ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ : ವಿವಿಧ ಹುದ್ದೆಗಳಿಗವಕಾಶ- ಸುದ್ದಿಜಾಲ ನ್ಯೂಸ್

By | 19/12/2021

ಹಾವೇರಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಎನ್ ಪಿ ಸಿ ಡಿ ಸಿ ಎಸ್ ಕಾರ್ಯಕ್ರಮದಡಿಯಲ್ಲಿ ಎನ್ ಸಿಡಿ ( ಅಸಾಂಕ್ರಾಮಿಕ ರೋಗಗಳ ಚಿಕಿತ್ಸೆ) ಕ್ಲಿನಿಕ್ ಗಳನ್ನು ನಿರ್ವಹಿಸಲು ಈ ಕೆಳಗಿನಂತೆ ಗುತ್ತಿಗೆ ಆಧಾರದ ಮೇಲೆ 09 ಎಂಬಿಬಿಎಸ್ ವೈದ್ಯರು, 01 ಫಿಸಿಯೋಥೆರಪಿಸ್ಟ್, 03 ಶ್ರುಶೂಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಿಯಮಾವಳಿಗಳ ಪ್ರಕಾರ ನೇರ ಸಂದರ್ಶನವನ್ನು ದಿ.28-12-2021 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಜಿಲ್ಲಾ ಸರ್ವೇಕ್ಷಣ ಘಟಕ, ಜಿಲ್ಲಾ ಆಸ್ಪತ್ರೆ ಹಾವೇರಿ ಆವರಣ ಹಾವೇರಿ ಇಲ್ಲಿ ಅರ್ಜಿ ವಿತರಿಸಲಾಗುವುದು. ಹಾಗೂ ಅದೇ ದಿನ ಸದರಿ ಅರ್ಜಿಗಳನ್ನು ಭರ್ತಿ ಮಾಡಿ ಪಡೆದುಕೊಳ್ಳಲಾಗುವುದು. ಈ ಸ್ಥಳದಲ್ಲಿ ಸ್ವತಃ ಅಭ್ಯರ್ಥಿಗಳು ಹಾಜರಿದ್ದು, ಅರ್ಜಿಯನ್ನು ಪಡೆದು ಅರ್ಜಿಯೊಂದಿಗೆ ಮೂಲ ದಾಖಲಾತಿಗಳ ದೃಢೀಕರಿಸಿದ ಝರಾಕ್ಸ್ ಪ್ರತಿ ಹಾಗೂ ತಮ್ಮ ಇತ್ತೀಚಿನ ಭಾವಚಿತ್ರದ ಎರಡು ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಲು ಸೂಚಿಸಲಾಗಿದೆ.

ಹುದ್ದೆಗಳ ವಿವರ ಈ ಕೆಳಗಿನಂತಿವೆ :

ಪಿಜಿಷಿಯನ್ – 01
ಎಂಬಿಬಿಎಸ್ ವೈದ್ಯರು – 09
ಫಿಸಿಯೋ ಥೆರಪಿಸ್ಟ್ – 01
ಶುಶ್ರೂಷಕರು – 03

ಸದರಿ ಮೇಲ್ಕಾಣಿಸಿದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪೂರ್ಣ ಪ್ರಮಾಣದ ಹಕ್ಕನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ಕಾಯ್ದಿರಿಸಿಕೊಂಡಿರುತ್ತದೆ. ಹಾಗೂ ವಯೋಮಿತಿಯನ್ನು ರಾಜ್ಯಮಟ್ಟದ ಮಾರ್ಗಸೂಚಿ ಪ್ರಕಾರ ನೇಮಕಾತಿ ಮಾಡಲಾಗುವುದು.

ಸದರಿ ನೇಮಕಾತಿ ಕುರಿತು ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಆಸ್ಪತ್ರೆ ಆವರಣ ( ಆರೋಗ್ಯ ಇಲಾಖೆ ) ಹಾವೇರಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಕಚೇರಿ ಅವಧಿಯಲ್ಲಿ ಪಡೆಯಬಹುದು. ದೂರವಾಣಿ ಸಂಖ್ಯೆ : 08375-297218 ಹಾಗೂ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

Leave a Reply

Your email address will not be published. Required fields are marked *