Tag Archives: karnataka recipe

ಬ್ರೇಕ್ ಫಾಸ್ಟ್ ರೆಸಿಪಿ: ಬಿಸಿಬಿಸಿಯಾದ ಬಿಸಿಬೇಳೆ ಬಾತ್

By | 24/09/2018

ಬಿಸಿಬೇಳೆ ಬಾತ್ ಬೆಳಿಗ್ಗಿನ ತಿಂಡಿಗೆ ಅಥವಾ ಮಧ್ಯಾಹ್ನದ ಊಟಕ್ಕೂ ಹೇಳಿಮಾಡಿಸಿದ್ದು. ತರಕಾರಿಗಳೆನ್ನೆಲ್ಲಾ ಒಟ್ಟಿಗೆ ಸೇರಿಸಿ ಬೇಯಿಸುವುದರಿಂದ ಸಾಂಬಾರು ಮಾಡುವ ಅಗತ್ಯವಿಲ್ಲ. ಬಿಸಿ ಬಿಸಿಯಿರುವಾಗಲೇ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಬಿಸಿಬೇಳೆ ಬಾತ್ ಪೌಡರ್ ಗೆ ಬೇಕಾಗುವ ಸಾಮಾಗ್ರಿ ಒಣಮೆಣಸಿನಕಾಯಿ ಎಂಟರಿಂದ ಹತ್ತ ತೆಗೆದುಕೊಳ್ಳಿ, ಕಡಲೆಬೇಳೆ ಒಂದು ಹಿಡಿ, ಉದ್ದಿನಬೇಳೆ ಒಂದು ಹಿಡಿ, ಅರ್ಧ ತುಂಡು ಚಕ್ಕೆ, ಕೊತ್ತಂಬರಿಕಾಳು-3 ಚಮಚ, ಜೀರಿಗೆ ಕಾಳು ಚಮಚದಷ್ಟು, ಮೆಂತೆಕಾಳು-10ಕಾಳು ಸಾಕು, ಚಕ್ರಮೊಗ್ಗು-1, ಹಾಗೇ ಕಾಳುಮೆಣಸು ಕಾಲು ಚಮಚ, ಕರಿಬೇವಿನ ಸೊಪ್ಪು 1 ದಂಟು. ಮೊದಲಿಗೆ ಒಂದು… Read More »

ರುಚಿಯಾದ ತೊಡೆದೇವು ಸವಿದಿದ್ದೀರಾ…?

By | 06/09/2018

ತೊಡೆದೇವು ಇದೊಂದು ಮಲೆನಾಡಿನ ವಿಶಿಷ್ಟ ಸಿಹಿತಿಂಡಿ. ಮಲೆನಾಡಿಗರ ಮನೆಮನೆಗಳಲ್ಲಿ ಈ ಸಾಂಪ್ರದಾಯಿಕ ತಿಂಡಿಗೆ ಪ್ರಮುಖ ಸ್ಥಾನವಿದೆ.  ತುಂಬ ಕಡಿಮೆ ವಸ್ತುಗಳನ್ನು ಬಳಸಿ ತಾಳ್ಮೆ ಹಾಗು ಜಾಣ್ಮೆಯಿಂದ ಮಾಡಬೇಕಾದ ತಿಂಡಿಯಿದು. ತೊಡೆದೇವು ತುಂಬ ಆರೋಗ್ಯಕರವಾದ ಸಿಹಿತಿಂಡಿ. ಕೇವಲ ಅಕ್ಕಿ ಮತ್ತು ಬೆಲ್ಲದಿಂದ ಮಾಡುವಂತಹ ಈ ಸಿಹಿತಿಂಡಿಯು ಪುಟ್ಟ ಮಕ್ಕಳು ಮತ್ತು ವಯೋವೃದ್ಧರಿಗೂ ಸುಲಭವಾಗಿ ಜೀರ್ಣವಾಗುತ್ತದೆ. ಗಾಳಿಯಾಡಂತೆ ಇಟ್ಟರೆ ತಿಂಗಳವರೆಗೂ ತಾಜಾತನ ಉಳಿಸಿಕೊಳ್ಳುತ್ತದೆ . ತೊಡೆದೇವುವಿಗೆ ತುಂಬ ಬೇಡಿಕೆಯಿದೆ . ಆದರೆ ಇದನ್ನು ಹದವಾಗಿ ತಯಾರಿಸಲು ಸ್ವಲ್ಪ ನೈಪುಣ್ಯತೆ ಬೇಕಾಗುವುದರಿಂದ ಎಲ್ಲರಿಗೂ ಮಾಡಲು ಕಷ್ಟ… Read More »

ರುಚಿಕರವಾದ ಮಾವಿನಹಣ್ಣಿನ ಲಾಡು ಮಾಡುವ ಸರಳ ವಿಧಾನ

By | 23/08/2018

ಮಾವಿನಹಣ್ಣು  ಎಂದಾಕ್ಷಣ ಕಣ್ಣುಗಳು ಅರಳುತ್ತದೆ. ಎಷ್ಟು ತಿಂದರೂ ಮತ್ತೂ ಬೇಕು ಅನಿಸುವ ಈ ಹಣ್ಣಿನ ಸ್ವಾದವೇ ಅಂತದ್ದು. ಮಕ್ಕಳಿಗಂತೂ ಮಾವಿನ ಹಣ್ಣುಗಳೆಂದರೆ ಪಂಚಪ್ರಾಣ. ಮಾವಿನ ಹಣ್ಣಿನಲ್ಲಿ ಸೀಕರಣೆ, ಜ್ಯೂಸ್, ಐಸ್ ಕ್ರೀಮ್ ಮಾಡುತ್ತಾರೆ. ಹಾಗೇ ಇನ್ನು ಕೆಲವರು ಇದರಲ್ಲಿ ಬರ್ಪಿ ಮಾಡುತ್ತಾರೆ. ನಾನಿಲ್ಲಿ ಮಾವಿನ ಹಣ್ಣಿನ ಲಾಡು ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇನೆ ನೋಡಿ. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ ಲಾಡು ಇಷ್ಟವಾಗಬಹುದು. ಮಾವಿನಹಣ್ಣಿನ ಲಾಡು  ಮಾಡುವುದಕ್ಕೆ ಅಗತ್ಯವಾಗಿರುವ ಸಾಮಾಗ್ರಿಗಳು  ಮಾವಿನ ಹಣ್ಣಿನ ತಿರುಳು- 1 ಕಪ್ ತಗೊಳ್ಳಿ, ಆರಿದ ಗಟ್ಟಿಯಾದ ಹಾಲು… Read More »

ರೆಸಿಪಿ: ಮಂಗಳೂರು ಬನ್ಸ್ ತಯಾರಿಸುವುದು ಹೇಗೆ?

By | 25/05/2018

ರಶ್ಮಿ ಪ್ರವೀಣ್ ಕರಾವಳಿಗರಿಗೆ ಬನ್ಸ್ ಅಂದ್ರೆ ಇಷ್ಟ. ಕರಾವಳಿ ಬಿಟ್ಟು ಪರ ಊರಿಗೆ ಹೋದವರಿಗೆ ಬೆಂಗಳೂರಿನಂತಹ ನಗರಗಳಲ್ಲಿ ಬನ್ಸ್ ಕಂಡರಂತೂ ಬಾಯಲ್ಲಿ ನೀರೂರುವುದು ಸಹಜ. ಆದರೆ, ಬೆಂಗಳೂರಿನಂತಹ ನಗರಗಳಲ್ಲಿ ಮಾಡುವ ಬನ್ಸ್ ಗೂ ಮಂಗಳೂರಿನಲ್ಲಿ ಮಾಡುವ ಬನ್ಸ್ ಗೂ ರುಚಿಯಲ್ಲಿ ಅಜಗಜಾಂತರ ವ್ಯತ್ಯಾಸ ಇರುತ್ತದೆ.  ಮಂಗಳೂರು ಬನ್ಸ್ ಮಾಡುವುದು ಬಲು ಸುಲಭ. ನೀವೂ ಟ್ರೈ ಮಾಡಬಹುದು. ಬನ್ಸ್ ಮಾಡುವ ವಿಧಾನಬೇಕಾಗುವ ಸಾಮಾಗ್ರಿಗಳುಮೈದಾ ಹಿಟ್ಟು 4 ಕಪ್  ಬಾಳೆಹಣ್ಣು 2 ಅಥವಾ 3 (ಚೆನ್ನಾಗಿ ಹಣ್ಣಾಗಿರಲಿ)  ಸಕ್ಕರೆ ಅರ್ಧ ಕಪ್ (ಸಿಹಿ ಹೆಚ್ಚು ಬೇಕಿದ್ದರೆ… Read More »