Tag Archives: neet result

NEET (UG)-2021 ರ ಪ್ರವೇಶಾತಿಗಾಗಿ ಆನ್ಲೈನ್ ಅರ್ಜಿ ಆಹ್ವಾನ : ಹೆಚ್ಚಿನ ವಿವರ ಇಲ್ಲಿದೆ

By | 15/07/2021

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಅಂಡರ್ ಗ್ರಾಜ್ಯುಯೇಟ್ ವೈದ್ಯಕೀಯ ಶಿಕ್ಷಣದ ಎಲ್ಲಾ ಸೀಟುಗಳಿಗೆ ನೀಟ್ (ಯುಜಿ)- 2021 ರ ಪ್ರವೇಶಾತಿಗಾಗಿ ಆನ್ಲೈನ್ ಅರ್ಜಿಗಳನ್ನು ಕರೆಯಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ , 2019 ರ ಸೆಕ್ಷನ್ 14 ರ ಅನ್ವಯ ಜಾರಿಯಲ್ಲಿರುವ ಯಾವುದೇ ಕಾನೂನಡಿಯಲ್ಲಿ ಆಡಳಿತ ನಡೆಸುವವರು ಸೇರಿದಂತೆ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಅಂಡರ್ ಗ್ರಾಜ್ಯುಯೇಟ್ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು, ನೀಟ್ (ಯುಜಿ) ಅನ್ನು ಸಾಮಾನ್ಯ ಮತ್ತು ಏಕರೂಪದ ರಾಷ್ಟ್ರೀಯ ಅರ್ಹತೆ – ಕಮ್ – ಪ್ರವೇಶ… Read More »

NEET PG ಪರೀಕ್ಷೆ ಮುಂದೂಡಿಕೆ

By | 16/04/2021

ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್‌ ಫಾರ್‌ ಫೋಸ್ಟ್‌ ಗ್ರಾಜ್ಯುಯೆಟ್, ನೀಟ್ ಪಿಜಿ 2021 ಪರೀಕ್ಷೆಯನ್ನು ಕೇಂದ್ರ ಸರಕಾರವು ಮುಂದೂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ನೀಟ್ ಪಿಜಿ ಪರೀಕ್ಷೆಯನ್ನು ಎಪ್ರಿಲ್ 18, 2021 ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಈ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ. ನೀಟ್ ಪಿಜಿ 2021 ಪರೀಕ್ಷೆ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ನ್ಯಾಷಲನ್ ಬೋರ್ಡ್‌ ಆಫ್ ಎಕ್ಸಾಮಿನೇಷನ್‌ನ ಅಫೀಶಿಯಲ್ ವೆಬ್‌ಸೈಟ್‌ ಅಥವಾ ಅಫೀಶಿಯಲ್ ಟ್ವಿಟ್ಟರ್ ಹ್ಯಾಂಡಲ್ ಫಾಲೋ ಮಾಡಬಹುದಾಗಿದೆ.

ನೀಟ್ ವೇಳಾಪಟ್ಟಿ ಬಿಡುಗಡೆ

By | 13/03/2021

ರಾಷ್ಟ್ರೀಯ ಪರೀಕ್ಷೆ ಏಜೆನ್ಸಿಯು ( ಎನ್‌ಟಿಎ) ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ ( ನೀಟ್) 2021 ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ನೀಟ್ 2021(ಯುಜಿ) ಪರೀಕ್ಷೆಗೆ ಆನ್‌ಲೈನ್ ಮೂಲಕ ರಿಜಿಸ್ಟ್ರೇಶನ್ ಪಡೆಯಬಹುದಾಗಿದೆ. ನೀಟ್ ಯುಜಿ ಪರೀಕ್ಷೆ ವೇಳಾಪಟ್ಟಿತಯ ಆಗಸ್ಟ್ 01, 2021 ರಂದು 11 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ ನೀಟ್ 2021 ಪರೀಕ್ಷೆಯು ಒಂದೇ ಬಾರಿ ನಡೆಸಲಿದೆ. ಈ ಬಗ್ಗೆ ಎನ್‌ಟಿಎ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಇದಕ್ಕೂ ಮೊದಲು ನೀಟ್ ಪರೀಕ್ಷೆ ಎರಡು ಬಾರಿ ನಡೆಸಲಾಗುತ್ತದೆ ಎಂದು… Read More »