ಕಿರುಚಿತ್ರ: ಮರೆಯದೇ ನೋಡಿ ‘ಮಾಸದ ನೆನಪು’

‘ ನೆನಪು’ಈ ಹೆಸರು ಕೇಳುತ್ತಲೇ ಎಲ್ಲರ ಮನದಲ್ಲಿ ಇದರ ಕುರಿತು ಸಾಲು ಸಾಲು ಭಾವಗಳೇ ಹೊರಹೊಮ್ಮುತ್ತದೆ. ಇವುಗಳಿಗೆ ಯಾವತ್ತೂ ಸಾವಿಲ್ಲ. ಇವುಗಳಿಗೆ ಅಳಿಸುವ, ನಗಿಸುವ, ಛಲವುಕ್ಕಿಸುವ, ಎಲ್ಲವನ್ನೂ ಅವಡುಗಚ್ಚಿ ಸಹಿಸುವ ಶಕ್ತಿ ಕೂಡ ಇದೆ. ಇವುಗಳಲ್ಲಿ ಎಲ್ಲಕ್ಕಿಂತ ಅತಿಮಧುರವಾದ ನೆನಪೆಂದರೆ ಅದು ಬಾಲ್ಯದ ನೆನಪು.

ಈ ಬಾಲ್ಯದ ನೆನಪುಗಳನ್ನೇ ಇಟ್ಟುಕೊಂಡು ಬೈಲ್ಮನಿ ಕ್ರಿಯೇಷನ್ಸ್ ನವರು ‘ಮಾಸದ ನೆನೆಪು’ ಎಂಬ ಕಿರುಚಿತ್ರವೊಂದನ್ನು ಹೊರತಂದಿದ್ದಾರೆ. ಪ್ರಾರಂಭದಲ್ಲಿ ಇದು ನಮ್ಮ ಬಾಲ್ಯದ ನೆನಪುಗಳನ್ನು ಒಂದಷ್ಟು ಕಣ್ಮುಂದೆ ತರಿಸಿ ನಗು ಮೂಡಿಸಿದರೆ ಕೊನೆಗೆ ಕಣ್ಣಂಚನ್ನು ಒದ್ದೆ ಮಾಡಿ ಬಿಡುತ್ತದೆ.

ಇರುವ ವಿಷಯವನ್ನೇ ಎತ್ತಿಕೊಂಡು ಒಂದು ಸುಂದರವಾದ ಚಿತ್ರಕತೆ ಬರೆದು ಪಾತ್ರಕ್ಕೆ ಜೀವತುಂಬಿದ್ದಾರೆ. ಜತೆಗೆ ಚಿತ್ರದ ಕೊನೆಯಲ್ಲಿ ಒಂದೊಳ್ಳೆ ಸಂದೇಶ ಕೂಡ ನೀಡಿದ್ದಾರೆ. ತಪ್ಪದೇ ಈ ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

ಲಿಖಿತ ಶೆಟ್ಟಿ ಬೂದಾಡಿ ಅವರ ನಿರ್ದೇಶನದಲ್ಲಿ, ಸುಮಂತ್ ಭಟ್ ಛಾಯಾಗ್ರಹಣದಲ್ಲಿ ,ವಿಶು ಸಿದ್ದಾಪುರ ಅವರ ಸಂಕಲನದಲ್ಲಿ ಈ ಕಿರುಚಿತ್ರ ಅದ್ಭುತವಾಗಿ ಮೂಡಿಬಂದಿದೆ.

Leave a Reply

Your email address will not be published. Required fields are marked *