KSP ಯಿಂದ ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸ್ನಾತಕೋತ್ತರ ಪದವೀಧರರಿಗೆ ಅವಕಾಶ – ಸುದ್ದಿಜಾಲ ನ್ಯೂಸ್

By | 31/12/2021

ನ್ಯಾಯ ವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ಮಿಕ್ಕುಳಿದ ಮತ್ತು ಕಲ್ಯಾಣ ಕರ್ನಾಟಕ ವೃಂದದ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ :30.12.2021 ರ ಬೆಳಿಗ್ಗೆ 10.00 ಗಂಟೆಗೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28.01.2022 ಸಂಜೆ 06.00 ಗಂಟೆಗೆ

ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ : 30-01-2022

ಜೀವಶಾಸ್ತ್ರ ವಿಭಾಗ : 02
ಭೌತ ಶಾಸ್ತ್ರ ವಿಭಾಗ : 02
ಡಿಎನ್ ಎ ವಿಭಾಗ : 04
ಕಂಪ್ಯೂಟರ್ ಫೊರೆನ್ಸಿಕ್ ವಿಭಾಗ : 02
ಮೊಬೈಲ್ ಫೊರೆನ್ಸಿಕ್ ವಿಭಾಗ : 02
ಆಡಿಯೋ ವಿಡಿಯೋ ವಿಭಾಗ : 02
ವಿಷ ವಿಜ್ಞಾನ ವಿಭಾಗ : 02

ಒಟ್ಟು ಹುದ್ದೆಗಳ ಸಂಖ್ಯೆ : 16

ಅರ್ಜಿ ಶುಲ್ಕ : ಸಾಮಾನ್ಯ ವರ್ಗ, ಪ್ರವರ್ಗ 2 ( ಎ), 2 ( ಬಿ), 3 ( ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ‌.250/- ( ಪ್ರತಿ ವಿಭಾಗಕ್ಕೆ ) , ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ – 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 100/- ( ಪ್ರತಿ ವಿಭಾಗಕ್ಕೆ )

ನಿಗದಿತ ಅರ್ಜಿ ಶುಲ್ಕವನ್ನು ನಗದು/ಆನ್ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಅಥವಾ ಹೆಚ್ ಡಿ ಎಫ್ ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಿ ನಂತರ ಚಲನ್ ನ ‘ ಅಭ್ಯರ್ಥಿ ಪ್ರತಿ’ ಯನ್ನು ಇಟ್ಟುಕೊಂಡಿರತಕ್ಕದ್ದು‌.

ವಯೋಮಿತಿ : ಅರ್ಜಿಯನ್ನು ಸ್ವೀಕರಿಸಲು ನಿಗದಿ ಪಡಿಸಿದ ದಿನಾಂಕದಂದು ಅಂದರೆ 28-01-2022 ಕ್ಕೆ ಅಭ್ಯರ್ಥಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡ ಗರಿಷ್ಠ ವಯೋಮಿತಿ ಮೀರಿರಬಾರದು.

ಸಾಮಾನ್ಯ ವರ್ಗ – 35 ವರ್ಷ
2ಎ, 3ಬಿ, 3ಎ, 3 ಬಿ – 38 ವರ್ಷ
ಪ.ಜಾ/ಪ.ಪಂ/ಪ್ರ-1 – 40 ವರ್ಷ

ಅರ್ಜಿಯನ್ನು ಸಲ್ಲಿಸುವ ವಿಧಾನ : ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಆನ್ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *