UPSC ಸಿಡಿಎಸ್ ನೇಮಕಾತಿ : 341 ಹುದ್ದೆಗಳಿಗೆ ಅರ್ಜಿ ಆಹ್ವಾನ – ಸುದ್ದಿಜಾಲ ನ್ಯೂಸ್

By | 23/12/2021

ಕೇಂದ್ರ ಲೋಕಸೇವಾ ಆಯೋಗ ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ( I) ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟ ಮಾಡಿದೆ. ಆಯೋಗವು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ ಹೆಸರು : ಕಂಬೈನ್ಡ್ ಡಿಫೆನ್ಸ್‌ ಸರ್ವಿಸ್ ಹುದ್ದೆಗಳು

ಹುದ್ದೆ ಸಂಖ್ಯೆ : 341

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಡಿಸೆಂಬರ್ 22, 2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 11, 2022 ಸಂಜೆ 6 ಗಂಟೆ

ಆನ್ಲೈನ್ ಅರ್ಜಿ ವಿತ್ ಡ್ರಾ ಮಾಡಲು ದಿನಾಂಕ : ಜನವರಿ 18, 2022 ರಿಂದ ಜನವರಿ 24, 2022 ಸಂಜೆ 6 ಗಂಟೆ

ಅರ್ಜಿ ಶುಲ್ಕ : ಅರ್ಜಿದಾರರು ಅರ್ಜಿ ಶುಲ್ಕ ಪಾವತಿಸಬೇಕಿದ್ದು, 200/- ರೂ ಅರ್ಜಿ ಶುಲ್ಕವನ್ನು ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಪಾವತಿಸಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ. ಅರ್ಜಿ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲು ಜನವರಿ 10, 2022 ಕೊನೆಯ ದಿನವಾಗಿರುತ್ತದೆ. ಆನ್ಲೈನ್ ಮೂಲಕ ಪಾವತಿಸಲು ಜನವರಿ 11, 2022 ರ ಸಂಜೆ 6ಗಂಟೆ ಕೊನೆಯ ದಿನವಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ : ಕೇಂದ್ರ ಲೋಕಸೇವಾ ಆಯೋಗ ನೇಮಕಾತಿಯ ಕಂಬೈನ್ಡ್ ಡಿಫೆನ್ಸ್‌ ಸರ್ವೀಸ್ ( 1) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವಯೋಮಿತಿ : ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು 20-24 ವರ್ಷದೊಳಗಿರಬೇಕು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದೆ.

ವಿದ್ಯಾರ್ಹತೆ : ಯುಪಿಎಸ್ಸಿ ನೇಮಕಾತಿಯ ಕಂಬೈನ್ಡ್ ಡಿಫೆನ್ಸ್‌ ಸರ್ವೀಸ್ ( 1) ಹುದ್ದೆಗಳಿಗೆ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

IMA, ಆಫೀಸರ್ ಟ್ರೈನಿಂಗ್ ಅಕಾಡೆಮಿ : ಅಂಗೀಕೃತ ವಿವಿಗಳಿಂದ ಪದವಿ ಪಡೆದಿರಬೇಕು.

ಇಂಡಿಯನ್ ನೇವಿ ಅಕಾಡೆಮಿ : ಬಿಇ ಪದವಿ ಪಡೆದಿರಬೇಕು.
ಏರ್ ಫೋರ್ಸ್ ಅಕಾಡೆಮಿ : ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಅಥವಾ ಸ್ನಾತಕ ಪದವಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ಓದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *