ಲೇಖನ; ಏಳು ಮಲ್ಲಿಗೆ ತೂಕದ ಹುಡುಗಿಯಾಗಬೇಕೆ…?

ಅರೇ… ನೀ ಯಾಕೆ ಇಷ್ಟು ದಪ್ಪಗಾಗಿದ್ದು. ಕಳೆದು ಸಲ ನೋಡುವಾಗ ಇಷ್ಟು ದಪ್ಪಗಿರಲಿಲ್ಲ ಅಲ್ವಾ…? ಎಂದಾಗ ನಾನು ಮನಸ್ಸಿನೊಳಗೆ ನಕ್ಕು ಹೌದೌದು ಎಂದು ಸುಮ್ಮನಾದೆ. ಮತ್ತೂ ಸುಮ್ಮನಾಗದೇ, ಇಷ್ಟು ಚಿಕ್ಕ ಪ್ರಾಯಕ್ಕೆ ಹೀಗೆಲ್ಲಾ ದಪ್ಪಗಾಗಬಾರದು. ಏನಾದರೂ ವ್ಯಾಯಾಮ ಮಾಡು, ಡಯೆಟ್ ಮಾಡು ಎಂದರು. ನನಗೆ ಈ ಮಾತನ್ನು ಹೇಳಿದವರು ಯಾವ ರೀತಿಯಲ್ಲೂ ಬಳುಕವ ಬಳ್ಳಿಯಂತೆ ಕಾಣುತ್ತಿರಲಿಲ್ಲ. ಇರಲಿ ಬಿಡಿ ನನ್ನ ದೇಹ ನನ್ನಿಷ್ಟ. ಹೊತ್ತುಕೊಂಡ ನನಗೆ ಭಾರವಿಲ್ಲವಂತೆ. ನಿಮಗ್ಯಾಕೆ ತಲೆಬಿಸಿ ಮಾರಾಯ್ರೆ ಎಂದು ಸುಮ್ಮನಾದೆ. ಮುಖ ಸಿಂಡರಿಸಿ ಆಕೆ ಹೊರಟೇ ಬಿಟ್ಟಳು.… Read More »

ಕತೆ; ‘ಕೃಷ್ಣಾರ್ಪಣ ಮಸ್ತು’

ಪವಿತ್ರಾ ಶೆಟ್ಟಿ ಅಮ್ಮ ಫೋನ್ ಮಾಡಿದ್ದಳು. ಚಿಕ್ಕಮ್ಮತ್ತೆ ಏನೇನೋ ಮಾತಾಡುತ್ತಿದ್ದಾರೆ. ಯಾಕೋ ಇತ್ತೀಚೆಗೆ ಅವರು ಈ ಲೋಕದಲ್ಲಿ ಇದ್ದವರ ಹಾಗೇ ಇಲ್ಲಪ್ಪ. ನೀ ಒಮ್ಮೆ ಬಂದು ಹೋಗು. ಎದೆಯೊಳಗೆ ಪುಕು ಪುಕು ಶುರುವಾಗಿ ಅದು ಹೊಟ್ಟೆಯೊಳಗೂ ಕಾಣಿಸಿಕೊಂಡು ಯಾಕೋ ಪಾಯಿಖಾನೆಗೆ ಓಡಿಯೇ ಬಿಡೋಣ ಅನ್ನಿಸಿ ಅಮ್ಮಾ.. ನಿನಗೆ ಆಮೇಲೆ ಫೋನ್ ಮಾಡುತ್ತೇನೆ ಎಂದು ಪೋನಿಟ್ಟೆ. ಹೆದರಿಕೆಯಾದಾಗಲೆಲ್ಲ ಹೊಟ್ಟೆಯೊಳಗೆ ಏನೇನೋ ತಳಮಳವಾಗಿ ನನಗೆ ಪಾಯಿಖಾನೆಗೆ ಹೋಗಬೇಕು ಅನ್ನಿಸುವುದು ಮೊದಲಿನಿಂದಲೂ ಇದ್ದ ಖಯಾಲಿ. ಅದು ಚಿಕ್ಕಮ್ಮತ್ತೆಯಿಂದಲೇ ಬಂದ ಉಡುಗೊರೆ. ಇನ್ನು ತಡ ಮಾಡುವುದು ಬೇಡ… Read More »

ಕಿರುಚಿತ್ರ: ಮರೆಯದೇ ನೋಡಿ ‘ಮಾಸದ ನೆನಪು’

‘ ನೆನಪು’ಈ ಹೆಸರು ಕೇಳುತ್ತಲೇ ಎಲ್ಲರ ಮನದಲ್ಲಿ ಇದರ ಕುರಿತು ಸಾಲು ಸಾಲು ಭಾವಗಳೇ ಹೊರಹೊಮ್ಮುತ್ತದೆ. ಇವುಗಳಿಗೆ ಯಾವತ್ತೂ ಸಾವಿಲ್ಲ. ಇವುಗಳಿಗೆ ಅಳಿಸುವ, ನಗಿಸುವ, ಛಲವುಕ್ಕಿಸುವ, ಎಲ್ಲವನ್ನೂ ಅವಡುಗಚ್ಚಿ ಸಹಿಸುವ ಶಕ್ತಿ ಕೂಡ ಇದೆ. ಇವುಗಳಲ್ಲಿ ಎಲ್ಲಕ್ಕಿಂತ ಅತಿಮಧುರವಾದ ನೆನಪೆಂದರೆ ಅದು ಬಾಲ್ಯದ ನೆನಪು. ಈ ಬಾಲ್ಯದ ನೆನಪುಗಳನ್ನೇ ಇಟ್ಟುಕೊಂಡು ಬೈಲ್ಮನಿ ಕ್ರಿಯೇಷನ್ಸ್ ನವರು ‘ಮಾಸದ ನೆನೆಪು’ ಎಂಬ ಕಿರುಚಿತ್ರವೊಂದನ್ನು ಹೊರತಂದಿದ್ದಾರೆ. ಪ್ರಾರಂಭದಲ್ಲಿ ಇದು ನಮ್ಮ ಬಾಲ್ಯದ ನೆನಪುಗಳನ್ನು ಒಂದಷ್ಟು ಕಣ್ಮುಂದೆ ತರಿಸಿ ನಗು ಮೂಡಿಸಿದರೆ ಕೊನೆಗೆ ಕಣ್ಣಂಚನ್ನು ಒದ್ದೆ ಮಾಡಿ… Read More »

ಲೇಖನ: ಮಗುವಿಗೆ ತುತ್ತುಣಿಸುವ ಕಷ್ಟ-ಸುಖ

ಒಂಬತ್ತು ತಿಂಗಳ ಪ್ರತೀಕ್ಷೆಯ ನಂತರ ಕೂಸೊಂದು ಕೈಗೆ ಬಂದಿತ್ತು.ಅದರ ಬೆಣ್ಣೆಯಂತಹ ಕೈ ಬೆರಳನ್ನು ನನ್ನ ಕೈ ಬೆರಳ ನಡುವೆ ಹಿಡಿದುಕೊಂಡಾಗ ಸಿಕ್ಕ ಅನುಭೂತಿ ಈ ಜನಮಕೆ ಇನ್ನೇನು ಬೇಡ ಇದೊಂದೇ ಸಾಕು ಅನ್ನುವ ಹಾಗಿತ್ತು. ಆರು ತಿಂಗಳ ವರೆಗೆ ಮಗುವಿನ ಲಾಲನೆ ಪಾಲನೆಯಲ್ಲಿ ಹೊತ್ತು ಹೋಗಿದ್ದೆ ತಿಳಿಯಲಿಲ್ಲ. ನಿಜದ ಪರಿಸ್ಥಿತಿಯ ಅರ್ಥವಾಗಿದ್ದು ಆರು ತಿಂಗಳ ಬಳಿಕ ಅದು ಮಗುವಿಗೆ ಊಟ ಕೊಡಿಸುವಾಗ. ಅಲ್ಲಿಯತನಕ ಮೆಂತೆ ಗಂಜಿ, ಜೀರಿಗೆ ಗಂಜಿ, ಸೋರೆಕಾಯಿ ಪಲ್ಯ, ಹಲ್ವಾ, ಚೂರ್ಣ ಹೀಗೆ ತಿಂದುಂಡು ಕೊಬ್ಬಿದ ದೇಹವನ್ನು ನನ್ನ… Read More »

ಕಿರು ಚಿತ್ರ; ‘ಪ್ರಕೃತಿ ಮತ್ತು ಮನುಷ್ಯ’

ಎಲ್ಲವನ್ನು ಪ್ರಕೃತಿಯಿಂದ ಪಡೆದುಕೊಂಡ ಮನುಷ್ಯ ಕೊನೆಗೆ ಅದೇ ಪ್ರಕೃತಿಯನ್ನು ನಾಶದ ಅಂಚಿಗೆ ಕೊಂಡೊಯ್ಯುತ್ತಾನೆ. ತಾನು ಮಾಡುತ್ತಿರುವ ಕೃತ್ಯದ ಬಗ್ಗೆ ಅರಿತುಕೊಂಡರೆ ಮುಂದಿನ ಜನಾಂಗಕ್ಕೂ ನಾವು ಮಾದರಿಯಾಗುತ್ತೇವೆ. ಲಾಕ್ ಡಾನ್ ಸಮಯದಲ್ಲಿ ಸುಮ್ಮನೇ ವನವಿಹಾರಕ್ಕೆಂದು ತೆರಳಿದ ಸ್ನೇಹಿತರ ಬಳಗವೊಂದು ಅಲ್ಲಿದ್ದ  ಕಸ ನೋಡಿ ‘ಪ್ರಕೃತಿ ಮತ್ತು ಮನುಷ್ಯ’ ಎಂಬ ಒಂದೊಳ್ಳೆಯ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರಕೃತಿಯ ಜತೆಗೆ ಮನುಷ್ಯ ಹೇಗೆ ಇದ್ದಾನೆ ಅವನು ಹೇಗೆ ಇರಬೇಕಿತ್ತು ಎಂದು ತೋರಿಸುವ ಒಂದು ಸಣ್ಣ ಪ್ರಯತ್ನ ಈ ಕಿರುಚಿತ್ರದಲ್ಲಿದೆ. ಸೋನು ಪ್ರಕಾಶ್ ಹೆಬ್ರಿ ಇದರ ನಿರ್ದೇಶನ ಮಾಡಿದ್ದಾರೆ.… Read More »

ಇದು ಮನಸ್ಸಿನ ವಿಷಯ: ಸಂಗಾತಿಯ ಸಾಂಗತ್ಯವಿಲ್ಲದ ಮೇಲೆ…

ನನ್ನ ಪರಿಚಯದವರೊಬ್ಬರಿದ್ದರು. ತುಂಬಾ ದರ್ಪದ ಮನುಷ್ಯ. ತಾನು ಹೇಳಿದ್ದೇ ವೇದವಾಕ್ಯ ಅನ್ನುವ ಮನೋಭಾವದವರು. ಒಂದು ಗಂಡು, ಒಂದು ಹೆಣ್ಣು ಮಕ್ಕಳು ಇದ್ದರು. ಹೆಂಡತಿ ಮಕ್ಕಳು ಗಂಡನ ಮಾತಿಗೆ ಎದುರಾಡುತ್ತಿರಲಿಲ್ಲ, ಅವರು ಮನೆಗೆ ಬರುತ್ತಿದ್ದಾರೆ ಎಂದು ಸುಳಿವು ಸಿಕ್ಕಾಗ ಮನೆಮಂದಿಯೆಲ್ಲಾ ಗಪ್ ಚುಪ್.ಅವರ ಊಟ ತಿಂಡಿ ಎಲ್ಲವೂ ಶಿಸ್ತಿನ ಪ್ರಕಾರ ನಡೆಯಬೇಕಿತ್ತು. ಅದೆಲ್ಲವೂ ಹೆಂಡತಿಯ ಕೆಲಸವಾಗಿತ್ತು. ಕಾಲಕ್ರಮೇಣ ಮಕ್ಕಳಿಗೆಲ್ಲಾ ಮದುವೆಯಾಯಿತು. ಒಂದು ದಿನ ಅವರ ಹೆಂಡತಿ ಆಕಸ್ಮಿಕವಾಗಿ ಸತ್ತು ಹೋದರು. ಹೆಂಡತಿ ಇರುವಾಗ ಎಲ್ಲರ ಮೇಲೆ ದರ್ಪ ತೋರಿಸುತ್ತಿದ್ದ ಅವರು ಹೆಂಡತಿ ಸತ್ತ… Read More »