Tag Archives: breakfast recipe

ಬೆಳಗ್ಗೆ ಟಿಪನ್ ಗೆ ಮಾಡಿ ಬಿಸಿಬಿಸಿ ಮೊಟ್ಟೆ ಶಾವಿಗೆ ಬಾತ್

By | 08/10/2018

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯಿಂದ ಹಲವು ಬಗೆಯ ಅಡುಗೆಗಳನ್ನು, ತಿಂಡಿಗಳನ್ನು ಮಾಡಬಹುದು. ಮೊಟ್ಟೆ ಹಾಕಿ ಮಾಡಿದ ಎಲ್ಲಾ ಅಡುಗೆಗಳು ರುಚಿಕರವಾಗಿಯೇ ಇರುತ್ತದೆ. ಅದರಲ್ಲಿ ಮೊಟ್ಟೆ ಶಾವಿಗೆ ಬಾತ್ ಕೂಡ ಒಂದು. ಕೆಲವು ಮಕ್ಕಳು ಮೊಟ್ಟೆ ತಿನ್ನಲು ಇಷ್ಟಪಡುವುದಿಲ್ಲ. ಅಂತಹ ಮಕ್ಕಳಿಗೆ ಈ ಮೊಟ್ಟೆ ಶಾಮಿಗೆ ಬಾತ್ ಮಾಡಿಕೊಡಿ. ಇದು ಬಹು ಬೇಗನೆ, ತುಂಬಾ ಸುಲಭವಾಗಿ ಮಾಡಬಹುದಾದಂತಹ ಒಂದು ತಿಂಡಿ. ಇದಕ್ಕೆ ಯಾವ ಯಾವ ಸಾಮಾಗ್ರಿಗಳು ಬೇಕಾಗುತ್ತದೆ ಎಂಬುದನ್ನು ನೋಡೋಣ : ಮೊಟ್ಟೆ 2 (ಅದರಲ್ಲಿ ಹಳದಿ ಭಾಗವನ್ನು ಮಾತ್ರ ತೆಗೆದುಕೊಳ್ಳಿ),… Read More »

ಬ್ರೇಕ್ ಫಾಸ್ಟ್ ರೆಸಿಪಿ: ಬಿಸಿಬಿಸಿಯಾದ ಬಿಸಿಬೇಳೆ ಬಾತ್

By | 24/09/2018

ಬಿಸಿಬೇಳೆ ಬಾತ್ ಬೆಳಿಗ್ಗಿನ ತಿಂಡಿಗೆ ಅಥವಾ ಮಧ್ಯಾಹ್ನದ ಊಟಕ್ಕೂ ಹೇಳಿಮಾಡಿಸಿದ್ದು. ತರಕಾರಿಗಳೆನ್ನೆಲ್ಲಾ ಒಟ್ಟಿಗೆ ಸೇರಿಸಿ ಬೇಯಿಸುವುದರಿಂದ ಸಾಂಬಾರು ಮಾಡುವ ಅಗತ್ಯವಿಲ್ಲ. ಬಿಸಿ ಬಿಸಿಯಿರುವಾಗಲೇ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಬಿಸಿಬೇಳೆ ಬಾತ್ ಪೌಡರ್ ಗೆ ಬೇಕಾಗುವ ಸಾಮಾಗ್ರಿ ಒಣಮೆಣಸಿನಕಾಯಿ ಎಂಟರಿಂದ ಹತ್ತ ತೆಗೆದುಕೊಳ್ಳಿ, ಕಡಲೆಬೇಳೆ ಒಂದು ಹಿಡಿ, ಉದ್ದಿನಬೇಳೆ ಒಂದು ಹಿಡಿ, ಅರ್ಧ ತುಂಡು ಚಕ್ಕೆ, ಕೊತ್ತಂಬರಿಕಾಳು-3 ಚಮಚ, ಜೀರಿಗೆ ಕಾಳು ಚಮಚದಷ್ಟು, ಮೆಂತೆಕಾಳು-10ಕಾಳು ಸಾಕು, ಚಕ್ರಮೊಗ್ಗು-1, ಹಾಗೇ ಕಾಳುಮೆಣಸು ಕಾಲು ಚಮಚ, ಕರಿಬೇವಿನ ಸೊಪ್ಪು 1 ದಂಟು. ಮೊದಲಿಗೆ ಒಂದು… Read More »

ಚಪಾತಿ ಮಿಕ್ಕಿದೆ ಎಂದು ಚಿಂತಿಸಬೇಡಿ, ರುಚಿಕರವಾದ ಚಪಾತಿ ನೂಡಲ್ಸ್ ತಯಾರಿಸಿ

By | 16/09/2018

ಚಪಾತಿ ಆರೋಗ್ಯಕ್ಕೆ ತುಂಬಾ ಉತ್ತಮವಾದುದು. ಚಪಾತಿಯನ್ನು ಗೋಧಿಯಿಂದ ತಯಾರಿಸುವುದರಿಂದ ಇದರಲ್ಲಿ ಕೊಬ್ಬನಾಂಶ ಕಡಿಮೆ ಇರುತ್ತೆ ಹಾಗೂ ಹಲವು ಖನಿಜಾಂಶಗಳನ್ನು ಒಳಗೊಂಡಿರುವ ಕಾರಣ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಈ ಚಪಾತಿಯಿಂದ ಸಿಗುತ್ತದೆ. ಇದು ದೇಹದ ತೂಕ ಇಳಿಸಿಕೊಳ್ಳಲು ಕೂಡ ತುಂಬಾ ಸಹಕಾರಿಯಾಗಿದೆ. ಚಪಾತಿಯನ್ನು ಹೆಚ್ಚಾಗಿ ರಾತ್ರಿ ಸಮಯದಲ್ಲಿ ತಿನ್ನುತ್ತಾರೆ. ಅದರಲ್ಲೂ ತುಂಬಾ ದಪ್ಪ ಇರುವವರು ದೇಹದ ತೂಕ ಇಳಿಸಲು ಹಾಗೂ ರಾತ್ರಿ ಅನ್ನ ತಿಂದರೆ ಸರಿಯಾಗಿ ಜೀರ್ಣ ಆಗದೆ ಇರುವವರು ರಾತ್ರಿ ಚಪಾತಿಯನ್ನು ತಿನ್ನುತ್ತಾರೆ. ಆದರೆ ಎಲ್ಲಾ ತಿಂದು ಮುಗಿದ ಮೇಲೆ ಮಾಡಿದ… Read More »

ರುಚಿಯಾದ ತೊಡೆದೇವು ಸವಿದಿದ್ದೀರಾ…?

By | 06/09/2018

ತೊಡೆದೇವು ಇದೊಂದು ಮಲೆನಾಡಿನ ವಿಶಿಷ್ಟ ಸಿಹಿತಿಂಡಿ. ಮಲೆನಾಡಿಗರ ಮನೆಮನೆಗಳಲ್ಲಿ ಈ ಸಾಂಪ್ರದಾಯಿಕ ತಿಂಡಿಗೆ ಪ್ರಮುಖ ಸ್ಥಾನವಿದೆ.  ತುಂಬ ಕಡಿಮೆ ವಸ್ತುಗಳನ್ನು ಬಳಸಿ ತಾಳ್ಮೆ ಹಾಗು ಜಾಣ್ಮೆಯಿಂದ ಮಾಡಬೇಕಾದ ತಿಂಡಿಯಿದು. ತೊಡೆದೇವು ತುಂಬ ಆರೋಗ್ಯಕರವಾದ ಸಿಹಿತಿಂಡಿ. ಕೇವಲ ಅಕ್ಕಿ ಮತ್ತು ಬೆಲ್ಲದಿಂದ ಮಾಡುವಂತಹ ಈ ಸಿಹಿತಿಂಡಿಯು ಪುಟ್ಟ ಮಕ್ಕಳು ಮತ್ತು ವಯೋವೃದ್ಧರಿಗೂ ಸುಲಭವಾಗಿ ಜೀರ್ಣವಾಗುತ್ತದೆ. ಗಾಳಿಯಾಡಂತೆ ಇಟ್ಟರೆ ತಿಂಗಳವರೆಗೂ ತಾಜಾತನ ಉಳಿಸಿಕೊಳ್ಳುತ್ತದೆ . ತೊಡೆದೇವುವಿಗೆ ತುಂಬ ಬೇಡಿಕೆಯಿದೆ . ಆದರೆ ಇದನ್ನು ಹದವಾಗಿ ತಯಾರಿಸಲು ಸ್ವಲ್ಪ ನೈಪುಣ್ಯತೆ ಬೇಕಾಗುವುದರಿಂದ ಎಲ್ಲರಿಗೂ ಮಾಡಲು ಕಷ್ಟ… Read More »

ಆರೋಗ್ಯಕ್ಕೆ ಉತ್ತಮವಾದ ಮೆಂತ್ಯಸೊಪ್ಪಿನ ಕಡುಬು

By | 06/09/2018

ಮೆಂತ್ಯಸೊಪ್ಪು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಮೆಂತ್ಯಸೊಪ್ಪಿನಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ಪೊಟ್ಯಾಶಿಯಂಗಳಿವೆ. ಇದು ಚರ್ಮ, ಕೂದಲು ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಷ್ಟೊಂದು ಉಪಯೋಗಕಾರಿಯಾದ ಮೆಂತ್ಯ ಸೊಪ್ಪು ಕಹಿ ಎಂದು ಅದನ್ನು ತಿನ್ನಲು ಕೆಲವರು ಇಷ್ಟಪಡುವುದಿಲ್ಲ. ಆದಕಾರಣ ಮೆಂತ್ಯ ಸೊಪ್ಪು ಎಂದಾಕ್ಷಣ ದೂರ ಓಡಿ ಹೋಗುವವರಿಗೆ ಅದರಿಂದ ರುಚಿ ರುಚಿಯಾದ ಕಡುಬು ಮಾಡಿಕೊಡಿ. ಒಂದು ಸಾರಿ ತಿಂದರೆ ಮತ್ತೆ ಬಿಡೋದೆ ಇಲ್ಲ. ಮೆಂತ್ಯಸೊಪ್ಪಿನ ಕಡುಬು ಮಾಡಲು ಬೇಕಾಗುವ ಸಾಮಾಗ್ರಿಗಳು  ಮೊದಲಿಗೆ 2 ದೊಡ್ಡ ಕಪ್ ಜೋಳದ… Read More »

ಪುಟಾಣಿಗಳಿಗೆ ಇಷ್ಟವಾಗುವ ಬಟಾಣಿ ಪಲಾವ್ ರೆಸಿಪಿ

By | 01/09/2018

ಬೆಳಗ್ಗೆ ತಿಂಡಿ ಏನು ಮಾಡುವುದು ಎಂದು ಯೋಚನೆ ಮಾಡುತ್ತಿದ್ದೀರಾ…? ಸುಲಭದ ಅಡುಗೆಯೆಂದರೆ ಬಟಾಣಿ ಬಲಾವ್.  ಅರೆ ಪಲಾವ್ ಮಾಡುವುದಕ್ಕೆ ಬೇಕಾದ ತರಕಾರಿ ಇಲ್ಲ ಎಂದು ಕೊಳ್ಳುತ್ತೀರಾ. ಆದರೆ ಈ ಬಟಾಣಿ ಪಲಾವ್ ಗೆ ತರಕಾರಿನೂ ಬೇಕಾಗಿಲ್ಲ. ಬಟಾಣಿ ಇದ್ದರೆ ಆಯ್ತು. ಹಸಿ ಬಟಾಣಿ ಇದ್ದರೂ ಆಯ್ತು. ಇಲ್ಲದಿದ್ದರೆ ನೆನಸಿಟ್ಟ ಬಟಾಣಿಯಾದರೂ ಆಯ್ತು. ಇವಿಷ್ಟಿದ್ದರೆ ರುಚಿ ರುಚಿಯಾದ ಪಲಾವ್ ಅನ್ನು ಸವಿಯಬಹುದು. ಬಟಾಣಿ ಪಲಾವ್ ಮಾಡಲು ಬೇಕಾಗುವ ಸಾಮಾಗ್ರಿಗಳು 1ಕಪ್ ಬಾಸುಮತಿ ಅಕ್ಕಿ ತೆಗೆದುಕೊಳ್ಳಿ. ಅರ್ಧ ಕಪ್ ನೆನಸಿಟ್ಟುಕೊಂಡ ಬಟಾಣಿಯಾದರೂ ಪರ್ವಾಗಿಲ್ಲ. ಹಸಿ… Read More »