ಬಬಲ್ ಒಡೆಯುವ ಅಭ್ಯಾಸ ನಿಮಗೆ ಇದೆಯಾ ? ಇದರ ಬಗ್ಗೆ ಇದೆ ಒಂದು ಅಚ್ಚರಿಯ ಮಾಹಿತಿ

By | 10/10/2021

ಒಮ್ಮೆ ಬಬಲ್ ಒಡೆಯಲು ಪ್ರಾರಂಭಿಸಿದರೆ ಅದನ್ನು ಸಂಪೂರ್ಣವಾಗಿ ಹಾಗೂ ನಿರಂತರವಾಗಿ ಮಾಡಲು ಬಯಸುವುದರಿಂದ ಒತ್ತಡ ದೂರವಾಗುವ ಜೊತೆಗೆ ಒಬ್ಬರು ಒಂದೇ ಸ್ಥಳದಲ್ಲಿ ಗಮನ ಹರಿಸಬಹುದು. ಹೆಬ್ಬೆರಳು ಮತ್ತು ‌ಮೊದಲ ಬೆರಳನ್ನು ಒಟ್ಟಿಗೆ ಸೇರಿಸಿದಾಗ ಮತ್ತು ಗುಳ್ಳೆಗಳು ಒಂದರ ನಂತರ ಒಂದರಂತೆ ಒಡೆಯಲು ಪ್ರಯತ್ನಿಸಿದಾಗ ಗಮನ ಒಂದೇ ಕಡೆ ಇರುತ್ತದೆ. ಬೆರಳುಗಳಿಗೆ ವ್ಯಾಯಾಮವಾಗುತ್ತದೆ.

ಬಬಲ್ ತುಂಬಾ ಆಕರ್ಷಕವಾಗಿರುತ್ತದೆ. ಸೀಲ್ಡ್ ಏರ್ ಕಾರ್ಪೋರೇಷನ್ ನಡೆಸಿದ ಅಧ್ಯಯನದ ಪ್ರಕಾರ 1 ನಿಮಿಷ ಬಬಲ್ ಒಡೆದರೆ ಅದು ಒತ್ತಡದ ಮಟ್ಟವನ್ನು ಶೇ. 30 ನಿಮಿಷಗಳ ಮಸಾಜ್ ನಿಂದಾಗುವ ಒತ್ತಡ ನಿವಾರಣೆ ಒಂದು ನಿಮಿಷ ಬಬಲ್ ಒಡೆಯುವುದರಿಂದಾಗುತ್ತದೆ. ಮಾತ್ರವಲ್ಲದೆ ಇದು ಮಾನಸಿಕ ಚಿಕಿತ್ಸೆಗೆ ಉತ್ತಮವಾಗಿದೆ.

ಪೇಪರ್ ಬಬಲ್ ಒಡೆಯುವವರಿಗೆ ಇಷ್ಟು ದಿನ ಇದರ ಬಗ್ಗೆ ಇಷ್ಟೊಂದು ವಿವರಣೆ ಗೊತ್ತಿಲ್ಲದೇ ಇರಬಹುದು. ಹಾಗಾಗಿ ಹೆಚ್ಚು ಹೆಚ್ಚು ಬಬಲ್ ಒಡೆಯಿರಿ ಒತ್ತಡ ಕಡಿಮೆ ಮಾಡಿ.

Leave a Reply

Your email address will not be published. Required fields are marked *