Tag Archives: lockdown

ಶಿಕ್ಷಕರ ಭೌತಿಕ ಹಾಜರಿಗೆ ಸೂಚನೆ : ಎಸ್. ಸುರೇಶ್ ಕುಮಾರ್

By | 14/06/2021

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಶಾಲಾರಂಭದ ಕುರಿತು ಈಗಾಗಲೇ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆಯಾದರೂ, ಶಿಕ್ಷಕರ ಚಲನವಲನಕ್ಕೆ ತೊಂದರೆ ಆಗಿರುವುದರಿಂದ, ಲಾಕ್ಡೌನ್ ತೆರವಾದ ಕೂಡಲೇ ಶಿಕ್ಷಕರು ಭೌತಿಕವಾಗಿ ಶಾಲೆಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಹಲವು ಉಪನ್ಯಾಸಕ ಸಂಘಟನೆಗಳ ಕೋರಿಕೆಯ ಮೇರೆಗೆ ಮೊದಲ ಪಿಯುಸಿ ಮೌಲ್ಯಾಂಕನ ಪ್ರಕ್ರಿಯೆಯನ್ನು ಎಲ್ಲ ಜಿಲ್ಲೆಗಳ ಲಾಕ್ ಡೌನ್ ಅವಧಿ ಪೂರ್ಣಗೊಳ್ಳುವವರೆಗೆ ಸಮಯ ವಿಸ್ತರಿಸಿ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಸಹ ಸಚಿವರು ಹೇಳಿದ್ದಾರೆ. ಎಸ್… Read More »

ಕಿರು ಚಿತ್ರ; ‘ಪ್ರಕೃತಿ ಮತ್ತು ಮನುಷ್ಯ’

ಎಲ್ಲವನ್ನು ಪ್ರಕೃತಿಯಿಂದ ಪಡೆದುಕೊಂಡ ಮನುಷ್ಯ ಕೊನೆಗೆ ಅದೇ ಪ್ರಕೃತಿಯನ್ನು ನಾಶದ ಅಂಚಿಗೆ ಕೊಂಡೊಯ್ಯುತ್ತಾನೆ. ತಾನು ಮಾಡುತ್ತಿರುವ ಕೃತ್ಯದ ಬಗ್ಗೆ ಅರಿತುಕೊಂಡರೆ ಮುಂದಿನ ಜನಾಂಗಕ್ಕೂ ನಾವು ಮಾದರಿಯಾಗುತ್ತೇವೆ. ಲಾಕ್ ಡಾನ್ ಸಮಯದಲ್ಲಿ ಸುಮ್ಮನೇ ವನವಿಹಾರಕ್ಕೆಂದು ತೆರಳಿದ ಸ್ನೇಹಿತರ ಬಳಗವೊಂದು ಅಲ್ಲಿದ್ದ  ಕಸ ನೋಡಿ ‘ಪ್ರಕೃತಿ ಮತ್ತು ಮನುಷ್ಯ’ ಎಂಬ ಒಂದೊಳ್ಳೆಯ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರಕೃತಿಯ ಜತೆಗೆ ಮನುಷ್ಯ ಹೇಗೆ ಇದ್ದಾನೆ ಅವನು ಹೇಗೆ ಇರಬೇಕಿತ್ತು ಎಂದು ತೋರಿಸುವ ಒಂದು ಸಣ್ಣ ಪ್ರಯತ್ನ ಈ ಕಿರುಚಿತ್ರದಲ್ಲಿದೆ. ಸೋನು ಪ್ರಕಾಶ್ ಹೆಬ್ರಿ ಇದರ ನಿರ್ದೇಶನ ಮಾಡಿದ್ದಾರೆ.… Read More »