NVS ನಲ್ಲಿ ಉದ್ಯೋಗವಕಾಶ : ಅಕೌಂಟ್ಸ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ- ಸುದ್ದಿಜಾಲ ನ್ಯೂಸ್

By | 14/12/2021

ನವೋದಯ ವಿದ್ಯಾಲಯ ಸಮಿತಿಯಲ್ಲಿ ಜನರಲ್ ವ್ಯವಸ್ಥಾಪಕ, ಡೆಪ್ಯುಟಿ ಕಮಿಷನರ್ ಮತ್ತು ಅಕೌಂಟ್ಸ್ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅಧಿಸೂಚನೆಯನ್ನು ಓದಿ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 30, 2021

ಖಾಲಿ ಇರುವ ಹುದ್ದೆಗಳು : ಜನರಲ್ ವ್ಯವಸ್ಥಾಪಕ – 1 ಹುದ್ದೆ
ಡೆಪ್ಯುಟಿ ಕಮಿಷನರ್ – 1 ಹುದ್ದೆ
ಅಕೌಂಟ್ಸ್ ಅಧಿಕಾರಿ – 8 ಹುದ್ದೆ

ಒಟ್ಟು 10 ಹುದ್ದೆ

ಶೈಕ್ಷಣಿಕ ವಿದ್ಯಾರ್ಹತೆ : ಈ ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ / ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು.

ವಯೋಮಿತಿ : ಡಿ.30, 2021 ರ ಅನ್ವಯ ಗರಿಷ್ಠ 55 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಜ ₹ 44,900/- ರಿಂದ ₹. 2,15,900/- ಗಳವರೆಗೆ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಿ ತದನಂತರ ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *