2022 Career Resolutions: ವೃತ್ತಿ ಜೀವನದ ಯಶಸ್ಸಿಗೆ ಈ ನಿಯಮಗಳನ್ನು ಪಾಲಿಸಿ

By | 15/12/2021
graphing paper with text

ಉದ್ಯೋಗಕ್ಷೇತ್ರದಲ್ಲಿಪ್ರಗತಿ ಕಾಣಲು ಬಯಸುವವರಿಗೆ ತಜ್ಞರು ಒಂದಿಷ್ಟು ಕಿವಿಮಾತುಗಳನ್ನು ಇಲ್ಲಿಹೇಳಿದ್ದಾರೆ.

ಹೊಸ ವರ್ಷದ ಆರಂಭದಲ್ಲಿಕರಿಯರ್‌ನಲ್ಲಿಪ್ರಗತಿ ಕಾಣಲು ಪ್ರಯತ್ನಿಸಬೇಕು ಎಂಬ ಸಂಕಲ್ಪ ಬಹುತೇಕರು ಮಾಡಿಕೊಂಡಿರುತ್ತಾರೆ. ಉದ್ಯೋಗದಲ್ಲಿಪ್ರಗತಿ ಕಾಣುವ ಕುರಿತು ನೀವು ತಜ್ಞರಿಂದ, ಈಗಾಗಲೇ ಉದ್ಯೋಗದಲ್ಲಿಉನ್ನತ ಹಂತದಲ್ಲಿರುವವರಿಂದ, ಸಮಲೋಚಕರಿಂದ ಟಿಫ್ಸ್‌ ಪಡೆದಿರಬಹುದು. ಕರಿಯರ್‌ನಲ್ಲಿಸಾಧನೆ ಮಾಡಿರುವವರ ಅನುಭವಗಳನ್ನು ಕೇಳುವುದು ತುಂಬಾ ಒಳ್ಳೆಯ ಕೆಲಸ. ಅವರ ಅನುಭವ, ಆಲೋಚನೆಗಳು ಅತ್ಯುನ್ನತವಾಗಿರುತ್ತವೆ. ಇಂತಹ ಅನುಭವಿ ಸಾಧಕರು ಬಿಸ್ನೆಸ್‌ ಇನ್‌ಸೈಡರ್‌ಗೆ ನೀಡಿದ ಸಂದರ್ಶನದಲ್ಲಿಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಅವುಗಳಲ್ಲಿಆಯ್ದ ಕೆಲವು ಟಿಪ್ಸ್‌ ಗಳು ಇಲ್ಲಿವೆ.

2022 Career Resolutions: ನೆಟ್‌ವರ್ಕಿಂಗ್‌ ಅಗತ್ಯ

ನೀವು ಮಾಡುವ ಪ್ಲಾನ್‌ ನಿಮ್ಮೊಂದಿಗೆ ಕೊಂಚ ಸಮಯ ಮಾತ್ರ ಇರುತ್ತದೆ. ಆ ಪ್ಲಾನ್‌ ಅನ್ನು ಯಶಸ್ಸಾಗಿ ಪರಿವರ್ತಿಸಲು ಜನರ ಅವಶ್ಯಕತೆ ಇದೆ. ಇದಕ್ಕಾಗಿ ನೀವು ನಿಮ್ಮ ನೆಟ್‌ವರ್ಕ್‌ ಅನ್ನು ವಿಸ್ತರಿಸಿಕೊಳ್ಳಿರಿ ಎನ್ನುತ್ತಾರೆ ಲಿಂಕ್ಡ್‌ಇನ್‌ನ ಸಹ ಸ್ಥಾಪಕ ರೆಯಿನ್‌ ಹೊಫ್‌ಮನ್‌. ‘ಪ್ರತಿಯೊಬ್ಬರು ಬಲವಾದ ನೆಟ್‌ವರ್ಕ್‌ ರೂಪಿಸಿಕೊಳ್ಳಬೇಕು. ಇದು ನಿಮ್ಮ ಸಾಮರ್ಥ್ಯ‌ವನ್ನು ಹೆಚ್ಚಿಸಲಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

2022 Career Resolutions: ಮೀಟಿಂಗ್‌ ಮೂಲಕ ಕಲಿಕೆ

ಫೇಸ್‌ಬುಕ್‌ನ ಪ್ರಾಡಕ್ಟ್ ವಿನ್ಯಾಸ ವಿಭಾಗದ ಜೂಲಿಯೆ ಜುವೊ ಅವರು ದಿನದ ಹೆಚ್ಚಿನ ಸಮಯವನ್ನು ಮೀಟಿಂಗ್‌ನಲ್ಲಿಕಳೆಯುತ್ತಾರೆ. ಆಕೆ ಪ್ರತಿಯೊಂದು ಮೀಟಿಂಗ್‌ ಅನ್ನೂ ಗೇಮ್‌ ಪ್ಲಾನರ್‌ ಆಗಿ ಬಳಸುತ್ತಾರಂತೆ. ‘ನಾನು ನನ್ನ ಸಮಯದ ಕುರಿತು ಹೆಚ್ಚು ಗಮನ ನೀಡುತ್ತೇನೆ. ಪ್ರತಿದಿನದ ಮೀಟಿಂಗ್‌ ಹೊಸ ಅನುಭವ ನೀಡುತ್ತದೆ. ಇಲ್ಲಿಕಲಿಯಲು ಸಾಕಷ್ಟು ವಿಷಯಗಳು ಸಿಗುತ್ತವೆ. ನಾನು ಪ್ರತಿಸಭೆಗೂ ಒಂದು ಹೊಸ ಆಲೋಚನೆಯ ಜೊತೆ ಹೋಗುತ್ತೇನೆ. ಇಂತಹ ಐಡಿಯಾಗಳೇ ಯಶಸ್ಸಿಗೆ ಕಾರಣ.

top view photo of people near wooden table
Photo by fauxels on Pexels.com

2022 Career Resolutions: ಸ್ಮಾರ್ಟ್‌ವರ್ಕ್‌ ಅಗತ್ಯ

ಕರಿಯರ್‌ನಲ್ಲಿವಿನಮ್ರರಾಗಿರಬೇಕು ಮತ್ತು ಕಠಿಣ ಪರಿಶ್ರಮಿಗಳಾಗಿರಬೇಕು. ನನಗೆ ಕಠಿಣ ಪರಿಶ್ರಮಿಗಳು ಬೇಡ, ನನಗೆ ಸ್ಮಾರ್ಟ್‌ ಆಗಿ ಕೆಲಸ ಮಾಡುವವರು ಬೇಕು, ಇದೇ ನನ್ನ ವೃತ್ತಿಪರ ಗುಟ್ಟು ಎನ್ನುತ್ತಾರೆ ಬರ್ಗರ್‌ ಕಿಂಗ್‌, ಟಿಮ್‌ ಹೊರ್ಟನ್ಸ್‌ ಮತ್ತು ಪೊಪಿಯಿಸ್‌ ಎಂಬ ಅಂತಾರಾಷ್ಟ್ರೀಯ ರೆಸ್ಟೂರೆಂಟ್‌ ಬ್ರಾಂಡ್‌ನ ಸಿಇಒ ಆಗಿರುವ ಡೇನಿಯಲ್‌ ಸ್ಕಾವರ್ಟ್ಸ್.

2022 Career Resolutions: ಟ್ರೇನಿಂಗ್‌ ಅವಶ್ಯಕತೆ

ಯಶಸ್ಸು ಕೇವಲ ಕನಸು ಕಾಣುವುದಲ್ಲ, ಅದು ಕೆಲಸಕ್ಕೆ ಸಂಬಂಧಪಟ್ಟದ್ದಾಗಿದೆ ಎಂದು ಹೇಳುತ್ತಾರೆ  ಅಮೆರಿಕದ ಖ್ಯಾತ ಭಾಷಣಕಾರ, ಬರಹಗಾರ ಮತ್ತು ಉದ್ಯಮಿ ಟಿಮ್‌ ಫೆರಿಸ್‌.

‘ನಿಮ್ಮ ಹೃದಯ ಬಡಿತ ನಿಮಿಷಕ್ಕೆ 180 ಸಲ ಬಡಿಯಬೇಕೆಂದರೆ ನೀವು ಅದಕ್ಕೆ ತರಬೇತಿಯನ್ನು ನೀಡಬೇಕು. ಇದೇ ರೀತಿ ನೀವು ಅಸಾಧ್ಯವಾಗಿರುವುದನ್ನು ಸಾಧಿಸಲು ಮತ್ತು ಕರಿಯರ್‌ನಲ್ಲಿಯಶಸ್ಸು ಪಡೆಯಲು ಸದಾ ತರಬೇತಿ ಪಡೆಯುತ್ತ ಇರಬೇಕು. ನೀವು ಫುಟ್‌ಬಾಲ್‌ ಬಗ್ಗೆ ಪುಸ್ತಕ ಓದಿ ವಿಶ್ವಕಪ್‌ಗೆ ಹೋಗಲು ಸಾಧ್ಯವಿಲ್ಲ. ಆ ಆಟಕ್ಕೆ ಸಾಕಷ್ಟು ತರಬೇತಿ ಪಡೆದು ಮುಂದುವರೆಯಬೇಕು’ ಎನ್ನುತ್ತಾರೆ ಅವರು.

fit woman playing tennis on sports court
Photo by Anna Shvets on Pexels.com

2022 Career Resolutions: ರಿಸ್ಕ್‌ ತೆಗೆದುಕೊಳ್ಳುವುದು

ಷಾರ್ಕ್‌ ಟ್ಯಾಂಕ್‌ ನಟಿ ಬಾರ್ಬರಾ ಕೊರ್ಕೊರಸನ್‌ ಪ್ರಕಾರ ‘ನಾವು ಯಾವಾಗಲೂ ದೊಡ್ಡ ಸವಾಲುಗಳನ್ನು ಮೈಮೇಲೆ ಎಳೆದುಕೊಳ್ಳಬೇಕು’. ನೀವು ಯಾವ ವಿಷಯದ ಬಗ್ಗೆ ಬೇಕಾದರೂ ರಿಸ್ಕ್‌ ತೆಗೆದುಕೊಳ್ಳಬಹುದು. ನಿಮ್ಮ ಕರಿಯರ್‌ ಬಗ್ಗೆ ಅಥವಾ ನಿಮ್ಮ ಸ್ವಂತ ಬಿಸ್ನೆಸ್‌ ಸ್ಥಾಪಿಸುವ ಕುರಿತು ರಿಸ್ಕ್‌ ತೆಗೆದುಕೊಳ್ಳಬಹುದು.

2022 Career Resolutions: ವರ್ಕ್‌ ಲೈಫ್‌ ಸಮಲೋಲನ

ನಿಮ್ಮ ಕೆಲಸದ ಮತ್ತು ವೈಯಕ್ತಿಕ ಜೀವನದ ನಡುವೆ ಅತ್ಯುತ್ತಮ ಸಮತೋಲನ ಹೊಂದಿರಿ ಎಂದು ಗೂಗಲ್‌ನ ಎಸ್‌ವಿಪಿ ಪ್ಲಾಟ್‌ಫಾರ್ಮ್ಸ್‌ನ ಹಿರೊಷಿ ಲೊಕ್‌ಹೆಮಿಯರ್‌ ಅವರು ಹೇಳುತ್ತಾರೆ. ಅವರ ಪ್ರಕಾರ, ನಾವು ಕಾಳಜಿ ವಹಿಸುವ ಸಂಗತಿಗಳಿಗೂ ಸಮಯ ವಿನಿಯೋಗಿಸಬೇಕು. ಶಾಲೆಗೆ ಮಕ್ಕಳನ್ನು ಬಿಡುವುದು, ಕುಟುಂಬದ ಜೊತೆ ಯಾವುದಾದರೂ ಶೋಗಳನ್ನು ನೋಡುವುದು ಇತ್ಯಾದಿ ಮಾಡಬೇಕು. ಇದರ ಜೊತೆ ನಿಮ್ಮ ಕರಿಯರ್‌ ಪ್ರಗತಿಗೂ ಗಮನ ನೀಡಬೇಕು ಎಂದು ಅವರು ಹೇಳುತ್ತಾರೆ.

2022 Career Resolutions: ಕ್ರೆಡಿಟ್‌ ನೀಡಿ

ಯಶಸ್ಸು ಎನ್ನುವುದು ಎಲ್ಲಾಕ್ರೆಡಿಟ್‌ ತನ್ನದಾಗಿಸುವುದಲ್ಲ, ಅದು ಇತರರಿಗೂ ಕ್ರೆಡಿಟ್‌ ನೀಡುವುದಾಗಿದೆ ಎನ್ನುತ್ತಾರೆ ಪೇಪಾಲ್‌ನ ಸಿಇಒ ಡ್ಯಾನ್‌ ಸ್ಕಾಲ್‌ಮನ್‌. ನಿಮ್ಮ ತಂಡದಲ್ಲಿಕೆಲಸ ಮಾಡುವವರ ಸಾಧನೆಗೆ ಪ್ರತಿಫಲ ನೀಡಿ. ತಂಡದ ಸದಸ್ಯರು ಮಾಡಿದ ಕೆಲಸದ ಕ್ರೆಡಿಟ್‌ ಅವರಿಗೆ ನೀಡಿ ಮತ್ತು ಅದರ ಲಾಭವನ್ನು ನೀವು ಪಡೆಯಬೇಡಿ ಎಂದು ಅವರು ಸಲಹೆ ನೀಡುತ್ತಾರೆ.

Leave a Reply

Your email address will not be published. Required fields are marked *