಮಲಿಗೆ ಒಂದಿಷ್ಟು ಸವಾಲುಗಳು ಬರುತ್ತವೆ. ಅವೆಲ್ಲವನ್ನು ಆಕೆ ಮೆಟ್ಟಿ ನಿಂತು ಹೇಗೆ ತನ್ನ ಕನಸು ನನಸಾಗಿಸಿಕೊಳ್ಳುತ್ತಾಳೆ ಎಂಬ ಕಥಾ ಹಂದರ ಈ ಧಾರವಾಹಿಯದ್ದು.

ಈ ಕಮಲಿ ಕುರಿತು ಸಾಕಷ್ಟು ಜನರು ಫೇಸ್ಬುಕ್ಕಿನಲ್ಲಿ ಹುಡುಕುತ್ತಿದ್ದಾರೆ. ಆಕೆಯ ಒಂದೆರಡು ವರ್ಷದ ಫೇಸ್ಬುಕ್ ಪುಟಕ್ಕೆ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಲೈಕ್ ಬಂದಿದೆ. ಅಚ್ಚರಿ ಗೊತ್ತೆ, ಗೂಗಲ್ ನಲ್ಲಿ ಕಮಲಿ ಎಂದು ಹುಡುಕಿದರೆ ಕಮಲಿ ಸೀರಿಯಲ್ ಹೀರೋಯಿನ್ ಎಂಬ ಆಯ್ಕೆಯೂ ಬರುತ್ತದೆ. ಆಕೆಯ ಕುರಿತು ತುಂಬಾ ಜನರು ಮಾಹಿತಿ ಹುಡುಕುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ.

ಕಮಲಿ ಪಾತ್ರಕ್ಕೆ ಜೀವ ತುಂಬುತ್ತಿರುವ ಅಮೂಲ್ಯ ಅವರ ಫೇಸ್ಬುಕ್ ಪುಟವನ್ನು ನೋಡಿ ಅವರ ಪ್ರತಿಭೆಗೆ ಶಹಬ್ಬಾಸ್ ಎನ್ನಬಹುದು. ಅವರ ಫೇಸ್ಬುಕ್ ಪುಟದ ಲಿಂಕ್ ಇಲ್ಲಿದೆ. ಇನ್ಸ್ಟಾಗ್ರಾಂನಲ್ಲಿಯೂ ಅವರಿದ್ದಾರೆ.

ಕರ್ನಾಟಕ ಬೆಸ್ಟ್ ಕಡೆಯಿಂದ ಹಳ್ಳಿ ಹುಡುಗಿ ಕಮಲಿಗೆ ಮತ್ತು ಅಭೂತಪೂರ್ವವಾಗಿ ಪಾತ್ರಕ್ಕೆ ಜೀವ ತುಂಬುತ್ತಿರುವ ಅಮೂಲ್ಯ ಓಂಕಾರ್ ಅವರಿಗೆ ಆಲ್ ದಿ ಬೆಸ್ಟ್!

ಕರ್ನಾಟಕ ಬೆಸ್ಟ್ ಗೆ ನೀವೂ ಲೇಖನ ಬರೆಯಿರಿ